

Barley Benefits : ಬಾರ್ಲಿ ಧಾನ್ಯಗಳಲ್ಲಿ ಒಂದಾಗಿದೆ. ಬಾರ್ಲಿಯು ಯಾವುದೇ ದೀರ್ಘಕಾಲದ ಸಮಸ್ಯೆಗಳನ್ನು ಮತ್ತು ಸೋಂಕುಗಳನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ. ಬಾರ್ಲಿಯು ವಿವಿಧ ಪೋಷಕಾಂಶಗಳು ಮತ್ತು ಔಷಧೀಯ ಗುಣಗಳಿಂದ ಕೂಡಿದೆ. ಬಾರ್ಲಿಯನ್ನು ಆಯುರ್ವೇದದಲ್ಲಿಯೂ ಬಳಸಲಾಗುತ್ತದೆ. ಬಾರ್ಲಿ ಸೇವನೆಯು ಅನೇಕ ಸಮಸ್ಯೆಗಳನ್ನು ತಡೆಯುತ್ತದೆ.
ಬಾರ್ಲಿಯಲ್ಲಿರುವ ಪೋಷಕಾಂಶಗಳು: ಬಾರ್ಲಿ ಹುಲ್ಲಿನ ಜಾತಿಗೆ ಸೇರಿದ ಏಕದಳ ಧಾನ್ಯ. ನೋಡಲು ಥೇಟ್ ಭತ್ತದ ರೀತಿ ಕಂಡು ಬರುತ್ತದೆ. ಆದರೆ ಹೆಚ್ಚಿನ ಗ್ಲುಟೇನ್ ಅಂಶ ಹೊಂದಿ ರುತ್ತದೆ. ಬಾರ್ಲಿಯು ಮೆಗ್ನೀಸಿಯಮ್, ಮ್ಯಾಂಗನೀಸ್, ಕಬ್ಬಿಣ, ಕ್ಯಾಲ್ಸಿಯಂ, ಸತು, ತಾಮ್ರ, ಉತ್ಕರ್ಷಣ ನಿರೋಧಕಗಳು, ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಮತ್ತು ವಿಟಮಿನ್ಗಳನ್ನು ಒಳಗೊಂಡಿದೆ. ಬಾರ್ಲಿ ಸೇವನೆಯು ಅನೇಕ ಸಮಸ್ಯೆಗಳನ್ನು ತಡೆಯುತ್ತದೆ.
1) ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಬಾರ್ಲಿ ನೀರನ್ನು ಹೆಚ್ಚಾಗಿ ಸೇವಿಸುತ್ತಾರೆ. ಇದರಲ್ಲಿ ಆಹಾರದ ನಾರಿನಂಶ ಅಧಿಕವಾಗಿದೆ. ಆದ್ದರಿಂದ ಬಾರ್ಲಿ ನೀರನ್ನು ಸೇವಿಸುವುದರಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಸಕ್ಕರೆ ಮಟ್ಟವನ್ನು ನಿಯಂತ್ರಿಸಲಾಗುತ್ತದೆ.
2) ಬಾರ್ಲಿ ನೀರನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸಮಸ್ಯೆ ನಿವಾರಣೆಯಾಗುತ್ತದೆ. ಬಾರ್ಲಿಯಲ್ಲಿರುವ ಫೈಬರ್ ಅಂಶವು ಜೀರ್ಣಾಂಗವನ್ನು ಆರೋಗ್ಯಕರವಾಗಿಸುತ್ತದೆ. ಅಜೀರ್ಣ, ಮಲಬದ್ಧತೆ, ವಾಯು, ಎದೆಯುರಿ, ಅಸಿಡಿಟಿ, ಗ್ಯಾಸ್ ಮುಂತಾದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
3) ದೇಹದಲ್ಲಿರುವ ತ್ಯಾಜ್ಯ ವಸ್ತುಗಳು ಮತ್ತು ವಿಷಕಾರಿ ವಸ್ತುಗಳನ್ನು ತೆಗೆದುಹಾಕಲಾಗುತ್ತದೆ. ಆರೋಗ್ಯವನ್ನು ಹೆಚ್ಚಿಸುತ್ತದೆ.
4) ಬಾರ್ಲಿಯನ್ನು ಸೇವಿಸುವುದರಿಂದ ಅದರಲ್ಲಿರುವ ಪೋಷಕಾಂಶಗಳು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಇದು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸಹ ಕರಗಿಸುತ್ತದೆ.
5) ಬಾರ್ಲಿ ನೀರನ್ನು ನಿಯಮಿತವಾಗಿ ಸೇವಿಸಿದರೆ, ಇದು ಹೆಚ್ಚಿನ ಫೈಬರ್ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಆದ್ದರಿಂದ ಈ ನೀರು ತ್ವರಿತ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಬಾರ್ಲಿಯನ್ನು 3-4 ಗಂಟೆಗಳ ಕಾಲ ನೆನೆಯಲು ಹಾಕಿ. ನಂತರ 4 ವಿಷಲ್‌ಗಳವರೆಗೆ ಕುಕ್ಕರ್‌ನಲ್ಲಿ ಬೇಯಿಸಿಕೊಳ್ಳಿ. ಸಾಧ್ಯವಾದರೆ ಬಾರ್ಲಿ ಕಾಳುಗಳನ್ನು ನುಣ್ಣಗೆ ಬೇಯಿಸಿ ಕೊಂಡರೆ, ಇನ್ನೂ ಒಳ್ಳೆಯದು.ಇನ್ನು ಚೆನ್ನಾಗಿ ಬೆಂದಿರುವ ಬಾರ್ಲಿಯನ್ನು, ಕುಕ್ಕರ್ ನಿಂದ ಇನ್ನೊಂದು ಪಾತ್ರೆಗೆ ವರ್ಗಾಯಿಸಿ. ಸ್ವಲ್ಪ ಸಮಯದವರೆಗೆ ತಣಿಯಲು ಬಿಡಿ.ಒಮ್ಮೆ ಈ ಪಾನೀಯ ತಣ್ಣಗಾದ ಮೇಲೆ, ಇದಕ್ಕೆ ಅರ್ಧ ನಿಂಬೆ ಹಣ್ಣಿನ ರಸ ಸೇರಿಸಿ ಕುಡಿಯಿರಿ.
ಗಮನಿಸಿ: ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಈ ವಿವರಗಳನ್ನು ನಿಮಗೆ ಒದಗಿಸಲಾಗಿದೆ.