ನಿಮಗೆ ಮಧುಮೇಹವಿದೆಯೇ? ಅಪ್ಪಿತಪ್ಪಿಯೂ ಈ ಹಣ್ಣುಗಳನ್ನು ತಿನ್ನಬೇಡಿ!

fruits
Published on

ಬೆಂಗಳೂರು: ಮಧುಮೇಹ ಇರುವವರು ತಮ್ಮ ಆಹಾರದ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಅದರಲ್ಲೂ ಸಕ್ಕರೆ ಅಂಶ ಹೆಚ್ಚಾಗಿರುವ ಹಣ್ಣುಗಳನ್ನು ಸೇವನೆ ಮಾಡುವ ಮುನ್ನ ಎಚ್ಚರಿಕೆವಹಿಸುವುದು ಅತ್ಯಗತ್ಯ.

ಮಧುಮೇಹವು ಆರೋಗ್ಯವನ್ನು ಏರು ಪೇರು ಮಾಡುವ ಕಾಯಿಲೆಯಾಗಿದೆ. ಇದನ್ನು ಸೈಲೆಂಟ್ ಕಿಲ್ಲರ್ ಎನ್ನುತ್ತಾರೆ. ಮಧುಮೇಹಿಗಳು ತಮ್ಮ ಆಹಾರದ ಬಗ್ಗೆ ಬಹಳ ಜಾಗರೂಕರಾಗಿರಬೇಕು. ವಿಶೇಷವಾಗಿ ಹಣ್ಣುಗಳನ್ನು ತಿನ್ನುವುದು ಆರೋಗ್ಯಕರ ಆದರೆ 5 ರೀತಿಯ ಹಣ್ಣುಗಳು ಮಧುಮೇಹ ರೋಗಿಗಳಿಗೆ ಅಪಾಯವನ್ನುಂಟುಮಾಡುತ್ತವೆ.

ಬಾಳೆಹಣ್ಣಿನಲ್ಲಿರುವ ಅಂಶಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಲಭವಾಗಿ ಹೆಚ್ಚಿಸುತ್ತವೆ. ಮಧುಮೇಹ ಇರುವವರು ಬಾಳೆಹಣ್ಣು ತಿನ್ನಬಾರದು. ವಿಶೇಷವಾಗಿ ಮಾಗಿದ ಬಾಳೆಹಣ್ಣುಗಳನ್ನು ತಿನ್ನಲೇಬಾರದು. ಇನ್ನು ದ್ರಾಕ್ಷಿಯಲ್ಲಿ ಹೆಚ್ಚಿನ ಸಕ್ಕರೆ ಅಂಶವಿದ್ದು, ಅದನ್ನು ತಿನ್ನಬಾರದು. ಅದೇ ರೀತಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಅನಾನಸ್ ಅನಾನಸ್ ತಿನ್ನುವುದರಿಂದ ಹಸಿವು ಹೆಚ್ಚಾಗುತ್ತದೆ. ಇದು ಆಗಾಗ್ಗೆ ಮೂತ್ರ ವಿಸರ್ಜನೆಯನ್ನು ಪ್ರೇರೇಪಿಸುತ್ತದೆ. ಹೀಗಾಗಿ ಇದರ ಸೇವನೆಯಿಂದ ದೂರವಿರಬೇಕು.

ಸಪೋಟಾ ಹಣ್ಣಿನಲ್ಲಿ ಹೆಚ್ಚಿನ ಸಕ್ಕರೆ ಅಂಶವಿದೆ. ಮಧುಮೇಹಿಗಳು ಸಪೋಟಾ ಹಣ್ಣನ್ನು ತಿಂದರೆ ಮಧುಮೇಹದ ತೀವ್ರತೆ ಹೆಚ್ಚುತ್ತದೆ. ಅಷ್ಟೇ ಅಲ್ಲ, ಕಿತ್ತಳೆ ಹಣ್ಣನ್ನು ಸೇವಿಸುವುದನ್ನು ತಪ್ಪಿಸಬೇಕು. ಮಧುಮೇಹ ಇರುವವರು ಕಿತ್ತಳೆ ಹಣ್ಣನ್ನು ತಿನ್ನಬಾರದು. ತುಂಬಾ ಸಿಹಿಯಾಗಿರುವ ಕಿತ್ತಳೆಯನ್ನು ತಿನ್ನದಿರುವುದು ಉತ್ತಮ ಎನ್ನಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net