Broccoli benefits for skin: ಬ್ರೊಕೋಲಿಯನ್ನು ಹೃದಯದ ಆರೋಗ್ಯ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ ಎಂದು ಕರೆಯಲಾಗುತ್ತದೆ. ಆದರೆ, ಇದರಿಂದ ಚರ್ಮದ ಕಾಂತಿ, ಸಮಸ್ಯೆ ನಿವಾರಣೆ ಸಾಧ್ಯವೇ. ಇದನ್ನು ಆಹಾರದಲ್ಲಿ ನಿಯಮಿತವಾಗಿ ಬಳಕೆ ಮಾಡಿಕೊಂಡರೆ ಆಗುವ ಪ್ರಯೋಜನಗಳೇನು ಎನ್ನುವುದನ್ನು ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.
ವಯಸ್ಸಾಗುವಿಕೆಯನ್ನು ತಡೆಯುವ ಬ್ರೊಕೋಲಿ
‘ಆಂಟಿಬಯೋಟಿಕ್ಸ್’ ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನವೊಂದರ ಪ್ರಕಾರ ಬ್ರೊಕೋಲಿಯಲ್ಲಿ ವಿಟಮಿನ್ ಎ,ಸಿ ಹಾಗೂ ಇ ಆಂಟಿ ಆಕ್ಸಿಡೆಂಟ್ ಅಂಧವಿದೆ. ಇದು ಚರ್ಮದ ತೇವಾಂಶವನ್ನು ಸುಧಾರಿಸುತ್ತದೆ. ಜೊತೆಗೆ ಯುವಿ ರೇಸ್ ಅನ್ನು ಕಡಿಮೆ ಮಾಡಲು, ವಯಸ್ಸಾಗುವಿಕೆಯನ್ನಯನ್ನು ತಡೆಯಲು ಸಹಾಯ ಮಾಡುತ್ತದೆ. ಹಾಗೆಯೇ ಸೂರ್ಯನ ಕಿರಣಗಳಿಂದ ಹೊರಹೊಮ್ಮುವ ನೇರಳೆ ಕಿರಣಗಳಿಂದ ಚರ್ಮಕ್ಕೆ ಆಗುವ ಹಾನಿಯನ್ನು ತಡೆಗಟ್ಟುತ್ತದೆ ಎನ್ನಲಾಗಿದೆ.
ಬ್ರೊಕೋಲಿಯಲ್ಲಿ ವಿಟಮಿನ್ ಸಿ, ಎ,ಇ ಮತ್ತು ಕೆ ಪೋಷಕಾಂಶಗಳಿವೆ. ಆಂಟಿಆಕ್ಸಿಡೆಂಟ್ಗಳು ಸೆಲ್ಫೋರಾಫೆನ್ ಹಾಗೂ ಗ್ಲುಕೋಸಿನೊಲೇಟ್ಸ್ ಎಂಬ ಸಂಯುಕ್ತಗಳು ಚರ್ಮವನ್ನು ಬಿಗಿಯಾಗಿ ಹಿಡಿದಿಡುತ್ತವೆ. ಚರ್ಮದ ರಚನೆ ಕಾಪಾಡಲು, ಗಾಯವನ್ನು ಶೀಘ್ರವೇ ಪರಿಹರಿಸಲು ಇವು ಸಹಾಯ ಮಾಡುತ್ತವೆ ಎನ್ನಲಾಗಿದೆ.
ಮೊಡವೆ ನಿವಾರಣೆಗೆ ಮದ್ದು?
ಬ್ರೋಕೋಲಿಯಲ್ಲಿರುವ ಉರಿಯೂತ ನಿವಾರಕ ಗುಣ ಮತ್ತು ಪೋಷಕಾಂಶಗಳು ಚರ್ಮದ ಆರೋಗ್ಯವನ್ನು ಬೆಂಬಲಿಸುತ್ತದೆ. ಆದರೆ ಇದು ಮೊಡವೆಗೆ ಇರುವ ನೇರ ಚಿಕಿತ್ಸೆಯಲ್ಲ. ತರಕಾರಿ ಸಮೃದ್ಧವಾಗಿರುವ ಆಹಾರ ಸೇವನೆ ಮಾಡಿದರೆ ದೇಹದಲ್ಲಿ ಉರಿಯೂತ ಕಡಿಮೆಯಾಗಿ ಮೊಡವೆ ನಿವಾರಣೆಗೆ ಪ್ರಯೋಜನವಾಗುತ್ತದೆ ಎನ್ನಲಾಗಿದೆ
ಬ್ರೊಕೋಲಿಯಲ್ಲಿರುವ ಬೀಟಾ-ಕ್ಯಾರೋಟಿನ್, ವಿಟಮಿನ್ ಎ ಆಗಿ ಪರಿವರ್ತನೆಗೊಳ್ಳುತ್ತದೆ. ಇದು ಹಳೆಯ ಚರ್ಮದ ಕೋಶಗಳ ಜಾಗದಲ್ಲಿ ಹೊಸ ಜೀವಕೋಶ ರಚನೆಗೆ ಸಹಾಯ ಮಾಡುತ್ತದೆ. ಆರೋಗ್ಯಕರ ಚರ್ಮವನ್ನು ಕಾಪಾಡುತ್ತದೆ ಎನ್ನಲಾಗಿದೆ.
ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು
ದೇಹದಲ್ಲಿ ತೇವಾಂಶ ಕಾಯ್ದುಕೊಳ್ಳಲು ಹೆಚ್ಚು ನೀರು ಕುಡಿಯುವುದು
ಆರರಿಂದ ಎಂಟು ಗಂಟೆಗಳ ಕಾಲ ಸರಿಯಾಗಿ ನಿದ್ರೆ ಮಾಡುವುದು
ಹಣ್ಣು ಮತ್ತು ತರಕಾರಿ ಸೇರಿದಂತೆ ಸಮತೋಲಿತ ಆಹಾರ ಸೇವನೆ ಮಾಡುವುದು
ಸೂರ್ಯನ ಪ್ರಕಾಶಮಾನವಾದ ಕಿರಣಗಳು ಮುಖದ ಚರ್ಮದ ಮೇಲೆ ಹೆಚ್ಚು ಬಿದ್ದು ದದ್ದುನಂತಹ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಸನ್ಸ್ಕ್ರೀನ್ ಬಳಕೆ ಮಾಡುವುದು ಉತ್ತಮ ಎಂದಿದ್ದಾರೆ ತಜ್ಞರು, (ಏಜೆನ್ಸೀಸ್).
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.