ಸನ್‌ಸ್ಕ್ರೀನ್, ಸೀರಮ್‌ಗಳನ್ನು ಬಳಸುತ್ತೀರಾ? ಹಾಗಿದ್ರೆ ಕ್ಯಾನ್ಸರ್​​ ಬರಬಹುದು ಎಚ್ಚರ! Glow Skin

Glow Skin
Published on

Glow Skin | ನಮ್ಮ ಸ್ಕಿನ್​ ಗ್ಲೋ ಆಗಿ ಕಾಣಬೇಕೆಂದು ಮಹಿಳೆಯರು ಮಾಡುವ ಪ್ರಯತ್ನ ಒಂದೆರಡಲ್ಲ. ಪ್ರತಿನಿತ್ಯ ಮುಖಕ್ಕೆ ಹಲವಾರು ಕ್ರೀಮ್​ಗಳನ್ನು ಹಚ್ಚುವುದು, ಮನೆಮದ್ದು, ವಾರಕ್ಕೊಮ್ಮೆ ಪಾರ್ಲರ್​ಗೆ ಹೋಗೋದು ಸಾಮಾನ್ಯ. ಮಹಿಳೆಯರು ತಮ್ಮ ಮುಖದ ಕಾಂತಿಗಾಗಿ ಸಾಧ್ಯವಾದಷ್ಟು ಪ್ರಯತ್ನಿಸುತ್ತಾರೆ. ಆದರೆ ಈ ರೀತಿಯ ಅತಿಯಾದ ಆರೈಕೆಯೂ ನಿಮಗೆ ಅಪಾಯವನ್ನು ತರಬಹುದು. ಹೌದು ನಿಮ್ಮ ತ್ವಚೆಗಾಗಿ ಮಾಡುವ ಹೆಚ್ಚಿನ ಆರೈಕೆಯೂ ನಿಮಗೆ ಕ್ಯಾನ್ಸ್​ರ್​​ ತರಬಹುದು ಎಚ್ಚರ.

ಬೇಸಿಗೆಯಲ್ಲಿ ಉಷ್ಣತೆ ಜೊತೆಗ ತಾಪಮಾನವು ಹೆಚ್ಚುತ್ತಿದೆ ಇದರಿಂದಾಗಿ ಚರ್ಮದ ಕ್ಯಾನ್ಸರ್ ಅಪಾಯವೂ ಬರುತ್ತಿದೆ. ಆದರೆ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಇದನ್ನು ತಡೆಗಟ್ಟಬಹುದು. ಸೂರ್ಯನ ನೇರಳಾತೀತ ಕಿರಣಗಳ ಹೊರತಾಗಿಯೂ, ಇತರ ಅಂಶಗಳು ಚರ್ಮದ ಕ್ಯಾನ್ಸರ್ ತರಬಹುದು ಎಂದು ತಜ್ಞರು ತಿಳಿಸಿದ್ದಾರೆ.

ತಜ್ಞರ ಪ್ರಕಾರ, ಯುವಜನತೆಯು ದಿನನಿತ್ಯ ತಮ್ಮ ತ್ವಚೆಯ ಆರೈಕೆಗೆ ಹೆಚ್ಚು ಸಮಯ ಮೀಸಲಿರಿಸುತ್ತಾರೆ ಮತ್ತು ವಿದೇಶಿ ಸ್ಕಿನ್​ ಗ್ಲೊ ಉತ್ಪನ್ನಗಳನ್ನು ಬಳಸುತ್ತಾರೆ. ಅದರಲ್ಲಿಯೂ ಹೆಚ್ಚಾಗಿ ಕೊರಿಯನ್ನರು ಬಳಸುವ ಕ್ರಿಮ್​ಗಳು. ಪ್ರತಿದಿನ ಈ ರೀತಿಯ ತ್ವಚೆಯ ಆರೈಕೆಯೂ ಚರ್ಮದ ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಸನ್‌ಸ್ಕ್ರೀನ್, ಸೀರಮ್‌ಗಳು ಮತ್ತು ಸೌಂದರ್ಯ ಉತ್ಪನ್ನಗಳು ಸೂರ್ಯನ ವಿಕಿರಣದಿಂದ ರಕ್ಷಿಸುತ್ತವೆ. ತಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ ಎಂದು ಅನೇಕರು ನಂಬಿ ಅದನ್ನು ಅತೀಯಾಗಿ ಬಳಸಲು ಪ್ರಾರಂಭಿಸಿದ್ದಾರೆ. ಕೆಲವು ಕೆಮಿಕಲ್ಸ್​​ಗಳನ್ನು ಹೊಂದಿರುವ ತ್ವಚೆಯ ಆರೈಕೆ ಉತ್ಪನ್ನಗಳು ಇತರ ರೀತಿಯ ಕ್ಯಾನ್ಸರ್‌ಗೆ ಕಾರಣವಾಗಬಹುದು. ಅಲ್ಲದೆ, ವಿದೇಶಿ ಮಟ್ಟದಲ್ಲಿ ಉತ್ಪಾದಿಸುವ ಉತ್ಪನ್ನಗಳ ಬಳಕೆಯು ಭಾರತೀಯ ಚರ್ಮಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗದಿರಬಹುದು. ಅಮೆರಿಕದಲ್ಲಿ ತಯಾರಿಸಲಾದ ಪ್ರಸಿದ್ಧ ಸ್ಕಿನ್​ ಆರೈಕೆ ಉತ್ಪನ್ನವು ಪ್ಯಾರಾಬೆನ್‌ಗಳನ್ನು ಹೊಂದಿರುತ್ತದೆ. ಜೊತೆಗೆ ಇದು ಹಾರ್ಮೋನುಗಳನ್ನು ಅಪಾಯ ತರುವಂತಹ ಸಾಮರ್ಥ್ಯವನ್ನು ಹೊಂದಿದೆ, ಇದು ಸ್ತನ ಕ್ಯಾನ್ಸರ್‌ನಂತಹ ಹಾರ್ಮೋನ್-ಸಂಬಂಧಿತ ಕ್ಯಾನ್ಸರ್‌ಗಳಿಗೆ ಕಾರಣವಾಗಬಹುದು. ಜೊತೆಗೆ ಇದು ಲ್ಯುಕೇಮಿಯಾ ಮತ್ತು ಇತರ ಕಾಯಿಲೆಗಳಿಗೆ ಕಾರಣವಾಗಬಹುದು.

ಸನ್‌ಸ್ಕ್ರೀನ್‌ಗಳಲ್ಲಿ ಹೆಚ್ಚಾಗಿ ಕಂಡುಬರುವ ಸಾಮಾನ್ಯ ಅಂಶವಾದ ಆಕ್ಸಿಬೆನ್‌ಜೋನ್ ಇತರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಅತಿಯಾದ ನಿಮ್ಮ ಸೌಂದರ್ಯದ ಬಗ್ಗೆ ಕಾಳಜಿ ವಹಿಸುವುದು ನಿಮ್ಮ ಆರೋಗ್ಯ ಅಪಾಯವನ್ನೂ ತರಬಹುದು. ಅದಕ್ಕಾಗಿ ನೀವು ಬಳಸುವ ಸೌಂದರ್ಯವರ್ಧಕಗಳ ಮೇಲೆ ಎಚ್ಚರವಿರಲಿ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net