ಬೇಸಿಗೆಯ ಸಮಯದಲ್ಲಿ ಫ್ರಿಡ್ಜ್​ಅನ್ನು 24 ಗಂಟೆ ಆನ್ ಮಾಡುತ್ತೀರಾ; ಹಾಗಾದ್ರೆ ಅದನ್ನು ಯಾವಾಗ ಆಫ್​ ಮಾಡಬೇಕು? Fridge

fridge
Published on

Fridge | ನೀವು ನಿಮ್ಮ ಮನೆಯಲ್ಲಿ ಬಳಸುವ ರೆಫ್ರಿಜರೇಟರ್ ಅನ್ನು ದಿನದ 24 ಗಂಟೆಗಳ ಕಾಲ ಆನ್‌ನಲ್ಲಿ ಇಡೋದ್ರಿಂದ ಇದರಿಂದ ಫ್ರಿಡ್ಜ್​ಗೆ ಏನಾದರೂ ಹಾನಿಯಾಗುತ್ತದೆಯೇ ಎಂಬ ಭಯ ಅನೇಕ ಜನರಲ್ಲಿ ಇರುತ್ತದೆ. ಹಾಗಿದ್ರೆ ಫ್ರಿಡ್ಜ್ಅನ್ನು 24 ಗಂಟೆಗಳ ಕಾಲ ಆನ್ ಮಾಡಿದರೆ ಏನಾಗುತ್ತದೆ, ಬದಲಿಗೆ ಅದನ್ನು ಯಾವಾಗ ಆಫ್​ ಮಾಡಬೇಕು ಎಂಬುದನ್ನು ತಿಳಿಯೋಣ.

ಈ ಬೇಸಿಗೆಯ ಸಂದರ್ಭದಲ್ಲಿ ಯಾವಾಗಲೂ ತಂಪಾದ ಗಾಳಿ ಮತ್ತು ತಂಪಾದ ನೀರು ಇದ್ದರೆ ಸಾಕು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ನಾವು ಹೊರಗಿನಿಂದ ಮನೆಗೆ ಬಂದಾಗ ತಣ್ಣೀರು ಸಿಗದಿದ್ದರೆ ನಿರಾಶೆಗೊಳ್ಳುತ್ತೇವೆ. ಇದಕ್ಕಾಗಿಯೇ ಈ ಸಮಯದಲ್ಲಿ ಮನೆಯಲ್ಲಿರುವ ತರಕಾರಿಗಳಿಂದ ಹಿಡಿದು ಹಣ್ಣುಗಳವರೆಗೆ ಎಲ್ಲವೂ ಬೇಗನೆ ಹಾಳಾಗಲು ಪ್ರಾರಂಭಿಸುತ್ತದೆ. ಈ ಪರಿಸ್ಥಿತಿಯಲ್ಲಿ ಹಾಲು, ಹಣ್ಣುಗಳು, ತರಕಾರಿಗಳು ಮತ್ತು ಉಳಿದ ಆಹಾರವನ್ನು ಫ್ರಿಡ್ಜ್‌ನಲ್ಲಿ ಇಡಬೇಕಾಗುತ್ತದೆ. ಫ್ರಿಡ್ಜ್ ಒಳಗೆ ತಾಪಮಾನ ಕಡಿಮೆ ಇರುವುದರಿಂದ ಸಾಮಾನುಗಳು ಕೆಡುವುದಿಲ್ಲ. ಫ್ರಿಡ್ಜ್ ಆಕಸ್ಮಿಕವಾಗಿ ಸ್ವಲ್ಪ ಸಮಯದವರೆಗೆ ಆಫ್ ಆದರೂ ಅದರಲ್ಲಿ ಇಟ್ಟಿರುವ ಎಲ್ಲಾ ವಸ್ತುಗಳು ಹಾಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಫ್ರಿಡ್ಜ್​ 24/7 ಚಾಲನೆಯಲ್ಲಿರಬೇಕಾ?

ಫ್ರಿಡ್ಜ್ಅನ್ನು ದಿನದ 24 ಗಂಟೆಗಳ ಕಾಲ ಬಳಸುವುದರಿಂದ ಮೋಟಾರ್ ಹಾನಿಯಾಗುತ್ತದೆ ಎಂದು ಕೆಲವರು ಭಾವಿಸಿರುತ್ತಾರೆ. ಆದರೆ ಅದು ಹಾಗಾಗುವುದಿಲ್ಲ. ಅನೇಕ ಆಧುನಿಕ ಫ್ರಿಡ್ಜ್‌ಗಳು ಮಾರುಕಟ್ಟೆಗೆ ಬಂದಿವೆ, ಇವುಗಳನ್ನು ವಿಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಈ ರೆಫ್ರಿಜರೇಟರ್ ಅತ್ಯುತ್ತಮ ತಾಪಮಾನವನ್ನು ಕಾಯ್ದುಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ನೀವು ಪ್ರತಿದಿನ ರೆಫ್ರಿಜರೇಟರ್ ಅನ್ನು ಆಫ್ ಮಾಡುವ ಅಗತ್ಯವಿರುವುದಿಲ್ಲ.

ಫ್ರಿಡ್ಜ್ ಅನ್ನು ಯಾವಾಗ ಆಫ್ ಮಾಡಬೇಕು?

(ಏಜೆನ್ಸೀಸ್)

ನೀವು ವರ್ಷಕ್ಕೊಮ್ಮೆಯಾದರೂ ನಿಮ್ಮ ಫ್ರಿಡ್ಜ್ ಅನ್ನು ಆಫ್ ಮಾಡದಿದ್ದರೂ, ನಿಮ್ಮ ಫ್ರಿಡ್ಜ್ ಮೇಲೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ನಿಮ್ಮ ಫ್ರಿಡ್ಜ್‌ನ್ನು ಸ್ವಚ್ಛಗೊಳಿಸಬೇಕಾದಾಗ ಮಾತ್ರ ಅದನ್ನು ಆಫ್ ಮಾಡಿದರೆ ಸಾಕು. ಇದು ಅಪಘಾತಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಫ್ರಿಡ್ಜ್ ನಿರಂತರವಾಗಿ ಚಾಲನೆಯಲ್ಲಿ ಇಡುವುದರಿಂದ ಮೋಟಾರ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇಂದಿನ ಆಧುನಿಕ ಫ್ರಿಡ್ಜ್‌ಗಳು ತಾಪಮಾನವನ್ನು ಕಾಪಾಡಿಕೊಳ್ಳಲು ತಮ್ಮಷ್ಟಕ್ಕೆ ತಾವೇ ಆನ್ ಮತ್ತು ಆಫ್ ಆಗುವ ತಂತ್ರಜ್ಞಾನ ಹೊಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net