Cockroach Control: ಪ್ರತಿಯೊಬ್ಬ ಗೃಹಿಣಿಯನ್ನೂ ಕಾಡುವ ಅತಿದೊಡ್ಡ ಸಮಸ್ಯೆ ಎಂದರೆ ಅಡುಗೆಮನೆಯಲ್ಲಿ ಓಡಾಡುವ ಜಿರಳೆಗಳು. ಇವು ಕೇವಲ ನೋಡಲು ಅಸಹ್ಯವಾಗಿರುವುದು ಮಾತ್ರವಲ್ಲದೆ, ಬ್ಯಾಕ್ಟೀರಿಯಾಗಳನ್ನು ಹರಡುವ ಮೂಲಕ ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತವೆ. ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ರಾಸಾಯನಿಕ ಸ್ಪ್ರೇಗಳು ತಾತ್ಕಾಲಿಕ ಪರಿಹಾರ ನೀಡಿದರೂ, ಅವುಗಳ ವಾಸನೆ ಆರೋಗ್ಯಕ್ಕೆ ಹಾನಿಕಾರಕ. ಆದರೆ, ನಮ್ಮ ಅಡುಗೆಮನೆಯಲ್ಲಿಯೇ ಇರುವ ಕೆಲವು ಅಗ್ಗದ ವಸ್ತುಗಳನ್ನು ಬಳಸಿ ಜಿರಳೆಗಳನ್ನು ಶಾಶ್ವತವಾಗಿ ಓಡಿಸಬಹುದು ಎಂಬುದು ಅನೇಕರಿಗೆ ತಿಳಿದಿಲ್ಲ. ಹಾಗಿದ್ದರೆ ಯಾವ ವಸ್ತುಗಳನ್ನು ಬಳಸಿದರೆ ಜಿರಳೆ ಓಡಿ ಹೋಗುತ್ತದೆ ಎಂದು ನೋಡೋಣ ಬನ್ನಿ..