Sweet Poha : ದೀಪಾವಳಿ ಹಬ್ಬಕ್ಕೆ ವಿಶೇಷವಾಗಿ ಮಾಡಿ ಸಿಹಿ ಅವಲಕ್ಕಿ

Sweet Poha
Published on

Sweet Poha: ಅವಲಕ್ಕಿ  ಕೃಷ್ಣನಿಗೆ ಪ್ರಿಯವಾದ ಅವಲಕ್ಕಿ, ಮನೆಗೆ ಯಾರಾದರೂ ಬಂದರೇ ಕಡಿಮೆ ಸಮಯದಲ್ಲಿ ಅವಲಕ್ಕಿಯಿಂದ ತಿಂಡಿ  ಸಿದ್ದಗೊಳಿಸುತ್ತೇವೆ. ಆದ್ರೆ ಅವಲಕ್ಕಿ ಕೇವಲ ತಿಂಡಿ ತಯಾರಿಸಲು ಅಷ್ಟೇ ಅಲ್ಲ ಇದರಿಂದ ಸ್ವಾಧೀಷ್ಟಕರ ಸಿಹಿಯನ್ನು ತಯಾರಿಸಬಹುದು ಹಾಗಾದ್ರೆ ನೀವು ಇದನ್ನ ತಯಾರಿಸಬಹುದು ಇಲ್ಲಿದೆ ನೋಡಿ ಸರಳ ವಿಧಾನ

ಬೇಕಾಗುವ ಸಾವಗ್ರಿಗಳು

ಪೇಪರ ಅವಲಕ್ಕಿ - 4 ಲೋಟ

ತುಪ್ಪ - 3 ಚಮಚ

ತೆಂಗಿನ ತುರಿ - 1 ಬಟ್ಟಲು

ಬೆಲ್ಲ - 1 ಬಟ್ಟಲು

ಸಕ್ಕರೆ - 2 ರಿಂದ 3 ಚಮಚ

ಏಲಕ್ಕಿ - 2/3

ಮಾಡುವ ವಿಧಾನ:

ಒಂದು ಪಾತ್ರೆಯಲ್ಲಿ ತೆಂಗಿನ ತುರಿ, ಬೆಲ್ಲ, ಏಲಕ್ಕಿ, ತುಪ್ಪ ಹಾಕಿ ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿ, ಸ್ವಲ್ಪ ಸಮಯ ಬಿಡಿ ಅದು ಚೆನ್ನಾಗಿ ವಿಕ್ಸ್ ಆಗಿ ನೀರು ಬಿಟ್ಟಿರುತ್ತೆ.

ನಂತರ ಅದರಲ್ಲಿ ಪೇಪರ ಅವಲಕ್ಕಿ , ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇವಾಗ ಸ್ವಾಧೀಷ್ಟಕರ ಸಿಹಿ ಅವಲಕ್ಕಿ ಸವಿಯಲು ಸಿದ್ಧವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net