

Fenugreek health benifits:ಮೆಂತ್ಯ ಕಾಳು ಉತ್ತಮ ಪೋಷಕಾಂಶಗಳು ಮತ್ತು ಔಷಧೀಯ ಗುಣಗಳನ್ನು ಒಳಗೊಂಡಿದೆ.ಅಷ್ಟೇ ಅಲ್ಲದೆ, ಇದರಲ್ಲಿ ಮೆಗ್ನೀಶಿಯಮ್, ಕ್ಯಾಲ್ಸಿಯಂ, ವಿಟಮಿನ್ ಸಿ ಕೂಡ ಕಂಡು ಬರುತ್ತದೆ. ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡಿರುವ ಮೆಂತ್ಯ ಕಾಳನ್ನು ನೆನೆಸಿಡುವುದರಿಂದ ನೈಟ್ರಿಕ್ ಆಸಿಡ್ ಕೂಡ ಬಿಡುಗಡೆ ಆಗುತ್ತದೆ.
ವಿಟಮಿನ್ ಬಿ 6 ಸಮೃದ್ಧವಾಗಿರುವ ಮೆಂತ್ಯ ಕಾಳಿನಲ್ಲಿ ಐರನ್ ಅಂಶವೂ ಹೆರಳವಾಗಿದೆ. ಜೊತೆಗೆ ಇದು ಆಂಟಿ ಫಂಗಲ್, ಆಂಟಿ ಬ್ಯಾಕ್ಟೀರಿಯಾ ಔಷಧೀಯ ತತ್ವಗಳನ್ನು ಕೂಡ ಒಳಗೊಂಡಿದೆ.
ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಮತ್ತು ಹಲವು ಔಷಧೀಯ ಗುಣಗಳನ್ನು ಒಳಗೊಂಡಿರುವ ಈ ಮೆಂತ್ಯ ಕಾಳುಗಳನ್ನು ಹೇಗೆ ಸೇವಿಸಬೇಕು.
ಮೆಂತ್ಯ ಕಾಳನ್ನು ಹೇಗೆ ಸೇವಿಸಬೇಕು?
ಇದಲ್ಲದೆ, ಮೆಂತ್ಯ ಕಾಳಿನ ಕಷಾಯವನ್ನೂ ಸಹ ತಯಾರಿಸಿ ಸೇವಿಸಬಹುದು.
ಮೆಂತ್ಯ ಕಾಳನ್ನು ಹುರಿದು ಪುಡಿಮಾಡಿ ಅದರೊಂದಿಗೆ ಬೆಲ್ಲವನ್ನು ಬೆರೆಸಿ ಉಂಡೆ ತಯಾರಿಸಿ ಸೇವಿಸಬಹುದು. ಆದರೆ, ನೆನೆಪಿಡಿ ತುಂಬಾ ಚಿಕ್ಕ ಉಂಡೆಗಳನ್ನಷ್ಟೇ ತಯಾರಿಸಿ ಸೇವಿಸಿ.
ಬಾಣಂತಿಯರು ಮೆಂತ್ಯ ಕಾಳಿನ ಉಂಡೆಯನ್ನು ತುಪ್ಪದೊಂದಿಗೆ ಬೆರೆಸಿ ತಿನ್ನುವುದರಿಂದ ಹಾಲಿನ ಉತ್ಪತ್ತಿ ಹೆಚ್ಚಾಗುತ್ತದೆ. (ನಿತ್ಯ ಒಂದೆರಡು ಚಮಚವಷ್ಟೇ ಸೇವಿಸಿ)
ಮೆಂತ್ಯ ಪೇಸ್ಟ್: ಮೆಂತ್ಯ ಕಾಳುಗಳನ್ನು ರಾತ್ರಿಯಿಡೀ ನೆನೆಸಿ, ಬೆಳಿಗ್ಗೆ ನುಣ್ಣಗೆ ರುಬ್ಬಿ ಬಳಸಬಹುದು.
ಮೆಂತ್ಯ ಸೇವನೆಯಿಂದ ಇನ್ಸುಲಿನ್ ಉತ್ಪಾದನೆ ಹೆಚ್ಚಾಗುವುದರಿಂದ ಡಯಾಬಿಟಿಸ್ ಗೆ ತುಂಬಾ ಪ್ರಯೂಜನಕಾರಿ
ಪುರುಷತ್ವದ ಸಮಸ್ಯೆ ಇರುವ ಪುರುಷರಿಗೆ ಇದು ಪ್ರಯೋಜನಕಾರಿ.
ಕೆಲವು ಚರ್ಮದ ಸಮಸ್ಯೆಗಳಿಗೆ ಮೆಂತ್ಯ ಸೇವನೆ ಪರಿಣಾಮಕಾರಿ ಮನೆಮದ್ದು. ಆದರೆ, ನೆನಪಿಡಿ ಕಫ ಪ್ರಧಾನವಾಗಿ ಬರುವ ಚರ್ಮವ್ಯಾದಿಗಳಲ್ಲಿ ಚರ್ಮದ ಸಮಸ್ಯೆ ಉಲ್ಬಣಿಸಬಹುದು