Tea Cigerette: ಈಗಿನ ಕಾಲಘಟ್ಟದಲ್ಲಿ ಬಹುತೇಕ ಮಂದಿ ಬೆಳಗ್ಗೆ ಎದ್ದ ಕೂಡಲೇ ಟೀ ಜೊತೆ ಒಂದು ಸಿಗರೇಟ್ ಸೇದುವ ದುಶ್ಚಟಕ್ಕೆ ದಾಸರಾಗಿದ್ದಾರೆ. ನಿದ್ರೆಯಿಂದ ಎದ್ದಾಗ, ಕೆಲಸಕ್ಕೆ ಹೋಗುವಾಗ, ಹೋದ ಬಳಿಕ ಮತ್ತು ಯಾವುದೋ ಕಾರಣಕ್ಕೆ ಟೆನ್ಶನ್ ಎಂಬ ನೆಪ ಹೇಳಿ ಅದಕ್ಕೊಂದು ಧಮ್, ಹೀಗೆ ಸುಖಾಸುಮ್ಮನೆ ಒಂದಲ್ಲ ಒಂದು ಕಾರಣಕ್ಕೆ ಸಿಗರೇಟ್ ಸೇದುವ ಜನರು, ಟೀ ಮತ್ತು ಕಾಫಿ ಜೊತೆಯಲ್ಲಿ ಹೊಗೆ ಬೀಡುವ ಚಾಳಿಯನ್ನು ರೂಢಿಸಿಕೊಂಡಿದ್ದಾರೆ. ಇದು ಮೇಲ್ನೋಟಕ್ಕೆ ಏನು ಸಮಸ್ಯೆಯಿಲ್ಲ ಎಂದು ಅನಿಸಿದರೂ, ಸ್ಲೋ ಪಾಯ್ಸನ್ನಂತೆ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂಬುದು ಇನ್ನೂ ಅನೇಕರಿಗೆ ತಿಳಿದಿಲ್ಲ.