ಲೈಂಗಿಕ ಕ್ರಿಯೆಗೆ ಔಷಧಿ ತೆಗೆದುಕೊಳ್ಳುತ್ತೀರಾ? ಹಾಗಿದ್ದರೆ ಇದು ನಿಮ್ಮ ಆರೋಗ್ಯದ ಮೇಲೆ ಎಷ್ಟು ಅಪಾಯಕಾರಿ! | Health tips

untitled-design-2025-09-02t180125506-68b6e3a55ce1d
Published on

Health tips: ಇಂದಿನ ದಿನಗಳಲ್ಲಿ ಅನೇಕರು ಲೈಂಗಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಔಷಧಿಗಳ ಮೇಲೆ ಅವಲಂಬಿತರಾಗುವುದು ಸಾಮಾನ್ಯವಾಗಿದೆ. ಈ ಚಟುವಟಿಕೆಗಳನ್ನು ವೈದ್ಯರ ಸಲಹೆ ಇಲ್ಲದೆ ಮಾಡುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಈ ಔಷಧಿಗಳು ರಕ್ತನಾಳಗಳನ್ನು ವಿಸ್ತರಿಸಿ ರಕ್ತಪರಿಚಲನೆಯನ್ನು ಸುಧಾರಿಸುವುದರಿಂದ ಇವು ಎಲ್ಲರಿಗೂ ಸುರಕ್ಷಿತವಲ್ಲ.

ಈ ಔಷಧಿಗಳಿಂದಾಗುವ ಅಪಾಯಗಳು

* ಹೃದಯ ಸಂಬಂಧಿತ ಸಮಸ್ಯೆ

ಈ ಔಷಧಿಗಳನ್ನು ಸೇವಿಸುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡುತ್ತವೆ. ಹಾಗೆಯೇ ಇವು ಹೃದಯ ಸಮಸ್ಯೆ, ಅಧಿಕ ರಕ್ತದೊತ್ತಡ, ಅಥವಾ ನೈಟ್ರೇಟ್ ಔಷಧಿಗಳನ್ನು ತೆಗೆದುಕೊಳ್ಳುವವರಿಗೆ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತವೆ.

* ಅಡ್ಡ ಪರಿಣಾಮಗಳು

ಈ ಔಷಧಗಳನ್ನು ಸೇವಿಸುವುದರಿಂದ ತಲೆನೋವು, ಮುಖ ಕೆಂಪಾಗುವುದು, ಜೀರ್ಣಕ್ರಿಯೆ ಮೇಲೆ ಪರಿಣಾಮ, ದೃಷ್ಟಿ ಸಮಸ್ಯೆಗಳು ಉಂಟಾಗಬಹುದು.

* ಔಷಧಿಗಳ ಸಂಯೋಗ

ಕೆಲವೊಬ್ಬರು ಸೇವಿಸುವಂತಹ ಔಷಧಿಗೊಂದಿಗೆ ಈ ಔಷಧಿಗಳು ಸಂಯೋಗ ಹೊಂದಿದಾಗ ಗಂಭೀರ ಸಮಸ್ಯೆಗಳು ಉಂಟಾಗುತ್ತವೆ. (ಉದಾಹರಣೆಗೆ ಬಿಪಿ ಮಾತ್ರೆ ಸೇವಿಸುವವರು) ಆದರಿಂದ ಈ ರೀತಿಯ ಔಷಧಿಗಳನ್ನು ಸೇವಿಸುವವರು ಮೊದಲು ವೈದ್ಯರ ಬಳಿ ಪರೀಕ್ಷಿಸಿ ನಂತರ ಸೇವನೆ ಮಾಡಿ.

* ಮಾನಸಿಕ ಅವಲಂಬನೆ

ಈ ಔಷಧಿಗಳ ಮೇಲೆ ಯಾವುದೇ ವ್ಯಕ್ತಿಯು ಅವಲಂಬಿತವಾದರೆ ಅವನು ತನ್ನ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳಬಹುದು. ಆದರಿಂದ ಈ ಔಷಧಿಗಳನ್ನು ತಪ್ಪಿಸಿರಿ

ಔಷಧಿ ಸೇವನೆಯಿಂದ ಆರೋಗ್ಯದ ಮೇಲೆ ಬೀರುವ ಅಡ್ಡಪರಿಣಾಮಗಳು

* ತಲೆನೋವು

ಈ ಔಷಧಿಗಳನ್ನು ಸೇವಿಸುವುದರಿಂದ ಇವು ರಕ್ತನಾಳಗಳ ವಿಸ್ತರಣೆಯ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ ಇವುಗಳಿಂದ ತಲೆನೋವು ಸಾಮಾನ್ಯವಾಗಿ ಕಂಡುಬರುತ್ತದೆ.

