ಪ್ರತಿದಿನ ಮೊಬೈಲ್​ ಪಕ್ಕಕ್ಕಿಟ್ಟು ಮಲಗುತ್ತೀರಾ? ಹಾಗಿದ್ದರೆ, ಇಂದಿನಿಂದಲೇ ಈ ಅಭ್ಯಾಸ ತಪ್ಪಿಸಿ ಇಲ್ಲದಿದ್ದರೆ ಈ ಸಮಸ್ಯೆಗಳನ್ನು ಅನುಭವಿಸುತ್ತೀರಿ! | Mobile

untitled-design-2025-09-03t164150514-68b8227fd807f
Published on

Mobile: ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬರೂ ಮೊಬೈಲ್​ ಮೇಲೆ ಅವಲಂಬಿತರಾಗಿರುತ್ತಾರೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಮೊಬೈಲ್ ಕೈಯಲ್ಲಿ ಇರಲೇಬೇಕು. ಇನ್ನು ಕಿರಿಯರಾಗಿರಲಿ ಅಥವಾ ಹಿರಿಯರಾಗಿರಲಿ ಮೊಬೈಲ್​ ಬಿಟ್ಟು ಇರುವುದಕ್ಕೆ ಇಷ್ಟ ಪಡುವುದಿಲ್ಲ. ಇದೇ ರೀತಿ ಬಹಳಷ್ಟು ಮಂದಿ ಫೋನ್​ ಪಕ್ಕಕಿಟ್ಟುಕೊಂಡೇ ಮಲಗುವುದನ್ನು ರೂಢಿ ಮಾಡಿಕೊಂಡು ಬಿಟ್ಟಿದ್ದಾರೆ. ಆದರೆ, ಈ ಅಭ್ಯಾಸಗಳು ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರೋದಂತೂ ಗ್ಯಾರಂಟಿಯಾಗಿರುತ್ತದೆ. ಹಾಗಾಗಿ ನೀವು ಈ ಅಭ್ಯಾಸವನ್ನು ಆದಷ್ಟು ಕಡಿಮೆ ಮಾಡುವುದು ಉತ್ತಮ.

* ಮೊಬೈಲ್​ಗಳಿಂದ ನಿದ್ರೆಯ ಮೇಲೆ ಪರಿಣಾಮ

ಸ್ಮಾರ್ಟ್​ಫೋನ್​ಗಳಿಂದ ಹೊರಸೂಸುವ ನೀಲಿ ಬೆಳಕು ನಿದ್ರೆಯನ್ನು ನಿಯಂತ್ರಿಸುವ ಹಾರ್ಮೋನ್​ ಆದ ಮೆಲಟೋನಿನ್ ಉತ್ಪಾದನೆಯನ್ನು ತಡೆಯುತ್ತದೆ. ಇದರಿಂದ ರಾತ್ರಿ ಮಲಗುವ ವೇಳೆ ಮೊಬೈಲ್​​ ನೋಡುವುದರಿಂದ ನಿದ್ರೆಗೆ ಅಡ್ಡಿ ಪಡಿಸುತ್ತದೆ. ಇದು ನಿದ್ರೆಯ ಗುಣಮಟ್ಟವನ್ನು ಕಡಿಮೆ ಮಾಡಿ ಆಗ್ಗಾಗೆ ಎಚ್ಚರಗೊಳಿಸಬಹುದು. ಇನ್ನು ಇದು ದೀರ್ಘಕಾಲದ ಆಯಾಸ, ಒತ್ತಡ ಮತ್ತು ಏಕಾಗ್ರತೆಯನ್ನು ಕಡಿಮೆ ಮಾಡುತ್ತದೆ.

* ವಿದ್ಯುತ್ಕಾಂತೀಯ ವಿಕಿರಣ

ಮೊಬೈಲ್​ಗಳು ಕಡಿಮೆ ವಿದ್ಯುತ್ಕಾಂತೀಯ ಕಿರಣಗಳನ್ನು ಹೊಸಸೂಸುತ್ತವೆ. ಇದು ಯಾವ ವ್ಯಕ್ತಿ ದೀರ್ಘಕಾಲದವರೆಗೆ ಮೊಬೈಲ್​ ಮೇಲೆ ಅವಲಂಬಿತನಾಗಿರುತ್ತಾನೋ ಆತನಿಗೆ ತಲೆನೋವು, ಆರೋಗ್ಯದ ತೊಂದರೆಗಳು ಅಥವಾ ದೀರ್ಘಕಾಲೀನ ಸಮಸ್ಯೆಗಳಿಗೆ ಒಳಗಾಗುತ್ತಾನೆ. (ಆದರೆ ಇದು ಸಂಪೂರ್ಣವಾಗಿ ಸಾಬೀತಾಗಿಲ್ಲ)

* ಮಾನಸಿಕ ಆರೋಗ್ಯದ ಮೇಲೆ ಪರಿಣಾಮ

ರಾತ್ರಿ ಸಮಯದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಬರುವಂತಹ ಸುದ್ದಿ, ಸಂದೇಶಗಳು, ವಿಡಿಯೋಗಳು ಮೊಬೈಕ್​ ಬಳಕೆದಾರರಿಗೆ ಆತಂಕ, ಒತ್ತಡ, ಮತ್ತು ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು. ಇದು ಮನಸ್ಸನ್ನು ಘಾಸಿಗೊಳಿಸುವುದರಿಂದ ನಿದ್ರಿಸಲು ಕಷ್ಟವಾಗಬಹುದು.

ತಡೆಗಟ್ಟುವಿಕೆ

* ಮೊಬೈಲ್​ನಲ್ಲಿ ನೀಲಿ ಬೆಳಕನ್ನು ಕಡಿಮೆ ಮಾಡಿ, ಇಲ್ಲದಿದ್ದರೆ ನೈಟ್​ ಮೋಡ್​ ಬಳಸಿ. ಇದು ಆದಷ್ಟು ತೊಂದರೆಯನ್ನು ಕಡಿಮೆ ಮಾಡಬಹದು.

* ಮಲಗುವ ಮುನ್ನ ಕನಿಷ್ಟ 1 ಗಂಟೆ ಮುಂಚೆಯಿಂದಲೇ ಮೊಬೈಲ್​ ನೋಡುವುದನ್ನು ಕಡಿಮೆ ಮಾಡಿ. ನಿಮ್ಮಲ್ಲಿಂದ 3-4 ಅಡಿ ದೂರದಲ್ಲಿ ಮೊಬೈಲ್​ ಇಡಿ.

* ವಿಕಿರಣಗಳನ್ನು ಕಡಿಮೆ ಮಾಡಲು ನೀವು ಮಲಗುವ ವೇಳೆ ಏರೋಪ್ಲೇನ್​ ಮೋಡ್​ ಆನ್​​ ಮಾಡಿ.

* ಫೋನ್​ ಬದಲಿಗೆ ಪುಸ್ತಕ ಓದುವುದು, ಧ್ಯಾನ ಮಾಡುವುದನ್ನು ಮಾಡಿದಾಗ ನಿದ್ರೆ ಮಾಡಲು ಸಹಾಯವಾಗುತ್ತದೆ. (ಏಜೆನ್ಸೀಸ್​)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net