ನೀವು ಕೂಡ ನೇಲ್ ಪಾಲಿಷ್ ಬಳಸುತ್ತಿದ್ದೀರಾ? ಇದನ್ನೊಮ್ಮೆ ಓದಿ | Nail Polish Side Effects

nail polish
Published on

Nail Polish Side Effects: ಪ್ರಪಂಚದಾದ್ಯಂತ ನೇಲ್ ಪಾಲಿಷ್ ಬಳಸುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಮಹಿಳೆಯರು ತಮ್ಮ ಉಗುರುಗಳು ಸುಂದರವಾಗಿ ಕಾಣುವಂತೆ ಮಾಡಲು ನೇಲ್ ಪಾಲಿಷ್ ಹಚ್ಚಿಕೊಳ್ಳುತ್ತಾರೆ. ಇಂದು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಇದು ಇಷ್ಟ.

ಈ ನೇಲ್ ಪಾಲಿಷ್ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು, ಇದರಲ್ಲಿರುವ ಕೆಲವು ರಾಸಾಯನಿಕಗಳು ನಮ್ಮ ಆರೋಗ್ಯಕ್ಕೆ ಹಾನಿ ಮಾಡಬಹುದು ಎಂದು ಸಂಶೋದನೆ ಹೇಳಿದೆ.

1. ಅಲರ್ಜಿಗಳು

ನೇಲ್ ಪಾಲಿಷ್ ಎಲ್ಲರಿಗೂ ಸರಿಹೊಂದುವುದಿಲ್ಲ, ಕೆಲವರಿಗೆ ಅಲರ್ಜಿಯ ಪ್ರತಿಕ್ರಿಯೆ ಉಂಟಾಗಬಹುದು, ಉಗುರುಗಳ ಸುತ್ತಲಿನ ಚರ್ಮವು ಕೆಂಪಗಾಗಬಹುದು, ತುರಿಕೆ ಹೆಚ್ಚಾಗಬಹುದು, ಕೆಲವೊಮ್ಮೆ, ಉಗುರುಗಳ ಮೂಲಕ ಅಲರ್ಜಿಗಳು ದೇಹದ ಇತರ ಭಾಗಗಳಿಗೂ ಹರಡುವ ಸಾಧ್ಯತೆ ಇರುತ್ತದೆ.

2. ಉಗುರುಗಳು ಉದುರಬಹುದು

ನೇಲ್ ಪಾಲಿಷ್ ಮತ್ತು ನೇಲ್ ಪಾಲಿಷ್ ರಿಮೂವರ್‌ಗಳನ್ನು ಪದೇ ಪದೇ ಬಳಸುವುದರಿಂದ ಉಗುರುಗಳು ಒಣಗಬಹುದು, ಇದರಿಂದಾಗಿ ಅವು ಸುಲಭವಾಗಿ ಮುರಿಯುತ್ತವೆ ಮತ್ತು ಸಂಪೂರ್ಣವಾಗಿ ಉದುರಿಹೋಗಲುಬಹುದು.

3. ಉಸಿರಾಟದ ತೊಂದರೆಗಳು

ನೇಲ್ ಪಾಲಿಷ್​​ನಲ್ಲಿ ಕೆಲವು ರಾಸಾಯನಿಕಗಳು, ವಿಶೇಷವಾಗಿ ಫಾರ್ಮಾಲ್ಡಿಹೈಡ್, ಉಸಿರಾಟದ ತೊಂದರೆಗಳನ್ನು ಉಂಟುಮಾಡಬಹುದು. ಕೆಮ್ಮು, ಉಬ್ಬಸ ಮತ್ತು ಆಸ್ತಮಾದಂತಹ ಪರಿಸ್ಥಿತಿಗಳು ಸಂಭವಿಸಬಹುದು.

4. ಚರ್ಮದ ಕ್ಯಾನ್ಸರ್‌ಗೆ ಕಾರಣವಾಗಬಹುದು

ಜೆಲ್ ನೇಲ್ ಪಾಲಿಷ್ ಹೆಚ್ಚು ಕಾಲ ಬಾಳಿಕೆ ಬರುವುದರಿಂದ ಅವು ಹೆಚ್ಚು ಜನಪ್ರಿಯವಾಗುತ್ತಿವೆ. ಇದು ಚರ್ಮದ ಕ್ಯಾನ್ಸರ್‌ಗೂ ಕಾರಣವಾಗಬಹುದು ಎಂದು ಸಂಶೋಧಕರು ಇತ್ತೀಚೆಗೆ ಗಮನಿಸಿದ್ದಾರೆ. ಇತ್ತೀಚಿನ ಜೆಲ್ ನೇಲ್ ಪಾಲಿಶ್‌ಗಳು UV ಬೆಳಕಿಗೆ ಒಡ್ಡಿಕೊಳ್ಳುವ ಅಗತ್ಯವಿರುವ ಗಟ್ಟಿಯಾಗಿಸುವ ಜೆಲ್ ಅನ್ನು ಒಳಗೊಂಡಿರುತ್ತವೆ. ಇವುಗಳನ್ನು ಪದೇ ಪದೇ ಬಳಸಿದರೆ ಸುಕ್ಕುಗಳು ಮತ್ತು ಚರ್ಮದ ಕ್ಯಾನ್ಸರ್ ಉಂಟಾಗಬಹುದು.(ಏಜೆನ್ಸೀಸ್)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net