ಬೆಳಿಗ್ಗೆ ಎದ್ದ ತಕ್ಷಣ ಪಾದ ನೆಲಕ್ಕೆ ಊರಲು ಆಗ್ತಿಲ್ವಾ? 1 ರೂಪಾಯಿ ಖರ್ಚಿಲ್ಲದೆ ಹಿಮ್ಮಡಿ ನೋವಿಗೆ ಇಲ್ಲಿದೆ ಸರಳ ಮುಕ್ತಿ! Heel Pain Relief

 Heel Pain Relief ಸಾಂದರ್ಭಿಕ ಚಿತ್ರ
Heel Pain Relief ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಬೆಳಿಗ್ಗೆ ನಿಶ್ಯಬ್ದವಾಗಿ ನಿದ್ರೆಯಿಂದ ಎದ್ದು, ಉತ್ಸಾಹದಿಂದ ದಿನವನ್ನು ಆರಂಭಿಸಬೇಕು ಎನ್ನುವಷ್ಟರಲ್ಲಿ ಪಾದ ನೋವಾಗುತ್ತಾ?
  • ಪಾದ ನೆಲಕ್ಕೆ ತಾಕುತ್ತಿದ್ದಂತೆಯೇ ತೀವ್ರವಾದ ಚುಚ್ಚಿದಂತಹ ನೋವು ಕಾಣಿಸಿಕೊಳ್ಳುವುದು ತುಂಬಾ ಜನರ ಸಮಸ್ಯೆಯಾಗಿದೆ
  • ಕೆಲವರಿಗೆ ಈ ನೋವು ಎಷ್ಟು ತೀವ್ರವಾಗಿರುತ್ತದೆ ಎಂದರೆ, ಬೆಳಗಿನ ಮೊದಲ ಕೆಲವು ಹೆಜ್ಜೆಗಳನ್ನು ಇಡುವುದೂ ಸಹ ಕಷ್ಟ
  • ದೀರ್ಘಕಾಲದ ಸ್ಥಿತಿಗೆ ವೈದ್ಯಕೀಯ ಲೋಕದಲ್ಲಿ ಮುಖ್ಯ ಕಾರಣ "ಪ್ಲಾಂಟರ್ ಫ್ಯಾಸಿಟಿಸ್" ಎಂದು ಕರೆಯಲಾಗುತ್ತದೆ
Heel Pain Relief: ಬೆಳಿಗ್ಗೆ ನಿಶ್ಯಬ್ದವಾಗಿ ನಿದ್ರೆಯಿಂದ ಎದ್ದು, ಉತ್ಸಾಹದಿಂದ ದಿನವನ್ನು ಆರಂಭಿಸಬೇಕು ಎನ್ನುವಷ್ಟರಲ್ಲಿ ಪಾದ ನೆಲಕ್ಕೆ ತಾಕುತ್ತಿದ್ದಂತೆಯೇ ತೀವ್ರವಾದ ಚುಚ್ಚಿದಂತಹ ನೋವು ಕಾಣಿಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಅನೇಕ ಜನರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಯಾಗಿದೆ. ಬೆಳಿಗ್ಗೆ ಹಾಸಿಗೆಯಿಂದ ಎದ್ದಾಗ ಅನೇಕ ಜನರಿಗೆ ಈ ಹಿಮ್ಮಡಿ ನೋವು ಅತ್ಯಂತ ಪರಿಚಿತ ಹಾಗೂ ದೈನಂದಿನ ಕಿರಿಕಿರಿಯ ಸಮಸ್ಯೆಯಾಗಿದೆ.
