ಹೆಚ್ಚು ಮೊಟ್ಟೆ ತಿಂತಿರಾ? ಈ ಅಪಾಯಕಾರಿ ಅಡ್ಡಪರಿಣಾಮಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು!

Eggs Health
Published on

ಆಮ್ಲೆಟ್​, ಬೇಯಿಸಿದ ಮೊಟ್ಟೆ, ಮೊಟ್ಟೆ ಫ್ರೈ, ಎಗ್​ ಬುರ್ಜಿ, ಎಕ್​ ಕರ್ರಿ ಹೀಗೆ ಸಾಕಷ್ಟು ಮೊಟ್ಟೆ ರೆಸಿಪಿಗಳು ಇವೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ರೆಸಿಪಿ ಇಷ್ಟವಾಗುತ್ತದೆ. ಮೊಟ್ಟೆಯು ರುಚಿಯನ್ನು ಮಾತ್ರ ಹೊಂದಿಲ್ಲ. ಉತ್ತಮವಾದ ಆರೋಗ್ಯಕರ ಅಂಶಗಳನ್ನು ಹೊಂದಿದೆ.

ಮೊಟ್ಟೆಯಲ್ಲಿ ಅಧಿಕ ಪ್ರಮಾಣದಲ್ಲಿ ಪ್ರೋಟೀನ್​ ಇದೆ. ಪ್ರೋಟೀನ್ ಜೊತೆಗೆ ದೇಹಕ್ಕೆ ಬೇಕಾದ ಉತ್ತಮವಾದ ರೋಗನಿರೋಧಕಗಳು ಮತ್ತು ಖನಿಜಗಳನ್ನು ಸಹ ಒಳಗೊಂಡಿದೆ. ಇದು ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿಡಲು ಸಹ ಸಹಾಯ ಮಾಡುತ್ತದೆ. ಮೊಟ್ಟೆ ತಿನ್ನುವುದು ಎಷ್ಟು ಪ್ರಯೋಜನವೋ, ಹೆಚ್ಚು ಮೊಟ್ಟೆಗಳನ್ನು ತಿನ್ನುವುದು ಅಷ್ಟೇ ಅನಾನುಕೂಲಗಳೂ ಇವೆ.

ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಮೊಟ್ಟೆಯನ್ನು ಹೆಚ್ಚು ತಿನ್ನಬಾರದು. ಹೆಚ್ಚು ಮೊಟ್ಟೆಗಳನ್ನು ತಿನ್ನುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ. ಇದು ಹೃದಯಾಘಾತದ ಅಪಾಯವನ್ನೂ ಹೆಚ್ಚಿಸುತ್ತದೆ. ಅಧ್ಯಯನದ ಪ್ರಕಾರ, ಮೊಟ್ಟೆಯನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗಿ ಹೃದ್ರೋಗದ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ.

ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳಿಗೆ ಸಾಮಾನ್ಯವಾಗಿ ಮೊಟ್ಟೆಗಳನ್ನು ತಿನ್ನದಂತೆ ಅಥವಾ ಅಲ್ಪ ಪ್ರಮಾಣದಲ್ಲಿ ಮೊಟ್ಟೆಗಳನ್ನು ತಿನ್ನಲು ಸಲಹೆ ನೀಡಲಾಗುತ್ತದೆ. ತಜ್ಞರ ಪ್ರಕಾರ ರೋಗಿಯು ಮೊಟ್ಟೆಯ ಹಳದಿ ಭಾಗವನ್ನು ತೆಗೆದುಕೊಂಡು ತಿನ್ನಬಹುದು. ಇದು ಹೆಚ್ಚಿನ ಕೊಬ್ಬಿನಂಶವನ್ನು ಹೊಂದಿದೆ. ಆದರೆ, ಅಧಿಕ ರಕ್ತದೊತ್ತಡ ಹೊಂದಿರುವ ಜನರಿಗೆ ಇದು ಹಾನಿಕಾರಕವಾಗಿದೆ.

ಹೆಚ್ಚು ಮೊಟ್ಟೆಗಳನ್ನು ಸೇವಿಸುವುದರಿಂದ ನಿಮ್ಮ ತೂಕವನ್ನು ಹೆಚ್ಚಿಸುವುದು ಮಾತ್ರವಲ್ಲದೆ ದೇಹದಲ್ಲಿ ಹೆಚ್ಚುವರಿ ಪ್ರೋಟೀನ್ ಮತ್ತು ಕೊಬ್ಬನ್ನು ಹೆಚ್ಚಿಸುತ್ತದೆ. ಇವುಗಳನ್ನು ಹೆಚ್ಚು ತಿಂದರೆ ಬಿಪಿ ಕೂಡ ಹೆಚ್ಚುತ್ತದೆ. ಅಲ್ಲದೆ ಮಧುಮೇಹದ ಅಪಾಯವನ್ನೂ ಹೆಚ್ಚಿಸುತ್ತದೆ. ಮೊಟ್ಟೆಯು ಇನ್ಸುಲಿನ್ ಪ್ರತಿರೋಧವನ್ನು ಸಹ ಹೆಚ್ಚಿಸುತ್ತದೆ. ಆದ್ದರಿಂದ ಮೊಟ್ಟೆ ತಿನ್ನುವಾಗ ಎಚ್ಚರಿಕೆಯಿಂದಿರಿ. ಯಾವುದು ಅತಿಯಾಗದಿರಲಿ. ತಜ್ಞರ ಪ್ರಕಾರ ಆರೋಗ್ಯವಂತ ವ್ಯಕ್ತಿಯು ದಿನಕ್ಕೆ ಎರಡರಿಂದ ಮೂರು ಮೊಟ್ಟೆಗಳನ್ನು ಮಾತ್ರ ಸೇವಿಸಬೇಕು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net