ಬೆಳಿಗ್ಗೆ ನಿಮ್ಮ ಕಾಲು ಮತ್ತು ತೋಳುಗಳಲ್ಲಿ ನೋವು ಕಾಣಿಸುತ್ತಿದಿಯಾ? ಕಾರಣ ತಿಳಿಸಿದರೆ ಶಾಕ್​ ಆಗ್ತೀರ!| Health Tips

untitled-design-70-68973e9c46d5b
Published on

Health Tips: ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ತೋಳು ಹಾಗೂ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದಿಯೇ? ಇದು ನಿಮ್ಮ ಆರೋಗ್ಯವನ್ನು ಎಚ್ಚರಿಸುತ್ತಿರಬಹುದು. ಜನರಉ ಇದನ್ನು ಅತಿಯಾದ ಆಯಾಸ ಹಾಗೂ ವಯಸ್ಸಾದ ಪರಿಣಾಮ ಎಂದು ತಿರಸ್ಕರಿಸುತ್ತಾರೆ. ಆದರೆ, ಇದು ಗಂಭೀರ ಅನಾರೋಗ್ಯದ ಆರಂಭಿಕ ಲಕ್ಷಣವೂ ಆಗಿರಬಹುದು.

ಬೆಳಿಗ್ಗೆ ತೋಳುಗಳು ಮತ್ತು ಕಾಲುಗಳಲ್ಲಿ ಹೆಚ್ಚಾದ ನೋವು ಬರುತ್ತಿದ್ದರೆ, ಕೀಲುಗಲ ಸಮಸ್ಯೆ, ವಿಟಮಿನ್ ಕೊರತೆ, ಥೈರಾಯ್ಡ್ ಸಮಸ್ಯೆಗಳು ಅಥವಾ ರಕ್ತಪರಿಚಲನಾ ಅಸ್ವಸ್ಥತೆಗಳ ಸಂಕೇತವಾಗಿರಬಹುದು. ಆದರಿಂಧ ಈ ಸಮಸ್ಯೆ ನಿಮ್ಮಲ್ಲಿ ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ ದಾರಿ..

* ಸಂಧಿವಾತ

ಬೆಳಿಗ್ಗೆ ಎದ್ದ ತಕ್ಷಣ ಕೀಲು ನೋವು ಸಂಧಿವಾತದ ಪ್ರಮುಖ ಲಕ್ಷಣಗಳಾಗಿದ್ದು, ಈ ಕಾಯಿಲೆಯಿಂದ ಬಳಲುತ್ತಿರುವವರಿಗೆ ಕೀಲುಗಳಲ್ಲಿ ಊತ ಉಂಟಾಗುತ್ತದೆ. ಇದು ಚಲಿಸುವಾಗ ತೀವ್ರವಾದ ನೋವನ್ನು ಉಂಟುಮಾಡುತ್ತದೆ.

* ವಿಟಮಿನ್ ಡಿ ಕ್ಯಾಲ್ಸಿಯಂ ಕೊರತೆ

ಮೂಳೆಗಳು ಹಾಗೂ ಸ್ನಾಯುಗಳನ್ನು ಬಲಪಡಿಸಲು ವಿಟಮಿನ್​ ಡಿ ಮತ್ತು ಕ್ಯಾಲ್ಸಿಯಂ ಅತೀ ಅವಶ್ಯಕವಾಗಿರುತ್ತದೆ. ಅವುಗಳ ಕೊರತೆಯಿಂದ ಮೂಳೆಗಳು ದುರ್ಬಲವಾಗುತ್ತವೆ. ಆದರಿಂದ ಬೆಳಿಗ್ಗೆ ಎದ್ದ ತಕ್ಷಣ ಕೀಲು ಗಳ ನೋವು ಸಂಭವಿಸುತ್ತದೆ.

* ಥೈರಾಯ್ಡ್ ಸಮಸ್ಯೆಗಳು

ನಿಮ್ಮ ದೇಹದಲ್ಲಿ ಥೈರಾಡ್​ ಸಮಸ್ಯೆಗಳು ಉಲ್ಬಣವಾಗಿದ್ದರೆ, ನಿಮಗೆ ಸ್ನಾಯು ನೋವು, ಮತ್ತು ಊತ ಉಂಟಾಗಬಹುದು. ಇದು ಬೆಳಿಗ್ಗೆ ಎದ್ದ ತಕ್ಷಣ ಈ ಸಮಸ್ಯೆ ಗೋಚರಿಸುತ್ತದೆ.

* ರಕ್ತ ಪರಿಚಲನೆ ಸಮಸ್ಯೆಗಳು

ರಕ್ತದಲ್ಲಿ ಕಲುಷಿತ ರಕ್ತ ಸೇರ್ಪಡುವುದರಿಂದ ಕೈ-ಕಾಲುಗಳು ಮರಗಟ್ಟುವುದು, ಜುಮ್ಮೆನಿಸುವುದು ಅಥವಾ ನೋವಿನಂತಹ ಸಮಸ್ಯೆಗಳನ್ನು ಉಂಟುಮಾಡುತ್ತವೆ.

ಪರಿಹಾರ ಕ್ರಮ

* ನೀವು ಸೇವಿಸುವ ಆಹಾರದಲ್ಲಿ ಸಮತೋಲಿತ ಆಹಾರವನ್ನು ಸೇವಿಸಿ

* ವಿಟಮಿನ್​ ಡಿ, ಕ್ಯಾಲ್ಸಿಯಂ, ಪ್ರೊಟೀನ್​ ಇರುವಂತಹ ಆಹಾರ ಸೇವನೆ

* ಬೆಳಗ್ಗೆ ಎದ್ದ ತಕ್ಷಣ ವ್ಯಾಯಾಮ, ಯೋಗ ಮಾಡಿ

* ದಿನಕ್ಕೆ 4-5 ಲೀಟರ್​ ನೀರನ್ನು ಕುಡಿಯಿರಿ

* ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿ

* ನಿಮ್ಮ ಕುತ್ತಿಗೆ ಹಾಗೂ ಬೆನ್ನಿಗೆ ಸರಿಯಾದ ದಿಂಬನ್ನು ಬಳಸಿ

(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net