Dasara : ನವರಾತ್ರಿ ಸಂಭ್ರಮ...ಹಬ್ಬಕ್ಕೆ ಯಾವ ದಿನ, ಯಾವ ಬಣ್ಣ? 9 ದಿನಕ್ಕೆ ಒಂಬತ್ತು ಡ್ರೆಸ್‌ ಸಿದ್ಧವಾಗಿದ್ಯಾ?

navratri
Published on

ಬೆಂಗಳೂರು: ನವರಾತ್ರಿಯು ( Dasara ) ಪ್ರಮುಖ ಆಧ್ಯಾತ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರತಿ ದಿನಕ್ಕೆ ಒಂದು ವಿಶಿಷ್ಟವಾದ ಬಣ್ಣದ ಸಂಯೋಜನೆಯನ್ನು ಹೊಂದಿದೆ. 9 ದಿನಕ್ಕೆ ಬೇಕಾದ ಬಣ್ಣ ಬಣ್ಣದ ಬಟ್ಟೆಗಳ ಕುರಿತಾಗಿ ನಾವು ಇಂದು ನಿಮಗೆ ತಿಳಿಸಿಕೊಡಲಿದ್ದೇವೆ...

ನವರಾತ್ರಿ ದಿನ 9: ನೇರಳೆ

ನವರಾತ್ರಿ ದಿನ 8: ಗುಲಾಬಿ

ನವರಾತ್ರಿ ದಿನ 7: ನೀಲಿ

ನವರಾತ್ರಿ ದಿನ 6: ಕೆಂಪು

ನವರಾತ್ರಿ ದಿನ 5: ಬಿಳಿ

ನವರಾತ್ರಿ ದಿನ 4 : ಕೇಸರಿ

ನವರಾತ್ರಿ ದಿನ  3: ಬೂದು

ನವರಾತ್ರಿ ದಿನ 2: ಹಸಿರು

ನವರಾತ್ರಿ ದಿನ 1: ಹಳದಿ

ನವರಾತ್ರಿಯಲ್ಲಿ ಬಣ್ಣಕ್ಕೆ ಏಕಿಷ್ಟು ಮಹತ್ವ? ನವರಾತ್ರಿಯಲ್ಲಿ ದೇವಿಯನ್ನು ಖುಷಿ ಪಡಿಸಲು ಬೇರೆ-ಬೇರೆ ಬಣ್ಣದ ವಸ್ತ್ರವನ್ನು ಧರಿಸಿ ದೇವಿಯನ್ನು ಆರಾಧಿಸಲಾಗುವುದು. ನವದುರ್ಗೆಯರನ್ನು ನವಬಣ್ಣದ ಉಡುಪುಗಳನ್ನು ಧರಿಸಿ ಪೂಜಿಸಲಾಗುವುದು.

ಬಣ್ಣ ಏನನ್ನು ಸೂಚಿಸುತ್ತದೆ? :

ಪಿಂಕ್ ಅಥವಾ ಆರೇಂಜ್ ಬಣ್ಣ: ದೇವಿ ತನ್ನ ಭಕ್ತರಿಗೆ ಆಹಾರಕ್ಕೆ ಯಾವುದನ್ನೂ ಕೊರತೆ ಮಾಡುವುದಿಲ್ಲ , ಯಾವಾಗ ಅಗ್ಯತ ಬೀಳುವುದೋ ಆವಾಗ ದೇವಿಯ ಸಹಾಯದಿಂದ ಆಹಾರ ಸಿಕ್ಕೇ ಸಿಗುವುದು ಎಂಬರ್ಥವಾಗಿದೆ.

ಬಿಳಿ ಬಣ್ಣ: ಅವಳ ಭಕ್ತರು ಅವಳನ್ನು ಯಾವುದೇ ಸಮಯದಲ್ಲಿ ಭಕ್ತಿಯಿಂದ ಕರೆದರೂ ದೇವಿ ಅವರ ಕಷ್ಟಗಳನ್ನು ನೀಗಿಸಲು ಸಹಾಯ ಮಾಡುತ್ತಾಳೆ ಎಂಬುವುದರ ಸೂಚನೆಯಾಗಿದೆ

ಕೆಂಪು ಬಣ್ಣ: ಕೆಂಪು ಬಣ್ಣ ಶಕ್ತಿಯನ್ನು ಸೂಚಿಸುತ್ತದೆ, ದೇವಿ ಶಕ್ತಿ ಸದಾ ನಮ್ಮನ್ನು ರಕ್ಷಣೆ ಮಾಡುತ್ತಾಳೆ ಎಂಬುದನ್ನು ಸೂಚಿಸುತ್ತದೆ.

ನೀಲಿ ಬಣ್ಣ: ನೀಲಿ ಬಣ್ಣ ದೇವಿ ನಿಮ್ಮ ಜ್ಞಾನವನ್ನು ಹೆಚ್ಚಿಸುತ್ತಾಳೆ ಎಂಬುವುದರ ಸೂಚನೆ

ಹಳದಿ ಬಣ್ಣ: ಹಳದಿ ಬಣ್ಣ ದೇವಿ ನಿಮ್ಮ ಸಮೃದ್ಧಿಯನ್ನು ಸೂಚಿಸುತ್ತದೆ

ಹಸಿರು ಬಣ್ಣ: ದೇವಿ ನಿಮ್ಮ ಕ್ರಿಯಾಶೀಲತೆ ಹೆಚ್ಚಿಸುತ್ತಾಳೆ

ಬೂದು ಬಣ್ಣ: ದೇವಿ ನಮ್ಮನ್ನು ಎಲ್ಲಾ ಕಷ್ಟಗಳಿಂದ ಪಾರು ಮಾಡುತ್ತದೆ ಎಂಬುವುದನ್ನು ಸೂಚಿಸುತ್ತದೆ

ನೇರಳೆ ಬಣ್ಣ: ದೇವಿ ನಿಮಗೆ ಸಂತೋಷವನ್ನು ನೀಡುತ್ತಾಳೆ ಎಂಬುವುದರ ಸಂಕೇತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net