ಕಾಲಿನ ಹಿಮ್ಮಡಿ ಬಿರುಕಿನಿಂದ ಯಾವುದೇ ಚಪ್ಪಲಿ ಬಳಸಲು ಮುಜುಗರವಾಗ್ತಿದ್ಯಾ?; ಈ ಮನೆಮದ್ದು ಟ್ರೈ ಮಾಡಿ!..Heels Care

ಕಾಲಿನ ಹಿಮ್ಮಡಿ ಬಿರುಕಿನಿಂದ ಯಾವುದೇ ಚಪ್ಪಲಿ ಬಳಸಲು ಮುಜುಗರವಾಗ್ತಿದ್ಯಾ?;  ಈ ಮನೆಮದ್ದು ಟ್ರೈ ಮಾಡಿ!..Heels Care
Published on: 

ಹಿಮ್ಮಡಿ ಬಿರುಕು ಬಿಟ್ಟಿದ್ದರೆ ಏನು ಮಾಡಬೇಕು?

Heels Care: ಮಳೆ ಮತ್ತು ಚಳಿಗಾಲದಲ್ಲಿ ಕಾಲುಗಳ ಪಾದವು ಬಿರುಕು ಬಿಟ್ಟುಕೊಂಡು ಮುಜುಗರವನ್ನುಂಟು ಮಾಡುತ್ತದೆ. ತೆರೆದ ಚಪ್ಪಲಿ ಬಳಕೆ ಮಾಡುವುದು, ತೇವಾಂಶ ಕೊತಯೆ, ದೀರ್ಘ ಕಾಲ ನಿಲ್ಲುವುದು, ವಿಟಮಿನ್​​ ಕೊರತೆ, ಮಧು ಮೇಹ, ಬೊಕ್ಕು ಹಾಗೂ ವಯಸ್ಸಾಗುದು ಕಾಲಿನ ಹಿಮ್ಮಡಿ ಬಿರುಕು ಬಿಡಲು ಇರುವ ಕಾರಣಗಳು. ನಿಮ್ಮ ಕಾಲನ್ನು ಸ್ವಚ್ಛಂದವಾಗಿ ಕಾಪಾಡಿಕೊಳ್ಳಲು ಈ ಟಿಪ್ಸ್​ ಅನ್ನು ನಿತ್ಯ ಫಾಲೋ ಮಾಡಿ ನೋಡಿ.

ಕಾಲಿನ ಹಿಮ್ಮಡಿ ಮೃದುವಾಗಿಸಿ

ನಿತ್ಯ ನೀವು ಮಲಗುವ ಅರ್ಧ ಗಂಟೆಗೂ ಮುನ್ನ ನಿಮ್ಮ ಕಾಲನ್ನು ಬಿಸಿ ನೀರಿನಲ್ಲಿ ಇಟ್ಟು ಮೃದುವಾಗಿಸಿ. ಅದರಲ್ಲಿ ಉಪ್ಪು ಹಾಕಿ ಒಂದು ಅರ್ಧ ಗಂಟೆ ಅಥವಾ 20 ನಿಮಿಷ ಇಡಿ. ಆನಂತರ ಸ್ವಚ್ಛವಾಗಿ ಒರೆಸಿ ಒಡೆದ ಸಾಕ್ಸ್​​ ಹಾಕಿ ಪೋಷಿಸಿ. ನೀವೇನಾದರೂ ಸ್ಕ್ರಬರ್​ನಿಂದ ಕಾಲನ್ನು ಉಜ್ಜುವುದಾದರೆ ಜೋರಾಗಿ ಪ್ರೆಸ್​ ಮಾಡದೆ ಕಾಲನ್ನು ಶುಚಿಗೊಳಿಸಿ.

ಮನೆ ಮದ್ದಿನ ಬದಲಿಗೆ ಇದು ಬಳಕೆ ಮಾಡಿ

ಮನೆ ಮದ್ದು ಎಂದು ನಿಂಬೆ ರಸ, ಜೇನು ತುಪ್ಪ ಅನಾವಶ್ಯಕ ಉಪಕರಣ ಬಳಕೆ ಮಾಡುವ ಬದಲಾಗಿ, ಶೇ.10-25 ಯೂರಿಯಾ ಹೊಂದಿರುವ ಕಾಲಿಗಾಗಿ ತಯಾರದ ಕ್ರೀಂ ಗಳನ್ನು ವೈದ್ಯರ ಸಲಹೆ ಮೇರೆಗೆ ಬಳಕೆ ಮಾಡಿ. ಇದರಿಂದಾಗಿ ಅನಾವಶ್ಯಕವಾಗಿ ಕಾಡುವ ಚರ್ಮದ ಸಮಸ್ಯೆಗಳಿಗೆ ಗುಡ್​ಬೈ ಹೇಳಬಹುದು.

