ನೀವು ಫ್ರೆಂಚ್​ ಫ್ರೈಸ್​ ಇಷ್ಟಪಟ್ಟು ತಿನ್ನುತ್ತೀರಾ? ಹಾಗಿದ್ದರೆ, ಮಧುಮೇಹ ಬರೋದಂತು ಗ್ಯಾರಂಟಿ! |French fries

untitled-design-84-689c36066b15e
Published on

French fries: ಫ್ರೆಂಚ್​ ಫ್ರೈಸ್​ ಅಂದರೆ ಯಾರಿಗಿಷ್ಟ ಇಲ್ಲ ಹೇಳಿ. ಕೆಲವೊಂದು ತಿನಿಸು ಅಂಗಡಿಗಳಲ್ಲಿ ಬೇಗನೆ ನಿಮ್ಮ ಟೇಬಲ್​ ಮೇಲೆ ಬರುವಂತಹ ಖಾದ್ಯ ಇದಾಗಿದೆ. ಇನ್ನು ಫ್ರೈ ಅನ್ನು ಆಲುಗಡ್ಡೆಯಿಂದ ತಯಾರಿಸಲಾಗಿರುತ್ತದೆ. ಈ ಖಾದ್ಯವನ್ನು ಅತೀ ಹೆಚ್ಚಾಗಿ ಸೇವಿಸುವುದರಿಂದ ಅನೇಕ ಕಾಯಿಲೆಗಳು ಸೇರಿದಂತೆ ಮಧುಮೇಹಕ್ಕೂ ತುತ್ತಾಗುವ ಅಪಾಯ ಜಾಸ್ತಿ ಇದೆ. ವಾರಕ್ಕೆ 2 ಬಾರಿಗಿಂತಲೂ ಹೆಚ್ಚು ತಿನ್ನುವುದರಿಂದ ಮಧುಮೇಹ-2 ಬರುವ ಸಾಧ್ಯತೆ ಹೆಚ್ಚಿದೆ.

ಪ್ರತಿಯೊಬ್ಬರು ಇಷ್ಟ ಪಡುವಂತಹ ಫ್ರೆಂಚ್​ ಫ್ರೈ ತಿನ್ನುವುದರ ಬಗ್ಗೆ ಹೊಸ ಅಧ್ಯಾಯನಗಳು ಮಾಡಲ್ಪಟ್ಟಿವೆ. ಇನ್ನು ಬ್ರಿಟಿಷ್​ ಮೆಡಿಕಲ್​ ಜರ್ನಲ್​ ತನ್ನ ಸಂಶೋಧನೆಯಲ್ಲಿ ಬೇಯಿಸಿದ ಅಥವಾ ಕರಿದ ಆಲುಗಡ್ಡೆಯನ್ನು ಸೇವಿಸುವುದರಿಂದ ಯಾವುದೇ ತೊಂದರೆ ಇಲ್ಲ ಎಂದು ಧೃಢಪಡಿಸಿದೆ. ಇನ್ನು ಹಾರ್ವರ್ಡ್ ಹಾಗೂ ಕೆಂಬ್ರಿಡ್ಜ್​ ವಿಶ್ವವಿದ್ಯಾಲಯದ ಪ್ರಕಾರ 40 ವರ್ಷ ಮೇಲ್ಪಟ್ಟ 2 ಲಕ್ಷ ಜನರನ್ನು ಸಂಪರ್ಕಿಸಿ ಡೇಟಾ ಸಂಸ್ಕರಣೆ ಮಾಡಿದ್ದು, ಅದರಲ್ಲಿ 22,300 ಜನರು ಹೃದ್ರೋಗ, ಕ್ಯಾನ್ಸರ್​ ಮಧುಮೇಹ ಹೊಂದಿರುವವರು 40 ವರ್ಷ ಮೇಲ್ಪಟ್ಟವರೇ ಜಾಸ್ತಿ ಎಂದು ವರದಿ ತಿಳಿಸಿದೆ.

ಇನ್ನು ವರದಿಗಳನ್ನು ಗಮನಿಸಿದಾಗ ವಾರಕ್ಕೆ 2 ರಿಂದ ಹೆಚ್ಚು ಬಾರಿ ಫ್ರೆಂಚ್​ ಫ್ರೈ ತಿನ್ನುವರಲ್ಲಿ ಮಧುಮೇಹ ಕಂಡುಬಂದಿದೆ. ಬೇಯಿಸಿದ ಆಲುಗಡ್ಡೆಯನ್ನು ಸೇವಿಸುವುದರಿಂದ ಮಧುಮೇಹ ಬರುವುದಿಲ್ಲ. ಆಲುಗಡ್ಡೆಯನ್ನು ಧಾನ್ಯದೊಂದಿಗೆ ಬೆರಸಿದಾಗ ಮಧುಮೇಹ ಬರುವ ಸಾಧ್ಯತೆಗಳಿಲ್ಲ. ಇನ್ನು ಅನ್ನದ ಜೊತೆ ಆಲುಗಡ್ಡೆಯನ್ನು ಸೇವಿಸುವುದರಿಂದ ಕಾಯಿಲೆ ಬರಬಹುದು. ಇದರಲ್ಲಿ ವಿಟಮಿನ್​ ಸಿ, ಮೆಗ್ನೇಶಿಯಂ, ಫೈಬರ್​ನಂತಹ ಖನಿಜಗಳು ಜಾಸ್ತಿ ಇರುತ್ತವೆ ಹಾಗಾಗಿ ಹೆಚ್ಚು ಪಿಷ್ಟವನ್ನು ಹೊಂದಿರುತ್ತದೆ ಇದರಿಂದ ಮಧುಮೇಹ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರಿಂದ ಫ್ರೆಂಚ್​ ಫ್ರೈಗಳನ್ನು ಆದಷ್ಟು ಕಡಿಮೆ ತಿನ್ನುವುದನ್ನು ಪ್ರಯತ್ನಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net