ತೆಂಗಿನ ಎಣ್ಣೆಯಲ್ಲಿ ಈ ಮೂರನ್ನು ಮಿಕ್ಸ್​ ಮಾಡಿ...ಕೂದಲು ಬೆಳೆಯೋದನ್ನು ಯಾರಿಂದಲೂ ತಡೆಯಲಾಗದು | Coconut Oil

Coconut Oil
Published on

Coconut Oil : ಬದಲಾಗುತ್ತಿರುವ ಜೀವನಶೈಲಿ, ಬದಲಾಗುತ್ತಿರುವ ಆಹಾರ ಪದ್ಧತಿ ಮನುಷ್ಯನ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಹಾಗೆಯೇ ಮನುಷ್ಯ ತನ್ನ ಪಂಚಪ್ರಾಣ ಎಂದುಕೊಳ್ಳುವ ಕೇಶರಾಶಿಯು ಕೂಡ ಈಗಿನ ಜೀವನ ಶೈಲಿಯಿಂದ ಉದುರಿ ಹೋಗುತ್ತಿವೆ. ಕೆಲವರಿಗಂತೂ ಬಹಳ ಚಿಕ್ಕ ವಯಸ್ಸಿನಲ್ಲೇ ಬೋಳು ತಲೆ ಬರುತ್ತಿದೆ. ಕೆಲವರಿಗೆ ಇದು ವಂಶವಾಹಿಯಾದರೆ, ಇನ್ನು ಕೆಲವರಿಗೆ ಅವರ ನಿರ್ಲಕ್ಷ್ಯವೇ ಕಾರಣ.

ಮನುಷ್ಯನಿಗೆ ಹಣ ಕಳೆದುಕೊಂಡರೂ ದುಃಖವಾಗುವುದಿಲ್ಲ ಆದರೆ, ಒಂದೇ ಒಂದು ಕೂದಲು ಉದುರಿದರೂ ಕೋಟಿ ರೂಪಾಯಿ ಕಳೆದುಕೊಂಡಷ್ಟು ನೋವು ಅನುಭವಿಸುತ್ತಾನೆ. ಎಷ್ಟೇ ಕಾಳಜಿ ವಹಿಸಿದರೂ ಕೂದಲು ತೆಳುವಾಗುತ್ತಲೇ ಇದೆ ಎಂಬ ಚಿಂತೆಯಲ್ಲೇ ಮುಳುಗಿಬಿಡುತ್ತಾರೆ. ಅದರ ಚಿಂತೆ ಬಿಡಿ. ಕೂದಲನ್ನು ಬಲಿಷ್ಠಗೊಳಿಸಲು ಏನು ಮಾಡಬೇಕೆಂದು ನಾವೀಗ ತಿಳಿದುಕೊಳ್ಳೋಣ.

ಏನು ಮಾಡಬೇಕು?

ತೆಂಗಿನ ಎಣ್ಣೆಯಲ್ಲಿ 100 ಮಿಲಿ ಆಲಿವ್ ಎಣ್ಣೆ, 50 ಮಿಲಿ ಬಾದಾಮಿ ಎಣ್ಣೆ ಹಾಗೂ 30 ಮಿಲಿ ಕ್ಯಾಸ್ಟರ್ ಆಯಿಲ್ ಅಥವಾ ಹರಳೆಣ್ಣೆ ಮಿಶ್ರಣ ಮಾಡಿ. ಈ ಮೂರನ್ನು ಸೇರಿಸಿ ಕೂದಲಿಗೆ ಹಚ್ಚಿದರೆ ಕೂದಲು ತುಂಬಾ ದಟ್ಟವಾಗಿ ಬೆಳೆಯುತ್ತದೆ. ಇದಿಷ್ಟೇ ಅಲ್ಲದೆ, ಇನ್ನೊಂದು ವಿಧಾನವಿದೆ. ಅದೇನೆಂದರೆ, ಈರುಳ್ಳಿ ಎಣ್ಣೆಯು ಕೂಡ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಏನು ಮಾಡಬೇಕೆಂದರೆ, 200 ಗ್ರಾಂ ತೆಂಗಿನ ಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ತೆಗೆದುಕೊಳ್ಳಿ. ಇವುಗಳನ್ನು ಒಂದು ಪಾತ್ರೆಯಲ್ಲಿ ಬಿಸಿ ಮಾಡಿ ಮತ್ತು ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಚೂರುಗಳು ಹಾಗೂ ಒಂದು ಕಪ್ ಕರಿಬೇವಿನ ಎಲೆಗಳನ್ನು ಅದಕ್ಕೆ ಸೇರಿಸಿ. ಇವೆಲ್ಲವನ್ನೂ ಒಟ್ಟಾಗಿ ಕೂದಲಿಗೆ ಹಚ್ಚುವುದರಿಂದ ಉತ್ತಮ ಪೋಷಣೆ ದೊರೆಯುತ್ತದೆ ಮತ್ತು ಕೂದಲು ಡಬಲ್ ವೇಗದಲ್ಲಿ ಬೆಳೆಯುತ್ತದೆ. ಅಲ್ಲದೆ, ತುಂಬಾ ಮೃದುವಾಗುತ್ತದೆ.

