

ಭಾರತ ಭಕ್ತಿಪ್ರದಾನ ಸನಾತನ ರಾಷ್ಟ್ರ. ಇಲ್ಲಿರುವಷ್ಟು ಭಕ್ತಕೋಟಿ, ಸಂತ& ಶರಣ & ಹರಿದಾಸ& ಭಾಗವತ ಪರಂಪರೆ ಬೇರೆಲ್ಲೂ ಕಾಣಸಿಗುವುದಿಲ್ಲ. ಭಕ್ತಿಯೆನ್ನುವುದು ಭಾರತೀಯರ ನಿತ್ಯ ಜೀವನ ಅಂತರ್ಗತ ವಿಚಾರವಾಗಿದೆ. ಭಕ್ತಿಯ ಉಗಮ ವಿಕಾಸಗಳು ಸೃಷ್ಟಿಯ ಆರಂಭದಿಂದಲೇ ಆಗಿದೆ. ಎಲ್ಲ ಯುಗಗಳಲ್ಲೂ ಭಗವಂತನ ಗುಣಗಾನ ನಡೆದಿರುವುದು ಪುರಾಣಾದಿ ಶಾಸ್ತ್ರ ಗ್ರಂಥಗಳಿಂದ ವೇದ್ಯವಾಗುತ್ತದೆ. ಲ$್ಮ ಆದಿಯಾಗಿ ನಾರದ, ಶಾಂಡೀಲ್ಯರ ಭಕ್ತಿ ಸೂತ್ರಗಳೂ ಆಧಾರ ಸಾಹಿತ್ಯವಾಗಿವೆ. ಈ ಕುರಿತು ಐತಿಹಾಸಿಕ ದಾಖಲೆಗಳು ಬೇಕೆಂದಾಗ ಸಿಂಧೂ ನಾಗರಿಕತೆಯ ಹರಪ್ಪಾ& ಮೊಹೆಂಜೋದಾರೊಗಳಲ್ಲಿ ನಡೆದ ಸಂಶೋಧನೆಯಲ್ಲಿ ಸಿಕ್ಕ ಆಧಾರಗಳಿಂದ ಭಕ್ತಯೋಗದ ಪ್ರಾಚಿನತೆ (ಕ್ರಿ. ಪೂ. 3500) ವ್ಯಕ್ತವಾಗುತ್ತದೆ.
ಯಸ್ಯದೇವೇ ಪರಾಭಕ್ತಿ@ ಯಥಾ ದೇವೇ ತಥಾಗುಶೌ
ತಸ್ಯೇತೇ ಕಥಿತಾ ಹ್ಯರ್ಥಾ ಪ್ರಕಾಶಂತೇ ಮಹಾತ್ಮನ
ಎಂದು ಹೇಳುವಲ್ಲಿ ಭಕ್ತಿ ಎಂಬ ಪದವನ್ನು ಬಳಸಲಾಗಿದೆ. ಭಕ್ತಿಯ ಕುರಿತು ಪಾಣಿನಿಯ ವ್ಯಾಕರಣ ಸೂತ್ರದಲ್ಲಿಯೂ ಇದಕ್ಕೆ ಭಾಷ್ಯವನ್ನು ಬರೆದಂತಹ ಪತಂಜಲಿಯಲ್ಲೂ ಭಕ್ತಿ ಪೂಜೆ ಎಂಬ ಪದವನ್ನು ಕಾಣುತ್ತೇವೆ.
ಶ್ರೀಮದ್ ಭಗವದ್ಗೀತೆಯಲ್ಲೂ ಭಕ್ತಿ ಒಂದು ಯೋಗವೆನ್ನಿಸಿ ಕೊಂಡಿದೆ. ಸ್ವರೂಪಾನಂದ ಪ್ರಾಪ್ತಿಗೆ, ಅಪರೋ ಾನು ಭೂತಿಗೆ, ಸಮಾಧಿ&ಕೈವಲ್ಯ &ಮುಕ್ತಿಗೆ ಅನುಸರಿಸಬಹುದಾಧ ಸರಳ ಸಾಧನೆಗಳಲ್ಲಿ ಭಕ್ತಿ ಬಹಳ ಸುಲಭವಾದುದೆಂದು ಮಾನ್ಯವಾಗಿದೆ. ವೇದಗಳ ಕಾಲದಿಂದಲೂ ಪ್ರವಹಿಸಿ ಬಂದ ವಿಷ್ಣು ಭಕ್ತಿಯು ಗೀತೆಯಲ್ಲಿ ಮೈದುಂಬಿ ನಿಂತಿದೆ. ಎಲ್ಲ ಉಪನಿಷತ್ತುಗಳ ಸಾರವೆಂದು ಕರೆಸಿಕೊಂಡಿರುವ ಗೀತೆಯು ವಿಷ್ಣುಭಕ್ತಿಯನ್ನು ಎತ್ತಿ ಹಿಡಿದಿದೆ. ಗೀತೆಯಲ್ಲಿ "ಯೋ ಮೇ ಭಕ್ತ ಸಮೇಪ್ರಿಯ@', "ನ ಮೇ ಭಕ್ತ ಪುಣಶ್ಯತಿ' ಇತ್ಯಾದಿ ಮಾತುಗಳು ಬರುತ್ತವೆ. ಇಡೀ ಭಗವದ್ಗೀತೆಯೇ ಸಾಾತ್ ಪುರು ಷೋತ್ತಮನು ನರನಿಗೆ ಮಾಡಿದ ಉಪದೇಶ. ಅಂದ ಬಳಿಕ ವಿಷ್ಣು ಪಾರಮ್ಯ, ಮಹತ್ವ ಎಷ್ಟೆಂಬುದನ್ನು ಊಹಿಸಿಕೊಳ್ಳಬಹುದು.
