ನೀವು ಪ್ರತಿದಿನ 2 ಮೊಟ್ಟೆಗಳನ್ನು ತಿಂದರೆ ಏನಾಗುತ್ತದೆ ಗೊತ್ತಾ? ಲಾಭವೋ, ನಷ್ಟವೋ; Eggs

Egg
Published on

Eggs| ಬಹುತೇಕ ಜನರು ತಾವು ಹೊರಗಿನವರಿಗೆ ಹಾಗೂ ತಮಗೆ ತಾವು ಫಿಟ್​ ಆಗಿ ಹಾಗೂ ಆರೋಗ್ಯವಾಗಿ ಕಾಣಲು ಆಹಾರ ಕ್ರಮದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಅಂದಹಾಗೆ ಬಹುತೇಕ ಜನರು ತಮ್ಮ ನಿತ್ಯದ ಆಹಾರದ ಜೊತೆಗೆ ಪ್ರತಿದಿನ ಮೊಟ್ಟೆಯನ್ನು ಸೇವಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಹಾಗಾದರೆ ಪ್ರತಿನಿತ್ಯ 2 ಮೊಟ್ಟೆಗಳನ್ನು ತಿನ್ನುವುದರಿಂದ ಆಗುವ ಪ್ರಯೋಜನವೇನು ಎಂಬುದನ್ನು ತಿಳಿಯೋಣ.

ಮೊಟ್ಟೆಯಿಂದಾಗುವ ಪ್ರಯೋಜನಗಳು:

ಮೊಟ್ಟೆಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ. ಇದರಲ್ಲಿ ಸಾಕಷ್ಟು ಪ್ರೋಟೀನ್ ಮತ್ತು ವಿಟಮಿನ್ ಗಳಿವೆ. ನೀವು ಪ್ರತಿದಿನ 2 ಮೊಟ್ಟೆಗಳನ್ನು ತಿಂದರೆ, ನಿಮ್ಮ ದೇಹವು ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯುತ್ತದೆ ಎಂದು ಹೇಳಲಾಗಿದೆ. ನೀವು ಪ್ರತಿದಿನ 2 ಮೊಟ್ಟೆಗಳನ್ನು ತಿಂದರೆ, ದಿನವಿಡೀ ಬಲಶಾಲಿಯಾಗಿರುತ್ತೀರಿ. ಮೊಟ್ಟೆಗಳನ್ನು ಪ್ರೋಟೀನ್‌ನ ಪ್ರಮುಖ ಮೂಲವೆಂದು ಪರಿಗಣಿಸಲಾಗುತ್ತೆ. ಪ್ರಪಂಚದಾದ್ಯಂತ ಸಾಕಷ್ಟು ಜನರು ಪ್ರತಿದಿನ ಮೊಟ್ಟೆಗಳನ್ನು ತಿನ್ನುವ ಅಭ್ಯಾಸವನ್ನು ಹೊಂದಿದ್ದಾರೆ. ಮೊಟ್ಟೆಗಳು ಆರೋಗ್ಯಕರ, ಪೌಷ್ಟಿಕ ಮತ್ತು ಬೇಗನೆ ಬೇಯಿಸಬಹುದಾದ ಆಹಾರವಾಗಿದೆ.

ಮೊಟ್ಟೆಗಳು ಪ್ರೋಟೀನ್‌ನಿಂದ ತುಂಬಿರುತ್ತವೆ ಮತ್ತು ವಿಟಮಿನ್ ಬಿ 12 ನಲ್ಲಿ ಸಹ ಸೇರಿರುತ್ತದೆ. ಒಂದು ಮೊಟ್ಟೆಯಲ್ಲಿ 70 ಕ್ಯಾಲೋರಿಗಳು, 6 ಗ್ರಾಂ ಪ್ರೋಟೀನ್, 5 ಗ್ರಾಂ ಉತ್ತಮ ಕೊಬ್ಬು ಮತ್ತು ವಿಟಮಿನ್ ಎ, ವಿಟಮಿನ್ ಡಿ, ರಿಬೋಫ್ಲಾವಿನ್, ಫೋಲೇಟ್ ಹಾಗೂ ರಂಜಕದಂತಹ ಪೋಷಕಾಂಶಗಳು ಇರುವುದರಿಂದ, ಇದು ನಮ್ಮ ದೇಹದ ಪ್ರತಿಯೊಂದು ಭಾಗಕ್ಕೂ ಪ್ರಯೋಜನವನ್ನು ನೀಡುತ್ತದೆ.

Eggs

ನಿತ್ಯ 2 ಮೊಟ್ಟೆ ತಿಂದರೆ ಏನಾಗುತ್ತದೆ?

ನೀವು ಆರೋಗ್ಯವಾಗಿರಬೇಕೆಂದರೆ ಪ್ರತಿದಿನ ಎರಡು ಮೊಟ್ಟೆಗಳನ್ನು ತಿನ್ನಿ ಎಂದು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ.