ಇನ್ನು ಕೂದಲು ಮುಖ್ಯವಾಗಿ ಪ್ರೋಟೀನ್‌ನಿಂದ ಮಾಡಲ್ಪಟ್ಟಿದೆ. ಹೀಗಾಗಿ ಪ್ರೋಟೀನ್ ಭರಿತ ಆಹಾರಗಳಾದ ಕೋಳಿ, ಮೀನು, ಮೊಟ್ಟೆ, ಡೈರಿ ಉತ್ಪನ್ನಗಳು ಮತ್ತು ಬೀನ್ಸ್ ಅನ್ನು ನಿಯಮಿತವಾಗಿ ಸೇವಿಸುವುದು ಮುಖ್ಯ. ಅಲ್ಲದೆ, ವಿಟಮಿನ್ ಎ, ಸಿ, ಇ, ಬಿ ಕಾಂಪ್ಲೆಕ್ಸ್ ವಿಟಮಿಟ್​ಗಳು, ಸತು, ಕಬ್ಬಿಣಾಂಶಗಳು ಕೂದಲಿನ ಆರೋಗ್ಯಕ್ಕೆ ಅತ್ಯಗತ್ಯ. ಇದು ಹಣ್ಣುಗಳು, ತರಕಾರಿಗಳು ಹಾಗೂ ಬೀಜಗಳಂತಹ ಆಹಾರಗಳಲ್ಲಿ ಕಂಡುಬರುತ್ತದೆ.

ಆಲಿವ್ ಎಣ್ಣೆ, ಆವಕಾಡೊ ಹಾಗೂ ಬೀಜಗಳಂತಹ ಆರೋಗ್ಯಕರ ಕೊಬ್ಬುಗಳು ಕೂದಲಿಗೆ ಉತ್ತಮ ತೇವಾಂಶವನ್ನು ನೀಡುತ್ತದೆ. ಅಲ್ಲದೆ, ಸಾಕಷ್ಟು ನೀರು ಕುಡಿಯುವುದು ಕೂದಲಿನ ಆರೋಗ್ಯಕ್ಕೆ ಬಹಳ ಮುಖ್ಯ. ನೀರು ಕುಡಿದರಷ್ಟೇ ಸಾಲದು, ಕೂದಲಿನ ಆರೋಗ್ಯಕ್ಕೆ ಸಾಕಷ್ಟು ನಿದ್ರೆಯು ಕೂಡ ಬಹಳ ಮುಖ್ಯ. ಇದರೊಂದಿಗೆ ಪ್ರತಿನಿತ್ಯ ಸ್ವಲ್ಪ ಹೊತ್ತು ವ್ಯಾಯಾಮ ಮಾಡಬೇಕು. ಇದರಿಂದ ದೇಹದಲ್ಲಿ ರಕ್ತ ಸಂಚಾರ ಸುಧಾರಿಸುತ್ತದೆ. ಒತ್ತಡವು ಕೂಡ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಹಾಗಾಗಿ, ಒತ್ತಡವನ್ನು ನಿವಾರಿಸುವತ್ತ ಗಮನ ಹರಿಸಬೇಕು.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net