

ಗೋಡಂಬಿ ಒಣ ಆಹಾರವಾಗಿದ್ದರೂ, ಇದನ್ನು ಪ್ರತಿದಿನ ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಗೋಡಂಬಿ ನಮ್ಮ ಸೌಂದರ್ಯವನ್ನು ಬದಲಾಯಿಸಲು ಸಹ ಸಹಾಯ ಮಾಡುತ್ತದೆ. ಇದರಿಂದ ನಮ್ಮ ಮುಖದ ಹೊಳಪು ಹೆಚ್ಚುತ್ತದೆ ಮತ್ತು ಕೂದಲು ಕೂಡ ಸ್ಟ್ರಾಂಗ್ ಆಗುತ್ತದೆ. ಗೋಡಂಬಿ ತಿನ್ನುವುದರಿಂದ ಹಲವು ರೀತಿಯ ಆರೋಗ್ಯ ಪ್ರಯೋಜನಗಳಿವೆ. ತೂಕ ಇಳಿಕೆಗೆ ಗೋಡಂಬಿ ತಿನ್ನುವುದು ಉತ್ತಮ ಎಂದೆಲ್ಲಾ ನಾವು ಕೇಳಿರುತ್ತೇವೆ. ಅದರೆ ಗೋಡಂಬಿ ತಿನ್ನುವುದರಿಂದ ನಿಜಕ್ಕೂ ತೂಕ ಇಳಿಯುವುದೇ, ಗೊಡಂಬಿ ತೂಕ ಹೆಚ್ಚಿಸುವುದೇ, ಇದನ್ನ ತಿನ್ನುವುದರಿಂದಾಗುವ ಆರೋಗ್ಯ ಪ್ರಯೋಜನಗಳೇನು ಎಂಬ ಮಾಹಿತಿ ಇಲ್ಲಿದೆ.
ಗೋಡಂಬಿಯ ಆರೋಗ್ಯ ಪ್ರಯೋಜನ
ಹೃದಯದ ಆರೋಗ್ಯಕ್ಕೆ ಉತ್ತಮ: ಗೋಡಂಬಿಯಲ್ಲಿ ಮೊನೊಸ್ಯಾಚುರೇಟೆಡ್ ಮತ್ತು ಪಾಲಿಅನ್‌ಸ್ಯಾಚುರೇಟೆಡ್ ಕೊಬ್ಬಿನಾಂಶವಿದೆ. ಇದು ಎಲ್‌ಡಿಎಲ್ (ಕೆಟ್ಟ ಕೊಲೆಸ್ಟ್ರಾಲ್) ಮಟ್ಟವನ್ನು ಕಡಿಮೆ ಮಾಡಲು ಹಾಗೂ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನಿಮ್ಮ ಚರ್ಮವು ಎಣ್ಣೆಯುಕ್ತವಾಗಿದ್ದರೆ, ಗೋಡಂಬಿಯನ್ನು ರಾತ್ರಿಯಲ್ಲಿ ಹಾಲಿನಲ್ಲಿ ನೆನೆಸಿಡಿ. ಬೆಳಗ್ಗೆ ಅದನ್ನು ನುಣ್ಣಗೆ ರುಬ್ಬಿಕೊಂಡು ಮುಲ್ತಾನಿ ಮಿಟ್ಟಿಯಲ್ಲಿ ಕಲಸಿ, ಅದಕ್ಕೆ ಸ್ವಲ್ಪ ನಿಂಬೆ ಅಥವಾ ಮೊಸರನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ.
ಗೋಡಂಬಿಯನ್ನು ನೆನೆಸಿದ ನಂತರ ಅದನ್ನು ರುಬ್ಬಿಕೊಂಡು ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿದರೆ ಮುಖದಲ್ಲಿ ಹೊಳಪು ಇರುತ್ತದೆ. ಇದರ ದೈನಂದಿನ ಬಳಕೆಯಿಂದ ಚರ್ಮವು ಕಾಂತಿಯುತವಾಗುತ್ತದೆ. ಗೋಡಂಬಿಯನ್ನು ಹಾಲಿಗೆ ಬೆರೆಸಿ ರುಬ್ಬಿ ತ್ವಚೆಗೆ ಹಚ್ಚಿಕೊಂಡರೆ ಚರ್ಮ ಸುಂದರ ಮತ್ತು ಮೃದುವಾಗುತ್ತದೆ. ಇದು ಮೈಬಣ್ಣವನ್ನು ಕೂಡ ಕಾಂತಿಯುತಗೊಳಿಸುತ್ತದೆ.
ಪೋಷಕಾಂಶ ಸಮೃದ್ಧ: ಗೋಡಂಬಿಯಲ್ಲಿ ವಿವಿಧ ಅವಶ್ಯ ಪೋಷಕಾಂಶಗಳು ಲಭ್ಯವಿರುತ್ತದೆ. ಇದರಲ್ಲಿ ಮೆಗ್ನಿಶಿಯಂ, ಫಾಸ್ಫರಸ್, ಸತು, ಕಬ್ಬಿಣಾಂಶ ಹೇರಳವಾಗಿದ್ದು ಮೂಳೆಗಳ ಆರೋಗ್ಯ, ನರಗಳ ಕಾರ್ಯ ಸುಧಾರಣೆ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ.
ಮಧುಮೇಹಿಗಳು ಗೋಡಂಬಿ ತಿನ್ನಬಹುದೇ?
ಖಂಡಿತವಾಗಿ ಮಧುಮೇಹಿಗಳು ಸಮತೋಲಿತ ಆಹಾರದ ಭಾಗವಾಗಿ ಗೋಡಂಬಿಯನ್ನು ತಿನ್ನಬಹುದು. ಗೋಡಂಬಿಯಲ್ಲಿ ಗ್ಲೈಸೆಮಿಕ್ ಅಂಶ ಮಧ್ಯಮ ಮಟ್ಟದಲ್ಲಿರುತ್ತದೆ. ಗ್ಲೈಸೆಮಿಕ್ ಅಂಶ ಹೆಚ್ಚಿರುವ ಆಹಾರಗಳಿಗೆ ಹೋಲಿಸಿದರೆ ಅವು ರಕ್ತದಲ್ಲಿನ ಸಕ್ಕರೆಯ ಮಟ್ಟಗಳ ಮೇಲೆ ಕ್ರಮೇಣ ಪರಿಣಾಮ ಬೀರುತ್ತದೆ. ಅವು ಆರೋಗ್ಯಕರ ಕೊಬ್ಬು, ನಾರಿನಾಂಶ, ಪ್ರೊಟೀನ್ ಅಂಶವನ್ನು ಒಳಗೊಂಡಿರುತ್ತದೆ. ಇದು ಕಾರ್ಬೋಹೈಡ್ರೇಟ್‌ಗಳ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ಮತ್ತು ಸಕ್ಕರೆಯ ಮಟ್ಟದ ಏರಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಆದರೆ ಮಧುಮೇಹಿಗಳು ಮಿತವಾಗಿ ಗೋಡಂಬಿ ಸೇವಿಸುವುದು ಉತ್ತಮ.