ಬೇಯಿಸಿದ ಮೊಟ್ಟೆ ರೀ-ಹೀಟ್ ಮಾಡ್ತೀರಾ? ತಜ್ಞರು ಹೇಳುವ ಈ ಶಾಕಿಂಗ್ ಸತ್ಯ ಗೊತ್ತಾದ್ರೆ ಬೆಚ್ಚಿಬೀಳ್ತೀರಾ! Egg Re-heating

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಮೊಟ್ಟೆ ಎನ್ನುವುದು ಜಗತ್ತಿನಾದ್ಯಂತ ಕೋಟ್ಯಂತರ ಜನರ ನೆಚ್ಚಿನ ಮತ್ತು ಆರೋಗ್ಯಕರ ಉಪಹಾರವಾಗಿದೆ
  • ಪ್ರೊಟೀನ್, ಜೀವಸತ್ವಗಳು ಮತ್ತು ಖನಿಜಾಂಶಗಳಿಂದ ಸಮೃದ್ಧವಾಗಿರುವ ಮೊಟ್ಟೆಯನ್ನು ಬೇಯಿಸುವುದು ಸುಲಭ
  • ಜನರು ವಾರಕ್ಕೆ ಅಥವಾ 2-3 ದಿನಕ್ಕೆ ಸಾಕಾಗುವಷ್ಟು ಮೊಟ್ಟೆಗಳನ್ನು ಒಂದೇ ಬಾರಿಗೆ ಕುದಿಸಿ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿಡುತ್ತಾರೆ
Egg Re-heating: ಮೊಟ್ಟೆ ಎನ್ನುವುದು ಜಗತ್ತಿನಾದ್ಯಂತ ಕೋಟ್ಯಂತರ ಜನರ ನೆಚ್ಚಿನ ಮತ್ತು ಆರೋಗ್ಯಕರ ಉಪಹಾರವಾಗಿದೆ. ಪ್ರೊಟೀನ್, ಜೀವಸತ್ವಗಳು ಮತ್ತು ಖನಿಜಾಂಶಗಳಿಂದ ಸಮೃದ್ಧವಾಗಿರುವ ಮೊಟ್ಟೆಯನ್ನು ಬೆಳಿಗ್ಗೆ ಬೇಯಿಸುವುದು ಸುಲಭ ಎಂಬ ಕಾರಣಕ್ಕಾಗಿ ಹೆಚ್ಚಿನವರು ಆನಂದಿಸುತ್ತಾರೆ. ಆದರೆ ಇಂದಿನ ಇಂಟರ್ನೆಟ್ ಯುಗದ ಬ್ಯುಸಿ ಲೈಫ್‌ಸ್ಟೈಲ್‌ನಲ್ಲಿ, ಸಮಯ ಉಳಿಸುವ ಸಲುವಾಗಿ ಜನರು ವಾರಕ್ಕೆ ಅಥವಾ 2-3 ದಿನಕ್ಕೆ ಸಾಕಾಗುವಷ್ಟು ಮೊಟ್ಟೆಗಳನ್ನು ಒಂದೇ ಬಾರಿಗೆ ಕುದಿಸಿ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿಡುತ್ತಾರೆ. ನಂತರ, ಅವುಗಳನ್ನು ತಿನ್ನಲು ಬಯಸಿದಾಗ, ಫ್ರಿಡ್ಜ್‌ನಿಂದ ಹೊರತೆಗೆದು ಮತ್ತೆ ಮೈಕ್ರೋವೇವ್‌ನಲ್ಲೋ ಅಥವಾ ಗ್ಯಾಸ್ ಮೇಲೋ ಬಿಸಿ ಮಾಡುತ್ತಾರೆ ಇಲ್ಲವೇ ಮತ್ತೊಮ್ಮೆ ಕುದಿಸುತ್ತಾರೆ.
ಆದಾಗ್ಯೂ, ಉಳಿದ ಆಹಾರವನ್ನು ಮತ್ತೆ ಬಿಸಿ ಮಾಡುವುದು ಸಾಮಾನ್ಯವಾದರೂ, ಮೊಟ್ಟೆಗಳನ್ನು ಪುನಃ ಬೇಯಿಸುವಾಗ ಎಚ್ಚರಿಕೆ ವಹಿಸುವುದು ಮುಖ್ಯ ಎಂದು ಹೇಳಲಾಗುತ್ತದೆ. ಏಕೆಂದರೆ, ಕೆಲವೊಮ್ಮೆ ಈ ರೀತಿಯ ಅಭ್ಯಾಸಗಳು ನಿಮ್ಮ ಆರೋಗ್ಯಕ್ಕೆ ತುಂಬಾ ಅಪಾಯಕಾರಿಯಾಗಿರಬಹುದು.
ಹೆಲ್ತ್‌ಲೈನ್ ಪ್ರಕಾರ, ಬೇಯಿಸಿದ ಮೊಟ್ಟೆಗಳನ್ನು ಸರಿಯಾಗಿ ಸಂಗ್ರಹಿಸಿದ್ದರೆ ಅವುಗಳನ್ನು ಮತ್ತೆ ಬಿಸಿ ಮಾಡುವುದು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಆದಾಗ್ಯೂ, ಬೇಯಿಸಿದ ಮೊಟ್ಟೆಗಳನ್ನು ಬೇಯಿಸಿದ 2 ಗಂಟೆಗಳ ಒಳಗೆ ಫ್ರಿಜ್​ನಲ್ಲಿಡಬೇಕು.
ಪುನಃ ಬಿಸಿ ಮಾಡುವಾಗ, ಅದರಲ್ಲಿರಬಹುದಾದ ಸಾಲ್ಮೊನೆಲ್ಲಾದಂತಹ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಸಂಪೂರ್ಣವಾಗಿ ಕೊಲ್ಲಲು ಮೊಟ್ಟೆಗಳ ಒಳಗಿನ ತಾಪಮಾನವು ಕನಿಷ್ಠ 74°C (165°F) ತಲುಪುವವರೆಗೆ ಸರಿಯಾಗಿ ಕಾಯಿಸಬೇಕು. ಒಂದು ವೇಳೆ ಮೊಟ್ಟೆಗಳು ಕೋಣೆಯ ಉಷ್ಣಾಂಶದಲ್ಲಿ ದೀರ್ಘಕಾಲ ಕುಳಿತಿದ್ದರೆ, ಅವುಗಳನ್ನು ಮತ್ತೆ ಬಿಸಿ ಮಾಡುವುದನ್ನು ತಪ್ಪಿಸಿ.