* ಮುಖ ಕೆಂಪಾಗುವಿಕೆ

ಔಷಧಿಗಳನ್ನು ಸೇವಿಸುವುದರಿಂದ ರಕ್ತಪರಿಚಲನೆಯ ಹೆಚ್ಚಳದಿಂದ ಮುಖ ಕೆಂಪಾಗುವುದು, ಮುಖದಲ್ಲಿ ಉರಿಯ ಭಾವನೆ, ಹಾಗೇ ಮುಖದ ಮೇಲೆ ಕೆಂಪು ಗುರುತುಗಳು ಉಂಟಾಗುತ್ತದೆ.

* ಜೀರ್ಣಕ್ರಿಯೆ ತೊಂದರೆ

ಲೈಂಗಿಕ ಕ್ರಿಯೆಯ ಔಷಧಿಗಳನ್ನು ಸೇವಿಸುವುದರಿಂದ ಹೊಟ್ಟೆಯ ಅಸ್ವಸ್ಥತೆ, ಗ್ಯಾಸ್ಟಿಕ್​, ಹಾಗೂ ಜೀರ್ಣಕ್ರಿಯೆಯ ಸಮಸ್ಯೆಗಳು ಕಂಡುಬರುತ್ತವೆ.

* ದೃಷ್ಟಿ ಸಮಸ್ಯೆ

ಈ ಔಷಧಿಯಿಂದ ವ್ಯಕ್ತಿಯು ತಾತ್ಕಾಲಿಕವಾಗಿ ತನ್ನ ದೃಷ್ಟಿಯಲ್ಲಿ ಸಮಸ್ಯೆಗಳನ್ನು ಅನುಭವಿಸಬಹುದು. ಇಲ್ಲಿ ವ್ಯಕ್ತಿಯು ಮಸುಕಾದ ದೃಷ್ಟಿ, ಬಣ್ಣಗಳ ವ್ಯತ್ಯಾಸ ಅಥವಾ ಬೆಳಕಿನ ಸಂವೇದನೆ ಉಂಟಾಗುತ್ತದೆ.

* ಮೂಗು ಕಟ್ಟಿಕೊಳ್ಳುವಿಕೆ

ರಕ್ತನಾಳಗಳ ವಿಸ್ತರಣೆಯ ಮೇಲೆ ಪರಿಣಾಮ ಬೀರುವುದರಿಂದ ಮೂಗು ಕಟ್ಟಿಕೊಳ್ಳುವುದು ಸಾಮಾನ್ಯವಾಗಿ ಕಂಡುಬರುತ್ತದೆ.

ಸುರಕ್ಷಿತ ಬಳಕೆ

ಈ ಔಷಧಗಳನ್ನು ಬಳಸುವವರು ವೈದ್ಯರ ಸಲಹೆಗಳಿಲ್ಲದೆ ಬಳಸಬೇಡಿ. ಆರೋಗ್ಯಇತಿಹಾಸ, ರಕ್ತದೊತ್ತಡ, ಇತರ ಸಮಸ್ಯೆಗಳಿಂದ ಬಳಲುತ್ತಿರುವವರು ಔಷಧಿಗಳ ಬಗ್ಗೆ ವೈದ್ಯರೊಂದಿಗೆ ಚರ್ಚಿಸಿ ಸೇವಿಸಿ. ಇನ್ನು ಆರೋಗ್ಯಕರ ಜೀವನಶೈಲಿಯಲ್ಲಿ ವ್ಯಾಯಾಮ, ಸಮತೋಲನ ಆಹಾರ, ಮತ್ತು ಒತ್ತಡ ನಿರ್ವಹಣೆ ಮಾಡಿಕೊಳ್ಳುವುದರಿಂದ ಲೈಂಗಿಕ ಆರೋಗ್ಯವನ್ನು ಸುಧಾರಿಸಬಹುದು ಇದು ಔಷಧಿಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net