"ಸಾ ಭಕ್ತಿ@ ಕಸ್ಮೆೃಚಿತ್ಪರಮ ಪ್ರೇಮ ರೂಪಾ'& ಯಾರೊಬ್ಬರ ಬಗ್ಗೆಯಾಗಲಿ ನಮಗಿರುವ ಪರಮ ಪ್ರೀತಿಯೇ ಭಕ್ತಿ ಎಂಬುದಾಗಿ ನಾರದ ಭಕ್ತಿ ಸೂತ್ರವು ಹೇಳುತ್ತದೆ. ಆ ಪ್ರೇಮ ಅನಿರ್ವಚನೀಯ ವಾದುದು; ಮಾತಿಗೆ ಮೀರಿದುದು; ಇಂದ್ರಿಯಾತೀತವಾದುದು. ಕೇವಲ ಅನುಭವವೇದ್ಯವಾದುದು. ಭಕ್ತಿಯ ಅನುಭವವು "ಮೂಕಸ್ವಾದ ನವತ್'& ಮೂಕ ಸಿಹಿಯನ್ನು ತಿಂದು ವಿವರಿಸಿದಂತೆ. ಭಾಗವತದಲ್ಲಿ ಭಕ್ತಿಯನ್ನು ಕುರಿತು "ಭಗವಂತನ ಕುರಿತು ನಿಸ್ವಾರ್ಥ ಪ್ರೇಮ' ಎಂದು ಅರ್ಥೈಸಿದೆ. "ಅಹೇತುಕಾ ವ್ಯವತಾಯಾ ಭಕ್ತಿ@ ಪುರುಷೋತ್ತಮೆ'-& ಅದನ್ನೇ ಅಹೇತುಕ ಭಕ್ತಿ ಎಂದು ಕರೆಯುವುದು. ಭಗವದರ್ಪಿತ, ಪ್ರತಿಫಲಾಕ್ಷೆಯಿಲ್ಲದ, ಪರಿಶುದ್ಧವಾದ, ಸ್ವಾರ್ಥ ರಹಿತವಾದ ಭಕ್ತಿಯೇ ಈ ಅಹೇತುಕ ಭಕ್ತಿ, ನಿಷ್ಕಾಮಭಕ್ತಿ ಅಥವಾ ನಿಸ್ವಾರ್ಥಪ್ರೇಮ. ರಾಮಾಯಣದಲ್ಲಿ ಭಕ್ತಿಯನ್ನು ಕುರಿತು "ಭಗವಂತನೊಂದಿಗಿರುವ ನಿಕಟ ಸಂಬಂಧ' ಎಂದು ಹೇಳಿದೆ. "ಪ್ರೇಮದಿಂದೆಲೇ ಹುಟ್ಟಿ, ಪ್ರೇಮಮಯವಾಗಿಯೇ ಭಗವಂತನತ್ತ ಪ್ರವಹಿಸುವ ಪ್ರೇಮವೇ ಭಕ್ತಿ. ಜ್ಞಾನ ಮತ್ತು ಭಕ್ತಿ ಒಂದೇ ನಾಣ್ಯದ ಎರಡು ಮುಖಗಳು. ಜ್ಞಾನವು ಭಕ್ತಿಯ ಒಂದು ಭಾಗ. ಇದನ್ನೇ ವಿವರವಾಗಿ ತಿಳಿಸಬೇಕಾದರೆ ಜ್ಞಾನದ ವಿಶೇಷವೇ ಭಕ್ತಿ ಎನ್ನಬೇಕಾಗುತ್ತದೆ. ಭಕ್ತಿಯ ಹಂತಗಳು ಎಂದರೆ& ಭಕ್ತಿ, ಪಕ್ವಭಕ್ತಿ, ಪರಿಪಕ್ವಭಕ್ತಿ, ಭಗವಂತನ ವಿಷಯವಾಗಿ ಶ್ರದ್ಧೆ, ಜ್ಞಾನ, ಪ್ರೇಮ ಹೆಚ್ಚಿದಂತೆಲ್ಲ ಅನಿರ್ವಚನೀಯ ಪರಮಾನಂದ ಅನುಭೂತಿಯು ಹೆಚ್ಚುತ್ತ ಹೋಗುತ್ತದೆ.
(ಪ್ರತಿಕ್ರಿಯಿಸಿ: vvsudina@gmail.com)