ಗ್ಯಾಸ್​ ಸ್ಟವ್​ ಈ ಬಣ್ಣದಲ್ಲಿ ಉರಿದರೆ ಕೂಡಲೇ ಎಚ್ಚೆತ್ತುಕೊಳ್ಳಿ! ಇಲ್ಲದಿದ್ರೆ ಡೇಂಜರ್​, ಉಪಯುಕ್ತ ಮಾಹಿತಿ ಇಲ್ಲಿದೆ... Gas Stove

Gas Stove
Published on

Gas Stove : ಅಸ್ತಮಾ ಮತ್ತು ತಲೆನೋವು ಇಂದು ಅನೇಕ ಜನರಲ್ಲಿ ಸಾಮಾನ್ಯ ಕಾಯಿಲೆಗಳಾಗಿವೆ. ಈ ರೋಗಗಳು ಪುರುಷರಿಗಿಂತ ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಇದಕ್ಕೆ ಕಾರಣವನ್ನು ಹುಡುಕುತ್ತಾ ಹೋದರೆ ಅರ್ಧದಷ್ಟು ಮಂದಿ ಅಡುಗೆ ಮನೆಯ ಲಿಂಕ್​ ಆಗುತ್ತದೆ. ಏಕೆಂದರೆ, ಅಡುಗೆ ಮನೆಯು ಗೃಹಿಣಿಯರಲ್ಲಿ ಅನೇಕ ಆರೋಗ್ಯ ಸಮಸ್ಯೆಗಳ ಮೂಲವಾಗಿದೆ. ಅನೇಕ ಮಹಿಳೆಯರು ಗ್ಯಾಸ್ ಸ್ಟವ್​ನಲ್ಲಿ ದೀರ್ಘಕಾಲ ಅಡುಗೆ ಮಾಡುತ್ತಾರೆ.

ಗೃಹಿಣಿಯರು ಗ್ಯಾಸ್ ಸ್ಟವ್​ಗಳಿಗೆ ಹೆಚ್ಚು ಒಡ್ಡಿಕೊಳ್ಳುವುದರಿಂದ ಉಸಿರಾಟದ ತೊಂದರೆ ಮತ್ತು ತಲೆನೋವು ಉಂಟಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಗ್ಯಾಸ್ ಸ್ಟವ್ ಅನ್ನು ಉರಿಸುವಾಗ ಜ್ವಾಲೆಯ ಬಣ್ಣ ಬದಲಾವಣೆಯು ಕೂಡ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಸಾಮಾನ್ಯವಾಗಿ, ಸ್ಟವ್​ ಉರಿಯುವಾಗ ನೀಲಿ ಜ್ವಾಲೆಗಳು ಉತ್ಪತ್ತಿಯಾದರೆ. ಭಯಪಡುವಂಥದ್ದೇನೂ ಇಲ್ಲ. ಆದರೆ ಜ್ವಾಲೆಗಳು ಕೆಂಪು ಅಥವಾ ಹಳದಿಯಾಗಿದ್ದರೆ, ನೀವು ಜಾಗರೂಕರಾಗಿರಬೇಕು. ಈ ಬಣ್ಣ ಬದಲಾವಣೆಯು ಒಲೆಯಿಂದ ಹೊರಸೂಸುವ ಕಾರ್ಬನ್ ಮಾನಾಕ್ಸೈಡ್ ಅನಿಲದಿಂದ ಉಂಟಾಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ.

ಬೆಂಕಿಯು ಕೆಂಪು ಅಥವಾ ಹಳದಿ ಬಣ್ಣದಲ್ಲಿ ಉರಿದರೆ ಕಾರ್ಬನ್ ಮಾನಾಕ್ಸೈಡ್ ಅನಿಲದ ಉಪಸ್ಥಿತಿಯನ್ನು ಸೂಚಿಸುತ್ತದೆ. ಇದು ಶ್ವಾಸಕೋಶ ಸೇರಿದಂತೆ ವಿವಿಧ ಅಂಗಗಳ ಮೇಲೆ ನೇರಪರಿಣಾಮ ಬೀರಬಹುದು. ಇದು ಭವಿಷ್ಯದಲ್ಲಿ ಅಸ್ತಮಾ, ತಲೆನೋವು ಮತ್ತು ಹೆಚ್ಚಿನದನ್ನು ಉಂಟುಮಾಡಬಹುದು.

ಕೊಳಕಿನಿಂದ ಮುಚ್ಚಿಹೋಗಿರುವ ಬರ್ನರ್ ತೂತುಗಳು ಜ್ವಾಲೆಯ ಬಣ್ಣ ಬದಲಾವಣೆಗೆ ಸಾಮಾನ್ಯ ಕಾರಣವಾಗಿದೆ. ಅಡಿಗೆ ಸೋಡಾ ಮತ್ತು ಬ್ರಶ್​ನಿಂದ ಬರ್ನರ್ ಅನ್ನು ಆಗಾಗ ಸ್ವಚ್ಛಗೊಳಿಸುವ ಮೂಲಕ ಈ ಸಮಸ್ಯೆಯನ್ನು ಸುಲಭವಾಗಿ ಸರಿಪಡಿಸಬಹುದು. ಇಲ್ಲದಿದ್ದರೆ, ನೀವು ವೃತ್ತಿಪರ ಗ್ಯಾಸ್ ಸ್ಟವ್ ರಿಪೇರಿ ತಂತ್ರಜ್ಞರಿಂದ ಸಹಾಯ ಪಡೆಯಬೇಕು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net