ವ್ಯಾಸಲಿನ್​ ಹಚ್ಚಿ

ಮಲಗುವ ಮುನ್ನ ಕಾಲನ್ನು ಸೋಪಿನಿಂದ ಚೆನ್ನಾಗಿ ತೊಳೆದುಕೊಳ್ಳಿ. ಇದಕ್ಕೆ ನಿತ್ಯ ಸ್ಕ್ರಬ್​​ ಮಾಡುವ ಅಗತ್ಯವಿಲ್ಲ. ಈಗ ಕಾಲಿಗೆ ನಿಮ್ಮ ಬಳಿ ಇರುವ ವ್ಯಾಸಲಿನ್​ ಅಥವಾ ತೆಂಗಿನ ಎಣ್ಣೆ, ಕ್ರ್ಯಾಕ್​ ಜೆಲ್​ಗಳನ್ನು ಹಿಮ್ಮಡಿಗೆ ಹಚ್ಚಿ ಸಾಕ್ಸ್​ ಹಾಕಿ ನಿಶ್ಚಿಂತೆಯಾಗಿ ಮಲಗಿ. ನಿತ್ಯ ಹೀಗೆ ಮಾಡುವುದರಿಂದ ನಿಮ್ಮ ಕಾಲಿನಲ್ಲಿ ಒಡೆತ ಕಡಿಮೆಯಾಗಬಹುದು. ನೆನಪಿರಲಿ ಬೆಳಗೆದ್ದ ಕೂಡಲೇ ಕಾಲನ್ನು ಸೋಪಿನಿಂದ ವಾಶ್​ ಮಾಡುವುದು ಅಗತ್ಯ.

ಕಾಲಿಗೆ ನಿಂಬೆ ಬಳಕೆ ಮಾಡುವ ಮುನ್ನ ಇರಲಿ ಎಚ್ಚರ

ಪೂರ್ವಜರು ನಿಂಬೆ ಹಣ್ಣನ್ನು ಇಮ್ಮಡಿಗೆ, ಕಾಲಿಗೆ ಹಚ್ಚಿಕೊಳ್ಳುತ್ತಿದ್ದರು. ನಾವು ಇದನ್ನೇ ಪ್ರಯೋಗ ಮಾಡಿದರೆ ಏನು ಸಂಭವಿಸೋದಿಲ್ಲ ಎಂದು ಬಳಕೆ ಮಾಡುವ ಮುನ್ನ ಎಚ್ಚರದಿಂದ ಇರಿ. ನಿಂಬೆಯಲ್ಲಿರುವ ಸಿಟ್ರಿಕ್​ ಆಮ್ಲವು ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರಬಹುದು. ಇದು ಕಿರಿಯನ್ನುಂಟು ಮಾಡಿ ಚರ್ಮದ ಆಳದಲ್ಲಿ ಬಿರುಕು ಮೂಡಿಸುವ ಸಾಧ್ಯತೆ ಇರುತ್ತದೆ, (ಏಜೆನ್ಸೀಸ್).

ತೆರೆದ ಚಪ್ಪಲಿ ಬಳಕೆ ಬೇಡ

ನಿಮಗೆ ಕಾಲು ವಿಪರೀತ ಒಡೆದಿದ್ದರೆ ಆದಷ್ಟು ನಿಮ್ಮ ಕಾಲನ್ನು ಕವರ್ ಮಾಡುವ ಚಪ್ಪಲಿ ಅಥವಾ ಸ್ಯಾಂಡಲ್ ಬಳಕೆ ಮಾಡಿ. ಇದು ನಿಮ್ಮ ಕಾಲಿಗೆ ಧೂಳು ಸೇರೋದನ್ನು ಕಡಿಮೆ ಮಾಡುತ್ತದೆ. ಆ ಮೂಲಕ ಧೂಳು ಕುಳಿತಲ್ಲೇ ಕುಳಿತು ಆರೋಗ್ಯ ಸಮಸ್ಯೆ ಉಂಟು ಮಾಡುವುದನ್ನು ಕಡಿಮೆ ಮಾಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net