

ಬೆಂಗಳೂರು: ಚಪ್ಪಾಳೆ ತಟ್ಟುವುದು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಆದರೆ ಈ ಚಪ್ಪಾಳೆ ಹುರಿದುಂಬಿಸಲು ಮಾತ್ರವಲ್ಲದೆ ಆರೋಗ್ಯಕ್ಕೂ ಒಳ್ಳೆಯದು ಎನ್ನಲಾಗಿದೆ. ಅಭಿನಂದಿಸುವಾಗ ಅಥವಾ ಒಳ್ಳೆಯ ಮಾತುಗಳನ್ನು ಹೇಳುವಾಗ ಚಪ್ಪಾಳೆ ತಟ್ಟಲಾಗುತ್ತದೆ. ಭಾಷಣ, ಜೋಕ್ ಮಾಡಿದಾಗ, ಚಪ್ಪಾಳೆಗಳನ್ನು ಹುರಿದುಂಬಿಸಲು ಸಹ ಬಳಸಲಾಗುತ್ತದೆ. ಈ ರೀತಿ ಚಪ್ಪಾಳೆ ತಟ್ಟುವುದರಿಂದ ಆರೋಗ್ಯದ ಲಾಭವೂ ಇದೆ ಎಂಬುದು ನಿಮಗೆ ತಿಳಿದಿದೆಯೇ.
ದೇಹದ ಪ್ರತಿಯೊಂದು ಅಂಗವೂ ದೇಹದ ಇತರ ಭಾಗಗಳೊಂದಿಗೆ ಸಂಪರ್ಕ ಹೊಂದಿದೆ. ಕೈಯಲ್ಲಿರುವ ಸಣ್ಣ ನರಗಳು ಪ್ರಚೋದಿತವಾಗಿದ್ದರೆ, ದೇಹದ ಅಂಗಗಳು ಆರೋಗ್ಯಕರವಾಗಿರುತ್ತವೆ. ಈಗ ಚಪ್ಪಾಳೆ ತಟ್ಟುವುದರಿಂದ ಆಗುವ ಲಾಭಗಳೇನು ಎಂದು ತಿಳಿಯೋಣ.