ನೆಲದ ಮೇಲೆ ಮಲಗುವುದರಿಂದ ಆಗುವ ಲಾಭಗಳೇನು ಗೊತ್ತಾ?

Sleeping On The Floor
Published on

ಬೆಂಗಳೂರು: ಮೃದುವಾದ ಹಾಸಿಗೆ ಮತ್ತು ದಿಂಬು ಇಲ್ಲದಿದ್ದರೆ ನಿದ್ದೆಯೆ ಬರುವುದಿಲ್ಲ.ಸಾವಿರಾರು ರೂಪಾಯಿ ಕೊಟ್ಟು ಹಾಸಿಗೆ ಖರೀದಿಸಿ ಸುಖ ನಿದ್ದೆ ಮಾಡಬಹುದು ಎನ್ನುವುದು ಹಲವರ ವಾದ. ಆದರೆ ನೆಲದ ಮೇಲೆ ಮಲಗುವ ಪ್ರಯೋಜನಗಳು ಹೆಚ್ಚು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈಗ ನೆಲದ ಮೇಲೆ ಮಲಗುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ.

1) ನೆಲದ ಮೇಲೆ ಮಲಗುವುದು ನಿದ್ರೆಯ ಸಮಸ್ಯೆ ಇರುವವರಿಗೆ ಉತ್ತಮ ಫಲಿತಾಂಶವನ್ನು ನೀಡುತ್ತದೆ. ನಿಮ್ಮ ಮಲಗುವ ಭಂಗಿ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.

2) ದೇಹದಲ್ಲಿ ಹೆಚ್ಚಿನ ಶಾಖವು ಆರೋಗ್ಯಕ್ಕೆ ಒಳ್ಳೆಯದಲ್ಲ. ದೇಹದಲ್ಲಿ ಉಷ್ಣತೆ ಹೆಚ್ಚಾದರೆ ನಾನಾ ಸಮಸ್ಯೆಗಳು ಎದುರಾಗುತ್ತವೆ. ಹಾಸಿಗೆಯ ಮೇಲೆ ಮಲಗುವುದು ಈ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಹೀಗಾಗಿ ನೀವು ನೆಲಕ್ಕೆ ಚಾಪೆ ಹಾಕಿ ಅಥವಾ ಬರಿ ನೆಲದ ಮೇಲೆ ಮಲಗುವ ಅಭ್ಯಾಸ ಮಾಡಿಕೊಳ್ಳಿ.

3) ದೇಹದಲ್ಲಿ ಉಷ್ಣತೆ ಜಾಸ್ತಿಯಾದರೆ ಕಣ್ಣಲ್ಲಿ ನೀರು ಬರುವುದು, ಮೂಗಿನಿಂದ ಬಿಸಿ ಗಾಳಿ ಬರುವುದು, ಬಾತ್ ರೂಮ್ ಗೆ ಹೋಗಲು ಕಷ್ಟಪಡುವುದು ಮುಂತಾದ ಸಮಸ್ಯೆಗಳನ್ನುಎದುರಿಸಬೇಕಾಗುತ್ತದೆ. ಆದ್ದರಿಂದ ನೆಲದ ಮೇಲೆ ಮಲಗುವುದು ಈ ಸಮಸ್ಯೆಯನ್ನು ಕಡಿಮೆ ಮಾಡಲು ಉತ್ತಮ ಮಾರ್ಗವಾಗಿದೆ.

4) ಪ್ರಸ್ತುತ ಜೀವನಶೈಲಿಯಿಂದ ಅನೇಕ ಜನರು ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವುದರಿಂದ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ನೀವು ನೆಲದ ಮೇಲೆ ನೇರವಾಗಿ ಮಲಗಿದರೆ ನಿಮಗೆ ಈ ಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

5) ನೆಲದ ಮೇಳೆ ಮಲಗಿದರೆ ಬೆನ್ನು ಉಳಿಕುವ ಸಮಸ್ಯೆ ಕಡಿಮೆಯಾಗುತ್ತದೆ. ಹಾಸಿಗೆ ಕೆಲವೊಮ್ಮೆ ಗಟ್ಟಿಯಾಗಿ ಸ್ನಾಯುಗಳಿಗೆ ನೋವು ಉಂಟು ಮಾಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net