ರಾತ್ರಿ ಮಲಗಿದಾಗ ನಿಮಗೂ ಈ ತೊಂದರೆಗಳಾಗುತ್ತಿವೆಯೇ? ಇನ್ಮುಂದೆ ನಿರ್ಲಕ್ಷಿಸಬೇಡಿ, ಪ್ರಾಣಕ್ಕೆ ಕಂಟಕವಾಗಬಹುದು! Kidney Awareness

 Kidney Awareness ಸಾಂದರ್ಭಿಕ ಚಿತ್ರ
Kidney Awareness ಸಾಂದರ್ಭಿಕ ಚಿತ್ರ
Published on
Kidney Awareness: ಮಾನವನ ದೇಹವು ಒಂದು ಅದ್ಭುತ ಯಂತ್ರವಿದ್ದಂತೆ. ಇದರಲ್ಲಿ ಪ್ರತಿ ಅಂಗವೂ ತನ್ನದೇ ಆದ ವಿಶಿಷ್ಟ ಜವಾಬ್ದಾರಿಯನ್ನು ಹೊಂದಿರುತ್ತದೆ. ಅಂತಹ ಪ್ರಮುಖ ಅಂಗಗಳಲ್ಲಿ ನಮ್ಮ 'ಮೂತ್ರಪಿಂಡಗಳು' ಅತ್ಯಂತ ಪ್ರಮುಖವಾದವು. ಕಿಡ್ನಿಗಳು ಕೇವಲ ತ್ಯಾಜ್ಯವನ್ನು ಹೊರಹಾಕುವ ಅಂಗಗಳಲ್ಲ, ಬದಲಿಗೆ ಇಡೀ ದೇಹದ ಸಮತೋಲನವನ್ನು ಕಾಯ್ದುಕೊಳ್ಳುವ ಅತ್ಯಂತ ದಕ್ಷ ಫಿಲ್ಟರ್​ಗಳು.
ಒಬ್ಬ ವ್ಯಕ್ತಿ ಸಂಪೂರ್ಣವಾಗಿ ಆರೋಗ್ಯವಾಗಿರಬೇಕಾದರೆ, ಅವನ ಮೂತ್ರಪಿಂಡಗಳು ಸುಸ್ಥಿತಿಯಲ್ಲಿರುವುದು ಅತ್ಯಗತ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಬದಲಾದ ಕಳಪೆ ಆಹಾರ ಪದ್ಧತಿ ಮತ್ತು ತಪ್ಪು ಜೀವನಶೈಲಿಯಿಂದಾಗಿ ಲಕ್ಷಾಂತರ ಜನರು ಕಿಡ್ನಿ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ.
ಆದಾಗ್ಯೂ, ದೇಹವು ಮೂತ್ರಪಿಂಡ ವೈಫಲ್ಯದ ಸಂಕೇತಗಳನ್ನು ಮುಂಚಿತವಾಗಿ ನೀಡಲು ಪ್ರಾರಂಭಿಸಿದರೂ, ನಾವು ಆ ಸಂಕೇತಗಳನ್ನು ಅರ್ಥಮಾಡಿಕೊಳ್ಳಲು ವಿಫಲರಾಗುತ್ತೇವೆ. ಮೂತ್ರಪಿಂಡ ವೈಫಲ್ಯದ ಕೆಲವು ಲಕ್ಷಣಗಳು ರಾತ್ರಿಯಲ್ಲಿ ಕಾಣಿಸಿಕೊಳ್ಳುತ್ತವೆ. ಇವು ನಿಮ್ಮ ದೇಹದಲ್ಲಿ ಕಂಡುಬಂದರೆ, ಮೂತ್ರಪಿಂಡದ ವೈಫಲ್ಯ ಸಂಭವಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ.

ಆಗಾಗ್ಗೆ ಮೂತ್ರ ವಿಸರ್ಜನೆ

ಪ್ರತಿದಿನ ರಾತ್ರಿ ಎಚ್ಚರಗೊಂಡು ಮೂತ್ರ ವಿಸರ್ಜಿಸಲು ಸ್ನಾನಗೃಹಕ್ಕೆ ಓಡಿದರೆ, ನಿಮಗೆ ಮೂತ್ರಪಿಂಡದ ಸಮಸ್ಯೆ ಇರಬಹುದು. ಇದು ಮೂತ್ರಪಿಂಡ ವೈಫಲ್ಯದ ಸಂಕೇತ. ಮೂತ್ರಪಿಂಡ ವೈಫಲ್ಯ ಇರುವವರು ಆಗಾಗ್ಗೆ ಮೂತ್ರ ವಿಸರ್ಜಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಿ ಈ ಸಮಸ್ಯೆಯನ್ನು ಪರಿಹರಿಸಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

