

ವರುಷವೊಂದು ಉರುಳಿ ಕ್ಯಾಲೆಂಡರ್ ಹಳೆಯದಾಗುತ್ತಿದ್ದಂತೆ, ಹೊಸ ವರ್ಷದ ಸಂಕಲ್ಪಗಳು ಗರಿಗೆದರುತ್ತವೆ. ಪ್ರತಿಯೊಬ್ಬರೂ ಒಂದಿಲ್ಲೊಂದು ಸಂಕಲ್ಪ ಮಾಡುತ್ತಾರೆ. ಅದನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲವರು ಪ್ರಯತ್ನ ಮಾಡಿದರೆ ಇನ್ನು ಕೆಲವರು ಮರೆತು ಬಿಡುತ್ತಾರೆ. ಆರೋಗ್ಯದ ವಿಚಾರದಲ್ಲಿ ಮಾಡುವ ಸಂಕಲ್ಪ ಮರೆಯುವಂತಿಲ್ಲ. ಅದನ್ನು ಮರೆತರೆ ಆರೋಗ್ಯ ಕೈ ಕೊಡುವುದು ಗ್ಯಾರೆಂಟಿ.
2020ರ ಹೊಸಿಲಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸಂಕಲ್ಪ ಮಾಡುವ ಇಚ್ಛೆ ಏನಾದರೂ ಇದೆಯೇ? ಹಾಗಿದ್ದರೆ ಅನೇಕ ಟಿಪ್ಸ್ಗಳು ನಿಮ್ಮ ಎದುರು ಕಾಣಬಹುದು. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಇಂತಹ 12 ಹೆಲ್ತಿ ಟಿಪ್ಸ್ಗಳನ್ನು ಅಂದವಾಗಿ ಜೋಡಿಸಿ ಜಗತ್ತಿಗೆ ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಟ್ವಿಟರ್ ಹ್ಯಾಂಡಲ್ನಲ್ಲಿ ಈ ಟಿಪ್ಸ್ ವರ್ಷದ ಕೊನೆಯ ದಿನವಾದ ಡಿ.31ರಂದು ಪ್ರಕಟವಾಗಿದೆ. ಅದು ಹೀಗಿದೆ ನೋಡಿ..