

Winter season: ಚಳಿಗಾಲ ಬಂತೆಂದರೆ ಸಾಕು ಹಲವಾರು ಜನರು ತಲೆನೋವನ್ನು ಅನುಭವಿಸುತ್ತಾರೆ. ಎದ್ದ ತಕ್ಷಣ ಜನರು ಬಿಸಿನೀರಿನ ಸ್ನಾನ ಮಾಡಲು ಪ್ರಾರಂಭಿಸುತ್ತಾರೆ. ಈ ಪ್ರಕ್ರಿಯೆ ದೇಹಕ್ಕೆ ಆರಾಮ ಎನ್ನಿಸಬಹದು ಆದರೆ, ಮೌನವಾಗಿಯೇ ಇದು ನಿಮಗೆ ಅಪಾಯ ಮಾಡಲು ಪ್ರಾರಂಭಿಸುತ್ತದೆ. ತಜ್ಞರ ಪ್ರಕಾರ, ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ದೇಹಕ್ಕೆ ಬಹು ಹಾನಿ. ಅಂದರೆ ಚರ್ಮ, ಹೃದಯದಲ್ಲಿ ಸಮಸ್ಯೆ ಉಂಟಾಗುತ್ತದೆ ಎಂದು ಸೂಚಿಸಿದ್ದಾರೆ.
ಹೆಚ್ಚಿನ ಜನರು ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡುತ್ತಾರೆ. ಅಧ್ಯಯನಗಳ ಪ್ರಕಾರ ಹೀಗೆ ಮಾಡುವುದರಿಂದ ಪುರುಷರಲ್ಲಿ ವೀರ್ಯ ಉತ್ಪಾದನೆ ಕಡಿಮೆಯಾಗುತ್ತದೆ ಎಂದು ತಿಳಿದುಬಂದಿದೆ. ಬಿಸಿನೀರಿನ ಹೆಚ್ಚಿನ ಉಷ್ಣತೆಯು ವೃಷಣಗಳ ಕಾರ್ಯನಿರ್ವಹಣೆಯನ್ನು ಕಡಿಮೆ ಮಾಡಿ ಮಕ್ಕಳನ್ನು ಪಡೆಯುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಆದರಿಂದ ಪುರುಷರು ಯಾವಾಗಲು ಜವಬ್ದಾರಿಯಿಂದ ಇದ್ದು, ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಬೇಕು.
ವೈದ್ಯರು ಸೂಚಿಸುವ ಪ್ರಕಾರ, ಚಳಿಗಾಲದಲ್ಲಿ ತುಂಬಾ ಬಿಸಿ ಇರುವಂತಹ ನೀರಿನಲ್ಲಿ ಸ್ನಾನ ಮಾಡುವುದರಿಂದ ದೇಹದಲ್ಲಿ ಹಠಾತ್ ರಕ್ತದೊತ್ತಡ ಉಂಟಾಗುತ್ತದೆ. ಇದು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಿ ಹೃದಯಘಾತಕ್ಕೆ ಕಾರಣವಾಗಬಹುದು. ಆದರಿಂದ ಹೃದಯದ ಸಮಸ್ಯೆ ಇರುವಂತಹವರು ಈ ಬಗ್ಗೆ ಗಮನ ಹರಿಸಬೇಕು.
ಬಿಸಿ ನೀರು ಚರ್ಮದ ನೈಸರ್ಗಿಕ ಎಣ್ಣೆ ಮತ್ತು ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದರಿಂದ ಚರ್ಮವು ಒಣಗುವುದು, ತುರಿಕೆ, ಬಿರುಕು ಮೂಡುವುದು ಹಾಗೆಯೇ ಕಾಂತಿಯನ್ನು ಕಳೆದುಕೊಳ್ಳುವಂತಹ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹಾಗಾಗಿ ಅನಗತ್ಯ ಬಿಸಿ ನೀರಿನ ಬಳಕೆ ಬದಲು ಬೆಚ್ಚಗಿನ ನೀರನ್ನು ಬಳಸಿರಿ.
ತಣ್ಣೀರಿನಲ್ಲಿ ಸ್ನಾನ ಮಾಡುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ರಕ್ತ ಪರಿಚಲನೆಯನ್ನು ಸುಧಾರಿಸಿ ಒತ್ತಡ ನಿರ್ವಹಣೆ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ನಿದ್ರೆ ಗುಣಮಟ್ಟದಲ್ಲಿ ಸುಧಾರಣೆ ತರುತ್ತದೆ.
ಕೆಲವೊಮ್ಮೆ ಬಿಸಿನೀರನ್ನು ಬಳಸುವುದರಿಂದ ಕೊಠಡಿ ಅಥವಾ ಸ್ನಾನಗೃಹದಲ್ಲಿ ಸ್ವಲ್ಪ ಕೆಟ್ಟ ವಾಸನೆ ಬರಬಹುದು. ಈ ಸಮಯದಲ್ಲಿ ಒಂದು ಸಣ್ಣ ಸ್ಪಟಿಕದ ತುಂಡನ್ನು ಹಾಕುವುದರಿಂದ ಇದು ಗಾಳಿಯನ್ನು ಶುದ್ಧೀಕರಿಸಿ ವಾಸನೆಯನ್ನು ಹೀರಿಕೊಳ್ಳುವಂತೆ ಮಾಡುತ್ತದೆ. (ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.