ಕಾಲುಗಳ ಮೇಲೆ ನೀರು

ಕೆಲವೊಮ್ಮೆ, ರಾತ್ರಿ ಮಲಗಿದಾಗ, ನಿಮ್ಮ ಕಾಲುಗಳಲ್ಲಿ ಊತ ಕಾಣಿಸಿಕೊಂಡರೆ ಅದನ್ನು ಹಗುರವಾಗಿ ಪರಿಗಣಿಸಬೇಡಿ. ಇದು ಮೂತ್ರಪಿಂಡದ ವೈಫಲ್ಯದ ಸಂಕೇತವಾಗಿರಬಹುದು. ಆದಾಗ್ಯೂ, ಅನೇಕರು ಬೆಳಿಗ್ಗೆ ಎದ್ದ ತಕ್ಷಣ ತಮ್ಮ ಕಾಲುಗಳು ಊದಿಕೊಂಡಿರುವುದನ್ನು ಗಮಿಸಿದ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಉಸಿರಾಟದ ತೊಂದರೆ

ರಾತ್ರಿ ಗಾಢ ನಿದ್ರೆಯಲ್ಲಿದ್ದಾಗ ಹಠಾತ್ತನೆ ಉಸಿರುಗಟ್ಟಿದಂತಾಗಿ ಎಚ್ಚರಗೊಳ್ಳುವುದು ಮತ್ತು ಉಸಿರಾಡಲು ತೀವ್ರ ತೊಂದರೆ ಅನುಭವಿಸುವುದು ಅತ್ಯಂತ ಆತಂಕಕಾರಿ ಲಕ್ಷಣವಾಗಿದೆ. ಸಾರ್ವಜನಿಕವಾಗಿ ಅನೇಕರು ಇದನ್ನು ಕೇವಲ ಅಸ್ತಮಾ ಅಥವಾ ಸಾಮಾನ್ಯ ಉಸಿರಾಟದ ಸಮಸ್ಯೆ ಎಂದು ನಿರ್ಲಕ್ಷಿಸುತ್ತಾರೆ. ಆದರೆ, ಇದು ನಿಮ್ಮ ಮೂತ್ರಪಿಂಡಗಳು (ಕಿಡ್ನಿ) ತೀವ್ರವಾಗಿ ಹಾನಿಗೊಳಗಾಗಿರುವುದರ ಸ್ಪಷ್ಟ ಸಂಕೇತವಾಗಿರಬಹುದು.

ಬಾಯಾರಿಕೆ

ಅನೇಕ ಜನರಿಗೆ ರಾತ್ರಿಯಲ್ಲಿ ಆಗಾಗ್ಗೆ ಬಾಯಾರಿಕೆಯಾಗುತ್ತದೆ. ಇದರಿಂದ ಎಚ್ಚರಗೊಳ್ಳುತ್ತಾರೆ. ಈ ಘಟನೆ ಸಂಭವಿಸಿದರೆ ಜಾಗರೂಕರಾಗಿರಬೇಕು. ಕೆಲವೊಮ್ಮೆ ಮೂತ್ರಪಿಂಡ ವೈಫಲ್ಯವು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ರಾತ್ರಿಯಲ್ಲಿ ನಿಮಗೆ ಆಗ್ಗಾಗೆ ಬಾಯಾರಿಕೆ ಅನಿಸಿದರೆ ಮತ್ತು ಇದು ಹಲವಾರು ದಿನಗಳವರೆಗೆ ಮುಂದುವರಿದರೆ, ಮೂತ್ರಪಿಂಡದ ಸಮಸ್ಯೆಗೆ ಕಾರಣವಾಗಿರಬಹುದು.
ಮೂತ್ರಪಿಂಡಗಳು ಹಾನಿಗೊಳಗಾದಾಗ, ದೇಹದಲ್ಲಿ ವಿಷಕಾರಿ ವಸ್ತುಗಳು ಸಂಗ್ರಹವಾಗಲು ಪ್ರಾರಂಭಿಸುತ್ತವೆ. ಇದು ಚರ್ಮದ ಮೇಲೆ ತುರಿಕೆ ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ. ಕೆಲವೊಮ್ಮೆ ಸಣ್ಣ ಉಬ್ಬುಗಳು ಸಹ ಕಾಣಿಸಿಕೊಳ್ಳುತ್ತವೆ. ಹಾಗಿದ್ದಲ್ಲಿ, ಅದು ಮೂತ್ರಪಿಂಡ ವೈಫಲ್ಯದ ಸಂಕೇತವಾಗಿರಬಹುದು. ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ. ಹಾಗೆ ಮಾಡುವುದರಿಂದ ಗಂಭೀರ ಸಮಸ್ಯೆಗಳು ಉಂಟಾಗಬಹುದು (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net