ನೀವು ಅತಿಯಾಗಿ ಚೂಯಿಂಗ್ ​ಗಮ್​ ಜಗಿಯುತ್ತೀರಾ? ಹಾಗಿದ್ದರೆ ಇದನ್ನೊಮ್ಮೆ ಓದಿ!| health tips

untitled-design-2025-09-25t183844943-68d53ef68c9ac
Published on

health tips: ಇಂದಿನ ದಿನಗಳಲ್ಲಿ ಆದಷ್ಟು ಜನರು ಚೂಯಿಂಗ್ ಗಮ್ ಸೇವಿಸುತ್ತಿರುತ್ತಾರೆ. ಇದೊಂದು ಸಾಮಾನ್ಯ ತಿಂಡಿಯಾಗಿದ್ದರೂ, ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳನ್ನು ಉಂಟು ಮಾಡಬಹುದು. ಇದನ್ನು ಸೇವಿಸುವುದರಿಂದ ಮಹಿಳೆಯರ ಆರೋಗ್ಯದಲ್ಲಿ ಏರುಪೇರು ಆಗುತ್ತದೆ ಎಂಬುದು ನಂಬಲಾಗದ ವಿಷ್ಯವಾಗಿದೆ. ಅತಿಯಾದ ಬಳಕೆಯು ಹೊಟ್ಟೆಯ ನೋವು ಅಥವಾ ಇನ್ನಿತರ ಸಮಸ್ಯೆಗಳನ್ನು ಉಂಟು ಮಾಡುತ್ತದೆ.

ಚೂಯಿಂಗ್​ ಗಮ್​ನಿಂದಾಗುವ ಅನಾನುಕೂಲಗಳೇನು?

* ದಂತ ಆರೋಗ್ಯಕ್ಕೆ ಹಾನಿ

ಈ ಚೂಯಿಂಗ್​ಗಮ್​ನಲ್ಲಿ ಸಕ್ಕರೆ ಆಧಾರಿತ ವಸ್ತುಗಳು ಇರುವುದರಿಂದ ಬ್ಯಾಕ್ಟೀರಿಯಾಗಳನ್ನು ಉತ್ತೇಜಿಸಿ, ಹಲ್ಲುಗಳಲ್ಲಿ ತೊಂದರೆ ಉಂಟುಮಾಡುತ್ತದೆ. ಇದರಲ್ಲಿರುವ ಸಕ್ರಲೋಸ್​ನಂತಹ ಕಾರ್ಬೊಹೈಡ್ರೇಟ್​ಗಳು ದಂತಗಳನ್ನು ದುರ್ಬಲಗೊಳಿಸುತ್ತವೆ. ಇದಲ್ಲದೇ ದಂತದ ಸ್ನಾಯುಗಳು ಸೆಳೆತಕ್ಕೆ ಕಾರಣವಾಗಿ, ದಂತ ಚಿಕಿತ್ಸೆಗೆ ಹೆಚ್ಚು ಖರ್ಚು ಮತ್ತು ನೋವು ಸೃಷ್ಟಿಯಾಗುತ್ತದೆ.

* ದವಡೆಯ ಮೂಳೆಗಳ ನೋವು

ಅತಿಯಾದ ಚೂಯಿಂಗ್​ ಸೇವಿಸುವುದರಿಂದ ಟೆಂಪೊರೊಮ್ಯಾಂಡಿಬ್ಯುಲರ್ ಜಾಯಿಂಟ್ (ಟಿಎಂಜೆ) ಮೇಲೆ ಒತ್ತಡ ಬೀಳುತ್ತದೆ. ಇದು ನಮ್ಮ ಪ್ರತಿ ಕಿವಿಯ ಮುಂಭಾಗದಲ್ಲಿರುವ ಈ ಕೀಲುಗಳನ್ನು ನೋವು ಮಾಡಿ ಮಾತನಾಡಲು, ನುಂಗಲು ಮತ್ತು ಮುಖದ ಭಾವನೆಗಳನ್ನು ವ್ಯಕ್ತಪಡಿಸಲು ಕಷ್ಟವಾಗುವಂತೆ ಮಾಡುತ್ತವೆ. ಇದರಿಂದ ತಲೆನೋವು, ಕಿವಿ ನೋವುಗಳು ದೀರ್ಘವಾದ ಸಮಸ್ಯೆಗಳನ್ನು ಅನುಭವಿಸುವಂತೆ ಮಾಡುತ್ತದೆ.

* ಜೀರ್ಣಕ್ರಿಯೆ ಸಮಸ್ಯೆಗಳು

ಚೂಯಿಂಗ್ ಗಮ್ ದೈನಂದಿನವಾಗಿ ತಿನ್ನುವುದು ಜೀರ್ಣಕ್ರಿಯೆಯನ್ನು ತೊಂದರೆಗೊಳಿಸುತ್ತದೆ. ಇದರಲ್ಲಿ ಹೆಚ್ಚು ಗಾಳಿ ಮುಟ್ಟುವುದರಿಂದ ಗ್ಯಾಸ್​, ಅಜೀರ್ಣದಂತಹ ಸಮಸ್ಯೆಯನ್ನು ಎದುರಿಸಬಹುದಾಗಿದೆ. ಹಾಗೆಯೇ ಸಕ್ಕರೆ ರಹಿತ ಗಮ್‌ಗಳಲ್ಲಿರುವ ಸಾರ್ಬಿಟಾಲ್, ಕ್ಸಿಲಿಟಾಲ್‌ನಂತಹ ಸಕ್ಕರ್ ಅಲ್ಕೊಹಾಲ್‌ಗಳು ಜೀರ್ಣಕ್ರಿಯೆಯನ್ನು ತಡೆದು, ಡಯರಿಯಾದಂತಹ ಸಮಸ್ಯೆಯನ್ನು ಉಂಟುಮಾಡುತ್ತವೆ. ಇದು ಐಬಿಎಸ್ ರೋಗಿಗಳಲ್ಲಿ ಲಕ್ಷಣಗಳನ್ನು ಹೆಚ್ಚಿಸುತ್ತದೆ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net