ಮೊಟ್ಟೆಯ ಹಳದಿ ಭಾಗವನ್ನು ತಿನ್ನದೆ ಇರುವುದರಿಂದ ನೀವು ಎಷ್ಟೆಲ್ಲಾ ಪ್ರಯೋಜನಗಳನ್ನು ಕಳೆದುಕೊಳ್ಳುತ್ತೀದ್ದೀರಿ ಗೊತ್ತಾ| egg

Eggs
Published on

egg; ಮೊಟ್ಟೆಗಳನ್ನು ಪೋಷಕಾಂಶಗಳ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಇದು ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇದು ದೇಹಕ್ಕೆ ತುಂಬಾ ಪ್ರಯೋಜನಕಾರಿ. ನೀವು ಪ್ರತಿದಿನ ಒಂದು ಮೊಟ್ಟೆ ತಿನ್ನಲು ಪ್ರಾರಂಭಿಸಿದರೆ, ಅದು ನಿಮ್ಮ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇನ್ನೂ ಇದರಲ್ಲಿ ಮೊಟ್ಟೆಯ ಹಳದಿ ಭಾಗವನ್ನು ತಿನ್ನಬೇಕೇ ಅಥವಾ ಬೇಡವೇ ಎಂಬುದು ಅನೇಕರ ಪ್ರಶ್ನೆಯಾಗಿದೆ. ಅನೇಕ ಜನರು ಮೊಟ್ಟೆಯ ಹಳದಿ ಭಾಗವನ್ನು ಬಿಟ್ಟು ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ತಿನ್ನುತ್ತಾರೆ. ಇನ್ನೂ ಇತ್ತೀಚಿನ ವೈಜ್ಞಾನಿಕ ಪುರಾವೆಗಳೊಂದಿಗೆ ಮೊಟ್ಟೆಯ ಹಳದಿ ಭಾಗವು ನಮ್ಮ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯೋಣ.

ಮೊಟ್ಟೆಯ ಹಳದಿ ಲೋಳೆಯಲ್ಲಿ ಆಹಾರದ ಕೊಬ್ಬು ಅಧಿಕವಾಗಿದೆ. ಹಾಗಾಗಿ ಅಧಿಕ ಜನರು ಮೊಟ್ಟೆಯಲ್ಲಿರುವ ಕೊಬ್ಬಿನಾಂಶ ಹೃದಯ ಸಂಬಂಧಿ ಕಾಯಿಲೆಗೆ ಕಾರಣವಾಗಬಹುದು ಎಂದು ನಂಬಿದ್ದಾರೆ. ಅಂದಹಾಗೆ ಇತ್ತೀಚಿನ ವೈಜ್ಞಾನಿಕ ಸಂಶೋಧನೆಯು ಈ ವಿಷಯದ ಬಗ್ಗೆ ಹೊಸ ಸಂಗತಿಗಳನ್ನು ಬಹಿರಂಗಪಡಿಸಿದೆ. ಅದರ ಪ್ರಕಾರ ಹೆಚ್ಚಿನ ಆರೋಗ್ಯವಂತ ಜನರಲ್ಲಿ, ಮೊಟ್ಟೆಗಳಿಂದ ಪಡೆದ ಕೊಬ್ಬು ರಕ್ತದ ಕೊಲೆಸ್ಟ್ರಾಲ್ ಮಟ್ಟಗಳ ಮೇಲೆ ಗಮನಾರ್ಹ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗಿದೆ.