ಹೆಚ್ಚಿನ ಪ್ರೋಟೀನ್:

ಪ್ರತಿದಿನ 2 ಮೊಟ್ಟೆಗಳನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯ ಪ್ರಮಾಣದ ಪ್ರೋಟೀನ್ ದೊರೆಯುತ್ತದೆ. ಒಂದು ಮೊಟ್ಟೆಯಲ್ಲಿ 6 ಗ್ರಾಂ ಪ್ರೋಟೀನ್ ಇರುತ್ತದೆ, ಅಂದರೆ ದೇಹಕ್ಕೆ 2 ಮೊಟ್ಟೆಗಳಿಂದ 12 ಗ್ರಾಂ ಪ್ರೋಟೀನ್ ಸಿಕ್ಕಿದಂತಾಗುತ್ತದೆ. ಈ ಹೆಚ್ಚುವರಿ ಪ್ರೋಟೀನ್‌ನಿಂದಾಗಿ ನೀವು ನಿಮ್ಮ ದೈನಂದಿನ ಚಟುವಟಿಕೆಗಳನ್ನು ಸರಿಯಾಗಿ ನಿರ್ವಹಿಸಬಹುದು ಮತ್ತು ನಿಮ್ಮ ಸ್ನಾಯುಗಳು ಮತ್ತು ದೇಹವು ಹೆಚ್ಚು ಪ್ರಯೋಜನ ಪಡೆಯುತ್ತದೆ.

ಮೂಳೆಗಳ ಶಕ್ತಿ:

ಪ್ರತಿದಿನ ಎರಡು ಮೊಟ್ಟೆಗಳನ್ನು ತಿನ್ನುವುದರಿಂದ, ಮೂಳೆಗಳು ಮತ್ತು ಸ್ನಾಯುಗಳಿಗೆ ಅಗತ್ಯವಾದ ಪೋಷಕಾಂಶಗಳೆಂದು ಪರಿಗಣಿಸಲಾದ ಸಾಕಷ್ಟು ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ 12 ನಿಮಗೆ ಸಿಗುತ್ತದೆ. ಮೊಟ್ಟೆಗಳು ನಿಮ್ಮ ದೇಹದಲ್ಲಿನ ವಿಟಮಿನ್ ಡಿ ಕೊರತೆಯನ್ನು ನೀಗಿಸುತ್ತವೆ, ಇದು ನಿಮ್ಮ ಹಲ್ಲುಗಳನ್ನು ಬಲಪಡಿಸುತ್ತದೆ.

ಆರೋಗ್ಯಕರ ಹೃದಯ:

ತಜ್ಞರ ಪ್ರಕಾರ ಮೊಟ್ಟೆಗಳು ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಪ್ರತಿದಿನ 2 ಮೊಟ್ಟೆಗಳನ್ನು ತಿನ್ನುವುದರಿಂದ ಹೃದಯ ಕಾಯಿಲೆಯಿಂದ ನಿಮ್ಮನ್ನು ರಕ್ಷಿಸುತ್ತದೆ. ಇದು ನಿಮ್ಮ ಹೃದಯವನ್ನು ಆರೋಗ್ಯಕರವಾಗಿ ಮತ್ತು ಸದೃಢವಾಗಿಡುತ್ತದೆ. ನಿಮ್ಮ ಹೃದಯವನ್ನು ಹಾನಿಕಾರಕ ಪರಿಣಾಮಗಳಿಂದ ರಕ್ಷಿಸುತ್ತದೆ.

ಮೆದುಳಿಗೆ ಪ್ರಯೋಜನಕಾರಿ:

ಮೊಟ್ಟೆಗಳು ಮೆದುಳಿನ ಬೆಳವಣಿಗೆ ಮತ್ತು ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ಪೋಷಕಾಂಶವನ್ನು ಹೊಂದಿರುತ್ತವೆ. ಪ್ರತಿದಿನ 2 ಮೊಟ್ಟೆಗಳನ್ನು ತಿನ್ನುವುದರಿಂದ ಬುದ್ಧಿವಂತಿಕೆ ಮತ್ತು ಜ್ಞಾನ ಹೆಚ್ಚಾಗುತ್ತದೆ ಎನ್ನಲಾಗಿದೆ.

ಕಣ್ಣಿಗೆ ಪ್ರಯೋಜನಕಾರಿ:

(ಏಜೆನ್ಸೀಸ್)

ಮೊಟ್ಟೆಗಳು ಜಿಯಾಕ್ಸಾಂಥಿನ್ ಮತ್ತು ಲುಟೀನ್ ಎಂಬ ಅಂಶಗಳನ್ನು ಹೊಂದಿರುತ್ತವೆ, ಇವುಗಳನ್ನು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳೆಂದು ಪರಿಗಣಿಸಲಾಗಿದೆ. ಮೊಟ್ಟೆಗಳನ್ನು ತಿನ್ನುವುದರಿಂದ ನಿಮ್ಮ ಕಣ್ಣುಗಳನ್ನು ಹಾನಿಕಾರಕ ನೀಲಿ ಬೆಳಕಿನಿಂದ ರಕ್ಷಿಸುತ್ತದೆ. ಹಾಗೂ ಕಣ್ಣಿನ ಪೊರೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net