ಈ ಹಣ್ಣುಗಳನ್ನು ಸೇವಿಸಿದ ತಕ್ಷಣ ನೀರನ್ನು ಕುಡಿಯಬೇಡಿ..!

fruit mix
Published on

ಹಣ್ಣುಗಳನ್ನು ಸೇವಿಸುವ ಮೂಲಕ ನೀವು ಆರೋಗ್ಯವನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಳ್ಳಬಹುದು. ಆದರೆ ಹಣ್ಣುಗಳನ್ನು ಸೇವಿಸಿದ ತಕ್ಷಣ ನೀರನ್ನು ಕುಡಿಯಲು ಹೋಗಬೇಡಿ. ಏಕೆಂದರೆ ಈ ಒಂದು ತಪ್ಪಿನಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಾಗಾದರೆ ಯಾವ ಹಣ್ಣ ತಿಂದ ನಂತರ ನೀರು ಕುಡಿಯಬಾರದು ಎಂಬುದನ್ನು ನೋಡೋಣ.


ಬಾಳೆಹಣ್ಣು:
ಸಾಮಾನ್ಯವಾಗಿ ಹೆಚ್ಚಿನವರು ಪ್ರತಿನಿತ್ಯ ಬಾಳೆಹಣ್ಣು ತಿನ್ನಲು ಇಷ್ಟಪಡುತ್ತಾರೆ. ಆರೋಗ್ಯಕರ ಕೊಬ್ಬುಗಳು, ಕ್ಯಾಲ್ಸಿಯಂ ಇತ್ಯಾದಿ ಪೋಷಕಾಂಶಗಳು ಇದರಲ್ಲಿ ಕಂಡುಬರುವುದರಿಂದ ಇದರ ಸೇವನೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಬಾಳೆಹಣ್ಣು ತಿಂದ ತಕ್ಷಣ ನೀರು ಕುಡಿಯುವುದು ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ದೇಹದಲ್ಲಿ ಇನ್ಸುಲಿನ್ ಪ್ರಮಾಣವು ಹೆಚ್ಚಾಗಬಹುದು. ಅದಕ್ಕಾಗಿಯೇ ಬಾಳೆಹಣ್ಣು ತಿಂದ ತಕ್ಷಣ ನೀರು ಕುಡಿಯಬೇಡಿ.


ದಾಳಿಂಬೆ:
ದಾಳಿಂಬೆ ಹಣ್ಣು ತಿನ್ನುವುದರಿಂದ ಅದ್ಭುತ ಆರೋಗ್ಯ ಪ್ರಯೋಜನಗಳು ನಮಗೆ ಲಭಿಸುತ್ತದೆ. ಹಾಗೂ ಈ ಹಣ್ಣು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಆದರೆ ಇದನ್ನು ತಿಂದ ಕೂಡಲೇ ನೀರನ್ನು ಕುಡಿಯಬಾರದು. ಹೀಗೆ ಮಾಡುವುದರಿಂದ ವಾಕರಿಕೆ, ಅಸಿಡಿಟಿ ಮತ್ತು ವಾಂತಿ ಬರಬಹುದು.


ಕಲ್ಲಂಗಡಿ:
ಹೆಚ್ಚಾಗಿ ಜನರು ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಇದರಲ್ಲಿ ನೀರಿನಾಂಶ ಹೆಚ್ಚಿರುತ್ತದೆ. ನೀರಿನಾಂಶವಿರುವ ಈ ಹಣ್ಣುನ್ನು ತಿಂದ ಬಳಿಕ ನೀರು ಕುಡಿಯುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ಜೀರ್ಣಕ್ರಿಯೆ ಸಮಸ್ಯೆ ಕಾಡಬಹುದು.


ಪೇರಳೆ:
ಪೇರಳೆ ಫೈಬರ್, ವಿಟಮಿನ್ ಎ ಮತ್ತು ಸಿ, ಪೋಲಿಕ್ ಆಮ್ಲ, ಪೊಟ್ಯಾಸಿಯಂನ ಉತ್ತಮ ಮೂಲವಾಗಿದೆ. ಇದನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸಮಸ್ಯೆ ದೂರವಾಗುತ್ತದೆ. ಇದನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸಂಬಂಧಿ ದೂರವಾಗುತ್ತದೆಯಾದರೂ ಇದನ್ನು ತಿಂದ ತಕ್ಷಣ ನೀರು ಕುಡಿದರೆ ಜೀರ್ಣಾಂಗ ವ್ಯವಸ್ಥೆ ಹದಗೆಡಬಹುದು.


ನೇರಳೆ ಹಣ್ಣು:
ಮಧುಮೇಹ ರೋಗಿಗಳಿಗೆ ನೇರಳೆ ತುಂಬಾ ಪ್ರಯೋಜನಕಾರಿ ಹಣ್ಣು. ಅಲ್ಲದೆ ಇದರ ಬೀಜವೂ ಕೂಡ ಮಧುಮೇಹ ರೋಗಿಗಳಿಗೆ ಅತ್ಯುತ್ತಮ ಮನೆಮದ್ದಾಗಿದೆ. ನೀವೇನಾದರೂ ನೇರಳೆ ಹಣ್ಣನ್ನು ತಿಂದ ತಕ್ಷಣ ನೀರನ್ನು ಕುಡಿದರೆ ಕೆಮ್ಮು ಮತ್ತು ನೆಗಡಿ ಬರಬಹುದು. ಅದಕ್ಕಾಗಿ ಈ ಹಣ್ಣನ್ನು ತಿಂದ ತಕ್ಷಣ ನೀರು ಕುಡಿಯಬಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net