ಮೊಟ್ಟೆಯ ಬಿಳಿಭಾಗವು ಉತ್ತಮ ಗುಣಮಟ್ಟದ ಪ್ರೋಟೀನ್ ಅನ್ನು ಹೊಂದಿದ್ದರೂ, ಹಳದಿ ಲೋಳೆಯು ಇನ್ನೂ ಅಧಿಕ ಪೋಷಕಾಂಶಗಳನ್ನು ಹೊಂದಿರುತ್ತದೆ. ಮೊಟ್ಟೆಯ ಹಳದಿ ಭಾಗದಲ್ಲಿ ವಿಟಮಿನ್ A, D, E, ಮತ್ತು B12, ರೈಬೋಫ್ಲಾವಿನ್, ಫೋಲೇಟ್‌ನಂತಹ ಪೋಷಕಾಂಶಗಳಿವೆ. ಇವು ಕಣ್ಣಿನ ಆರೋಗ್ಯ, ಮೂಳೆಗಳ ಬಲ, ಮತ್ತು ರೋಗನಿರೋಧಕ ಶಕ್ತಿಗೆ ಸಹಾಯಕವಾಗಿವೆ. ಸರಳವಾಗಿ ಹೇಳುವುದಾದರೆ ನೀವು ಹಳದಿ ಲೋಳೆಯನ್ನು ಎಸೆದರೆ, ಅದು ಈ ಎಲ್ಲಾ ಅಮೂಲ್ಯ ಪೋಷಕಾಂಶಗಳನ್ನು ಕಸದ ಬುಟ್ಟಿಗೆ ಎಸೆದಂತೆ.

ಈ ಮೇಲೆ ಉಲ್ಲೇಖಿಸಲಾದ ಎಲ್ಲಾ ಮಾಹಿತಿಗಳನ್ನು ವಿವಿಧ ಮಾಧ್ಯಮಗಳು ಹಾಗೂ ವಿವಿಧ ಪಠ್ಯಗಳಿಂದ ಸಂಗ್ರಹಿಸಲಾಗಿದೆ.

(ಏಜೆನ್ಸೀಸ್)

ಒಟ್ಟಾರೆಯಾಗಿ ಕೇವಲ ಬಿಳಿ ಭಾಗದ ಮೊಟ್ಟೆಯನ್ನು ತಿನ್ನುವ ಬದಲು ಹಳದಿ ಲೋಳೆಯೊಂದಿಗೆ ಮೊಟ್ಟೆಗಳನ್ನು ತಿನ್ನುವುದು ಉತ್ತಮವಾಗಿದೆ. ಆದರೆ ಎಲ್ಲವನ್ನೂ ಸಹ ಮಿತವಾಗಿ ಸೇವಿಸಬೇಕು. ಆರೋಗ್ಯವಂತ ವಯಸ್ಕರು ಸಮತೋಲಿತ ಆಹಾರದ ಭಾಗವಾಗಿ ದಿನಕ್ಕೆ 1 ರಿಂದ 2 ಮೊಟ್ಟೆಗಳನ್ನು ತಿನ್ನಬಹುದು. ಈಗಾಗಲೇ ಮಧುಮೇಹ, ಅಧಿಕ ರಕ್ತದೊತ್ತಡ ಅಥವಾ ಹೆಚ್ಚಿನ ಕೊಲೆಸ್ಟ್ರಾಲ್‌ ಹೊಂದಿರುವವರು ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆಯನ್ನು ಪಡೆಯುವುದು ಉತ್ತಮ.

ಮೊಟ್ಟೆಯ ಹಳದಿ ಭಾಗದಲ್ಲಿರುವ ಕೋಲೀನ್ ಮೆದುಳಿನ ಕಾರ್ಯ, ಸ್ಮರಣಶಕ್ತಿ ಮತ್ತು ನರಮಂಡಲದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಇದು ಸಾಕಷ್ಟು ಪ್ರಯೋಜನವನ್ನು ನೀಡಲಿದೆ. ಇದರಲ್ಲಿರುವ ಅಮೈನೋ ಆಮ್ಲಗಳು ಟ್ರಿಪ್ಟೊಫಾನ್ ಮತ್ತು ಟೈರೋಸಿನ್ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಮೊಟ್ಟೆಯ ಹಳದಿ ಲೋಳೆಯಲ್ಲಿರುವ ಆರೋಗ್ಯಕರ ಕೊಬ್ಬುಗಳು ನಮ್ಮ ದೇಹವು ಕೊಬ್ಬಿನಲ್ಲಿ ಕರಗುವ ವಿಟಮಿನ್‌ಗಳಾದ ಎ, ಡಿ, ಇ ಮತ್ತು ಕೆ ಅನ್ನು ಸರಿಯಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net