ಕೆಲವರು ಇದನ್ನು ಸಾಮಾನ್ಯ ಆಯಾಸ ಅಥವಾ ಸಣ್ಣ ನೋವು ಎಂದು ನಿರ್ಲಕ್ಷಿಸಿದರೆ, ಇನ್ನು ಕೆಲವರಿಗೆ ಈ ನೋವು ಎಷ್ಟು ತೀವ್ರವಾಗಿರುತ್ತದೆ ಎಂದರೆ, ಬೆಳಗಿನ ಮೊದಲ ಕೆಲವು ಹೆಜ್ಜೆಗಳನ್ನು ಇಡುವುದೂ ಸಹ ದುಸ್ತರವಾಗಿ ಪರಿಣಮಿಸುತ್ತದೆ. ಈ ದೀರ್ಘಕಾಲದ ಸ್ಥಿತಿಗೆ ವೈದ್ಯಕೀಯ ಲೋಕದಲ್ಲಿ ಮುಖ್ಯ ಕಾರಣ "ಪ್ಲಾಂಟರ್ ಫ್ಯಾಸಿಟಿಸ್" (Plantar Fasciitis) ಎಂದು ಕರೆಯಲಾಗುತ್ತದೆ.
ಆದಾಗ್ಯೂ, ಹಿಮ್ಮಡಿ ನೋವು ಹಲವು ಕಾರಣಗಳಿಂದ ಉಂಟಾಗಬಹುದು. ದೀರ್ಘಕಾಲ ನಿಲ್ಲುವುದು, ಗಟ್ಟಿಯಾದ ಮೇಲ್ಮೈಗಳ ಮೇಲೆ ನಡೆಯುವುದು, ಸರಿಯಾದ ಪಾದರಕ್ಷೆಗಳನ್ನು ಬಳಸದೇ ಇರುವುದು ಮತ್ತು ದೇಹದ ಅತಿಯಾದ ತೂಕ ಕೂಡಾ ಪ್ರಮುಖ ಅಂಶಗಳಾಗಿವೆ. ಬೆಳಿಗ್ಗೆ ಎದ್ದಾಗ ಉಲ್ಬಣಗೊಳ್ಳುವ ಈ ನೋವು, ರಾತ್ರಿಯಿಡೀ ಪಾದವನ್ನು ವಿಶ್ರಾಂತಿ ಮಾಡಿದ ನಂತರ ಅಂಗಾಂಶವು ಮತ್ತೆ ಹಿಗ್ಗುವುದರಿಂದ ಉಂಟಾಗುವ ಪ್ರತಿಕ್ರಿಯೆಯಾಗಿದೆ.
ಈ ರೀತಿಯ ನೋವು ಕಾಣಿಸಿಕೊಂಡ ತಕ್ಷಣ ನೀವು ವೈದ್ಯರ ಬಳಿ ಹೋಗದೇ ಸರಳ ಮನೆಮದ್ದುಗಳಿಂದ ನೋವನ್ನು ಕಡಿಮೆ ಮಾಡಬಹುದು. ಹೇಗಂತೀರಾ? ಇಲ್ಲಿದೆ ನೋಡಿ ಮಾಹಿತಿ.
ಪಾದವನ್ನು ನಿಧಾನವಾಗಿ ಹಿಗ್ಗಿಸಿ
ಬೆಳಿಗ್ಗೆ ಹಾಸಿಗೆಯಿಂದ ಎದ್ದೇಳುವ ಮೊದಲು, ನಿಮ್ಮ ಪಾದವನ್ನು ನಿಧಾನವಾಗಿ ಹಿಗ್ಗಿಸಿ. ಬಟ್ಟೆ ಅಥವಾ ಬ್ಯಾಂಡ್‌ನಿಂದ ಪಾದವನ್ನು ನಿಮ್ಮ ಕಡೆಗೆ ಎಳೆಯುವ ಅಭ್ಯಾಸ ಮಾಡಿಕೊಳ್ಳಿ. ಅಥವಾ ನಿಮ್ಮ ಪಾದದ ಕೆಳಗೆ ತಣ್ಣೀರಿನ ಬಾಟಲಿಯನ್ನು ಸುತ್ತಿಕೊಳ್ಳಿ. ಇದು ನೋವು ಮತ್ತು ಊತವನ್ನು ಕಡಿಮೆ ಮಾಡುತ್ತದೆ.

