ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಕುಡಿದ್ರೆ ತೂಕ ಇಳಿಯುತ್ತಾ; ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ

hotttttt
Published on

ತೂಕ ಇಳಿಸೋ ವಿಚಾರಕ್ಕೆ ಬಂದ್ರೆ, ಯಾರು ಏನೇ ಹೇಳಿದ್ರು ಅವರ ಸಲಹೆಯನ್ನು ನಾವು ಪಾಲಿಸುತ್ತೇವೆ. ತೂಕ ಇಳಿಸೋಕೆ ವರ್ಕೌಟ್‌, ವಾಕಿಂಗ್‌ ಅಂತ ಹರಸಾಹಸ ಪಡೋದು ಸಹಜ. ಕೆಲವರು ಡಯೆಟ್‌ ಮೂಲಕ ತೂಕ ಇಳಿಸೋಕೆ ಟ್ರೈ ಮಾಡ್ತಾರೆ. ಪೌಷ್ಟಿಕ ಆಹಾರ ಸೇವನೆಯ ಮೂಲಕ ತೂಕ ಇಳಿಸೋಕೆ ಪ್ರಯತ್ನ ಮಾಡ್ತಾರೆ.

ನಿಂಬೆರಸ ಹಾಗೂ ದಾಲ್ಚಿನ್ನಿಯನ್ನು ಬಿಸಿನೀರಿನಲ್ಲಿ ಮಿಶ್ರಣ ಮಾಡಿ ಕುಡಿಯುವುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರಿಗೆ ಇವನ್ನು ಸೇರಿಸಿ ಕುಡಿಯುವುದರಿಂದ ತೂಕ ಕಡಿಮೆಯಾಗುತ್ತಾರೆ ಅನ್ನೋದು ಡಯಟಿಷೀಯನ್‌ಗಳ ಸಲಹೆಯೂ ಹೌದು.

ಬರೀ ಬಿಸಿ ನೀರು ಕುಡಿದ್ರೆ ತೂಕ ಇಳಿಯುತ್ತಾ, ಅನ್ನೋ ಪ್ರಶ್ನೆ ಹಲವರು ಕೇಳುತ್ತಾರೆ. ಅದಕ್ಕೆ ಖಂಡಿತ ಹೌದು ಅಂತಾರೆ ತಜ್ಞರು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಅಥವಾ ಉಗುರು ಬೆಚ್ಚನೆಯ ನೀರು ಕುಡಿಯುವುದರಿಂದ ಹೊಟ್ಟೆಯ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು. ಇದು ತೂಕ ಇಳಿಯಲು ಉತ್ತಮ ಪರಿಹಾರ ಎನ್ನುವುದು ತಜ್ಞರ ಸಲಹೆ.

ಒತ್ತಡ ಕಡಿಮೆಯಾಗುತ್ತದೆ: ಪ್ರತಿದಿನ ಬೆಳಗೆದ್ದು ಒಂದು ಲೋಟ ಬೆಚ್ಚಗಿನ ನೀರು ಕುಡಿಯುವುದರಿಂದ ಒತ್ತಡ ಮಟ್ಟ ಕಡಿಮೆಯಾಗುತ್ತದೆ. ಬಾಯಿಗೆ ರುಚಿಸಿದ್ದೆಲ್ಲಾ ತಿನ್ನಬೇಕು ಎನ್ನುವ ಬಯಕೆಯನ್ನು ಇದು ನಿಯಂತ್ರಿಸುತ್ತದೆ. ನಿದ್ದೆಯ ಗುಣಮಟ್ಟ ಸುಧಾರಿಸುವ ಮೂಲಕ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

ಹೈಡ್ರೇಷನ್‌: ಪ್ರತಿದಿನ ಬೆಳಿಗ್ಗೆ ಎದ್ದಾಕ್ಷಣ ಒಂದು ಲೋಟ ಬಿಸಿನೀರು ಕುಡಿಯುವುದರಿಂದ ನಿಮ್ಮ ದೇಹವು ಹೈಡ್ರೇಟ್‌ ಆಗುತ್ತದೆ. ನಮ್ಮ ಒಟ್ಟಾರೆ ಆರೋಗ್ಯ ಹಾಗೂ ತೂಕ ನಿರ್ವಹಣೆಗೆ ಹೈಡ್ರೇಟ್‌ ಆಗಿರುವುದು ತುಂಬಾ ಮುಖ್ಯ.

ಜೀರ್ಣಕ್ರಿಯೆ ವೃದ್ಧಿಸುತ್ತದೆ: ಬಿಸಿನೀರು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಚಯಾಪಚಯ ಕ್ರಿಯೆ ವೃದ್ಧಿಯಾಗಲು ಇದು ಸಹಕಾರಿ, ಇದು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ.

ಸಮತೋಲಿನ ಆಹಾರ ಸೇವಿಸುವುದೂ ಮುಖ್ಯ: ಬಿಸಿನೀರು ಕುಡಿದ ಒಂದೇ ತಿಂಗಳಲ್ಲಿ ತೂಕ ಕಡಿಮೆಯಾಗುತ್ತದೆ ಎಂದೇನಿಲ್ಲ. ನಿಯಮಿತವಾಗಿ ಕುಡಿಯುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ. ಆದರೆ ಬಿಸಿನೀರು ಕುಡಿಯುವ ಜೊತೆಗೆ ನಿಯಮಿತ ವ್ಯಾಯಾಮ ಹಾಗೂ ಸಮತೋಲಿತ ಆಹಾರ ಸೇವನೆ ಕೂಡ ಮುಖ್ಯವಾಗುತ್ತದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net