ಚೆನ್ನಾಗಿ ನೆನಪಿಡಿ, ಮಾರುಕಟ್ಟೆಯಿಂದ ತಂದ ತಕ್ಷಣ ಮಾವಿನಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಇಡಲೇಬಾರದು. ಏಕೆಂದರೆ ಮಾವಿನಹಣ್ಣುಗಳು ನೈಸರ್ಗಿಕವಾಗಿ ಕೋಣೆಯ ಉಷ್ಣಾಂಶದಲ್ಲಿ (Room Temperature) ಚೆನ್ನಾಗಿ ಮಾಗುತ್ತವೆ ಮತ್ತು ಸವಿಯಾಗುತ್ತವೆ. ತಂದ ತಕ್ಷಣ ಫ್ರಿಡ್ಜ್‌ನಲ್ಲಿ ಇಟ್ಟರೆ, ಹಣ್ಣಾಗುವ ಪ್ರಕ್ರಿಯೆ ಅಲ್ಲಿಗೇ ನಿಂತುಬಿಡುತ್ತದೆ. ಅಷ್ಟೇ ಅಲ್ಲ, ಹಣ್ಣಿನ ನೈಸರ್ಗಿಕ ರುಚಿ ಮತ್ತು ಪರಿಮಳ ಸಂಪೂರ್ಣವಾಗಿ ಹೊರಟುಹೋಗುತ್ತದೆ.