ಬಿಸಿನೀರು ಮತ್ತು ಐಸ್ ಚಿಕಿತ್ಸೆ

ನಿಮ್ಮ ಪಾದಗಳನ್ನು ಬೆಚ್ಚಗಿನ ನೀರಿನಲ್ಲಿ ಇಡುವುದರಿಂದ ಸ್ನಾಯುಗಳು ಶಮನಗೊಳ್ಳುತ್ತವೆ. ಜೊತೆಗೆ ಐಸ್​ ಕ್ಯೂಬ್​ ಹಚ್ಚುವುದರಿಂದ ಉರಿಯೂತ ಕಡಿಮೆಯಾಗುತ್ತದೆ. ದಿನಕ್ಕೆ 10-15 ನಿಮಿಷಗಳ ಕಾಲ ಈ ಅಭ್ಯಾಸವನ್ನು ಮಾಡುವುದರಿಂದ ಶಾಶ್ವತ ಪರಿಹಾರ ಸಿಗುತ್ತದೆ.

ಸರಿಯಾದ ಪಾದರಕ್ಷೆಗಳನ್ನು ಆರಿಸಿ

ಯಾರು ಹಿಮ್ಮಡಿ ನೋವನ್ನು ಅನುಭವಿಸುತ್ತಾರೋ ಅಂತವರು ಮೃದುವಾದ, ಮೆತ್ತನೆಯ ಮತ್ತು ಪಾದಗಳಿಗೆ ಹೊಂದಿಕೆಯಾಗುವಂತಹ ಪಾದರಕ್ಷೆಗಳನ್ನು ಧರಿಸಬೇಕು. ಗಟ್ಟಿಯಾದ ಮೇಲ್ಮೈಗಳಲ್ಲಿ ಮತ್ತು ಒಳಾಂಗಣದಲ್ಲಿ ಬರಿಗಾಲಿನಲ್ಲಿ ನಡೆಯುವ ಅಭ್ಯಾಸವನ್ನು ತಪ್ಪಿಸಬೇಕು. ಇದರಿಂದ ಪಾದಗಳನ್ನು ಆರೈಕೆ ಮಾಡಿಕೊಳ್ಳಬಹುದು.

ಸಣ್ಣ ವ್ಯಾಯಾಮಗಳ ಮಹತ್ವ

ನಿಮ್ಮ ಕಾಲುಗಳ ಸ್ನಾಯುಗಳನ್ನು ಬಲಪಡಿಸುವ ನಿಯಮಿತ ವ್ಯಾಯಾಮಗಳನ್ನು ಮಾಡುವ ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ಪಾದ, ವಿಶೇಷವಾಗಿ ಕರು ಸ್ನಾಯುಗಳನ್ನು ಹಿಗ್ಗಿಸುವ ಸ್ಟ್ರೆಚಿಂಗ್‌ಗಳು ತುಂಬಾ ಪ್ರಯೋಜನಕಾರಿಯಾಗಿದೆ.
ಬೆಳಿಗ್ಗೆ ಹಿಮ್ಮಡಿ ನೋವು ಒಂದು ಸಣ್ಣ ಸಮಸ್ಯೆಯಂತೆ ಕಾಣಿಸಬಹುದು, ಆದರೆ ನಿರ್ಲಕ್ಷಿಸಿದರೆ ಅದು ಗಂಭೀರವಾಗಬಹುದು. ಹಾಗಾಗಿ ಸರಿಯಾದ ಕಾಳಜಿ ಮತ್ತು ಸರಳ ಮನೆಮದ್ದುಗಳನ್ನು ಬಳಸುವುದರಿಂದ ಈ ಸಮಸ್ಯೆಯನ್ನು ಯಾವುದೇ ವೆಚ್ಚವಿಲ್ಲದೇ ಪರಿಹಾರ ಪಡೆಯಬಹುದು. ನಿಮ್ಮ ಸಣ್ಣ ದೈನಂದಿನ ಅಭ್ಯಾಸ ಬದಲಾವಣೆಯೊಂದಿಗೆ ನೀವು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದು (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net