

ಮತ್ಸ್ಯಾಸನ ಭಂಗಿಯ ಬಗ್ಗೆ ತಿಳಿಸಿ.
| ಮಾನು 27 ವರ್ಷ, ಚಿಕ್ಕಬಳ್ಳಾಪುರ
ವಿಧಾನ: ಮೊದಲು ಪದ್ಮಾಸನದಲ್ಲಿ ಕುಳಿತುಕೊಳ್ಳಿ. ಆಮೇಲೆ ಹಿಂದಕ್ಕೆ ಬಗ್ಗಿ ನೆಲದ ಮೇಲೆ ಮಲಗಿ. ಅನಂತರ ಉಸಿರು ಬಿಟ್ಟು ಎದೆ, ಕುತ್ತಿಗೆ ನೆಲದಿಂದ ಮೇಲೆ ಮಾಡಿ ಬೆನ್ನು ಬಗ್ಗಿಸಿ ತಲೆಯ ನಡು ನೆತ್ತಿಯನ್ನು ನೆಲದ ಮೇಲೆ ಇಡಿ. ಕಾಲ ಬೆರಳುಗಳನ್ನು ಕೈಗಳಿಂದ ಹಿಡಿದಿರಲಿ. ಈ ಆಸನದಲ್ಲಿ ಸಮ ಉಸಿರಾಟ ನಡೆಸುತ್ತ ಅರ್ಧ ನಿಮಿಷದಿಂದ ಒಂದು ನಿಮಿಷ ಕಾಲ ಇರಿ. ತುಸು ವಿಶ್ರಾಂತಿ ಪಡೆಯಿರಿ.
ಇದನ್ನೂ ಓದಿ ಕುಡುಕರ ತಾಣವಾದ ಪಶುವೈದ್ಯ ಆಸ್ಪತ್ರೆ
ಪ್ರಯೋಜನ: ವಿಸ್ತರಿಸಿದ ಮೇಲಿನ ದೇಹವು ಅನಿಯಂತ್ರಿತ ಗಾಳಿಯ ಹರಿವನ್ನು ಅನುಮತಿಸುತ್ತದೆ. ಹೀಗಾಗಿ ಶ್ವಾಸಕೋಶಕ್ಕೆ ಹೆಚ್ಚುವರಿ ಆಮ್ಲಜನಕವನ್ನು ಒದಗಿಸುತ್ತದೆ. ಇದು ಸುಲಭವಾಗಿ ಉಸಿರಾಡಲು ಅನುವು ಮಾಡಿಕೊಡಲು ಶ್ವಾಸನಾಳದ ಕೊಳವೆಗಳನ್ನು ವಿಸ್ತರಿಸುತ್ತದೆ. ಅಸ್ತಮಾ ರೋಗಿಗಳಿಗೆ ಇದು ವಿಶೇಷವಾಗಿ ಉಪಯುಕ್ತವಾಗಿದೆ. ಕುತ್ತಿಗೆ ಮತ್ತು ಬೆನ್ನುಮೂಲೆಯ ಹಿಗ್ಗಿಸುವಿಕೆಯು ಪ್ಯಾರಾಥೈರಾಯ್್ಡ ಪೀನಲ್, ಪಿಟ್ಯುಟರಿ ಮತ್ತು ಮೂತ್ರಜನಕಾಂಗದ ಗ್ರಂಥಿಗಳ ಕಾರ್ಯಗಳನ್ನು ಸ್ಥಿರಗೊಳಿಸುತ್ತದೆ. ಹೊಟ್ಟೆಯ ಸ್ನಾಯುಗಳನ್ನು, ಗಂಟಲಿನ ಅಂಗಳನ್ನು ಮತ್ತು ಕತ್ತಿನ ಮುಂಭಾಗವನ್ನು ಹಿಗ್ಗಿಸುತ್ತದೆ ಮತ್ತು ಉತ್ತೇಜಿಸುತ್ತದೆ. ಇದು ತಲೆಗೆ ರಕ್ತ ಪೂರೈಕೆಯನ್ನು ಹೆಚ್ಚಿಸುತ್ತದೆ.
ಸೂಚನೆ: ಹೃದಯದ ಸಮಸ್ಯೆ, ಅಲ್ಸರ್, ಹರ್ನಿಯಾ, ಅಧಿಕ ರಕ್ತದೊತ್ತಡ, ಮೈಗ್ರೇನ್, ಕುತ್ತಿಗೆ ಗಾಯ ಅಥವಾ ನೋವು ಹೊಂದಿದ್ದರೆ ಈ ಭಂಗಿಯ ಅಭ್ಯಾಸ ಬೇಡ.
ಗಂಟಲಿನ ಆರೋಗ್ಯಕ್ಕೆ ಯಾವ ಆಸನಗಳು ಸಹಕಾರಿ ಎಂದು ತಿಳಿಸಿ.
| ಪ್ರೀತಮ್ 19 ವರ್ಷ, ಬೆಳ್ತಂಗಡಿ
ಕುತ್ತಿಗೆಯನ್ನು ವಿಸ್ತರಿಸುವ ಮತ್ತು ಬಾಗುವಿಕೆ ಭಂಗಿ ಸಹಕಾರಿಯಾಗುತ್ತದೆ. ಯೋಗದಲ್ಲಿ ಅಂದರೆ ಕುತ್ತಿಗೆಗೆ ದೈಹಿಕ ಸಂಬಂಧವನ್ನು ಹೊಂದಿರುವ ವಿಶುದ್ಧಿ ಚಕ್ರವನ್ನು ತೆರೆಯುವ ಭಂಗಿಗಳನ್ನು ಮಾಡುವುದು.
ಆಸನಗಳು: ಚಕ್ರಾಸನ, ಅರ್ಧಚಕ್ರಾಸನ, ಉಷ್ಟ್ರಾಸನ, ಅರ್ಧ ಉಷ್ಟ್ರಾಸನ, ಪಾದಹಸ್ತಾಸನ, ಮಾರ್ಜಾಲಾಸನ, ಮತ್ಸಾ ್ಯನ, ವೀರಭದ್ರಾಸನ, ಪರ್ವತಾಸನ, ಸೇತುಬಂಧ, ಸರ್ವಾಂಗಾಸನ, ಹಲಾಸನ, ಭುಜಂಗಾಸನ, ಧನುರಾಸನ, ಶವಾಸನ ಹಾಗೂ ಜಾಲಂಧರ ಬಂದ ಇತ್ಯಾದಿ.
ಪ್ರಾಣಾಯಾಮ: ಉಜ್ಜಾಯೀ, ಭ್ರಾಮರೀ, ನಾಡೀಶುದ್ಧಿ.
ಸ್ವಲ್ಪ ಹೊತ್ತು ವಿಶುದ್ಧಿ ಚಕ್ರದ ಬಣ್ಣ ನೀಲಿಯನ್ನು ಗಮನಿಸುವುದು. ಶಂಖಮುದ್ರೆಯಲ್ಲಿ 108 ಬಾರಿ ‘ಹಂ’ ಮಂತ್ರವನ್ನು ಪಠಿಸಿ.