ಮೈಕ್ರೋವೇವ್‌ನಲ್ಲಿ ಬಿಸಿ ಮಾಡಬೇಡಿ!

ಬೇಯಿಸಿದ ಮೊಟ್ಟೆಗಳನ್ನು ಮತ್ತೆ ಬಿಸಿಮಾಡಲು ಸುಲಭವಾದ ಮಾರ್ಗವೆಂದರೆ ಮೈಕ್ರೋವೇವ್ ಎಂದು ಜನರು ಸಾಮಾನ್ಯವಾಗಿ ಭಾವಿಸುತ್ತಾರೆ. ಆದರೆ, ಬೇಯಿಸಿದ ಮೊಟ್ಟೆಗಳನ್ನು ಎಂದಿಗೂ ಮೈಕ್ರೋವೇವ್​ನಲ್ಲಿ ಬಿಸಿ ಮಾಡಬಾರದು ಎಂದು ತಜ್ಞರು ಸೂಚಿಸುತ್ತಾರೆ.
ವಾಸ್ತವವಾಗಿ, ಮೈಕ್ರೋವೇವ್ ತರಂಗಗಳು ಮೊಟ್ಟೆಯೊಳಗಿನ ನೀರಿನ ಅಣುಗಳನ್ನು ತ್ವರಿತವಾಗಿ ಹಬೆಯಾಗಿ ಪರಿವರ್ತಿಸುತ್ತವೆ. ಮೊಟ್ಟೆಯ ಚಿಪ್ಪು ಅಥವಾ ಬಿಳಿ ಭಾಗವು ಈ ಹಬೆಯನ್ನು ತಪ್ಪಿಸಿಕೊಳ್ಳುವುದನ್ನು ತಡೆಯುವುದರಿಂದ ಮೊಟ್ಟೆಯೊಳಗೆ ಭಾರೀ ಒತ್ತಡ ಉಂಟಾಗುತ್ತದೆ. ಒಂದು ವೇಳೆ ನೀವೇನಾದರೂ ಮೊಟ್ಟೆಯನ್ನು ಕಚ್ಚಿದಾಗ ಅಥವಾ ಬಾಯಿಗೆ ಹಾಕಿದಾಗ ಅದು ಗಂಭೀರವಾದ ಸುಟ್ಟ ಗಾಯಗಳಿಗೆ ಕಾರಣವಾಗಬಹುದು.

ಹಾಗಿದ್ದರೆ, ಮೊಟ್ಟೆಯನ್ನು ಬಿಸಿ ಮಾಡುವ ಸರಿಯಾದ ಮಾರ್ಗ ಯಾವುದು?

ನೀವೇನಾದರೂ ಬೇಯಿಸಿದ ಮೊಟ್ಟೆಗಳನ್ನು ಮತ್ತೆ ಬಿಸಿ ಮಾಡಿ ಫ್ರಿಜ್​ನಲ್ಲಿಡಲು ಬಯಸಿದರೆ, ಕುದಿಯುವ ನೀರನ್ನು ಬಳಸುವುದು ಸುರಕ್ಷಿತ ವಿಧಾನವಾಗಿದೆ. ಮೊದಲು, ಆಳವಾದ ಪಾತ್ರೆಯಲ್ಲಿ ನೀರನ್ನು ಕುದಿಸಿ ಮತ್ತು ಉರಿಯನ್ನು ಆಫ್ ಮಾಡಿ. ನಂತರ ಬಿಸಿ ನೀರಿನಲ್ಲಿ ಇರಿಸಿ 10 ನಿಮಿಷಗಳ ಕಾಲ ಮುಚ್ಚಿಡಿ. ಈ ವಿಧಾನವು ಮೊಟ್ಟೆಗಳನ್ನು ತೇವಾಂಶದಿಂದ ಇಡಲು ಸಹಾಯ ಮಾಡುತ್ತದೆ. ಜೊತೆಗೆ ಸ್ಪೋಟಗೊಳ್ಳುವ ಅಪಾಯವಿಲ್ಲದೇ ಒಳಗಿನಿಂದ ಸಂಪೂರ್ಣವಾಗಿ ಬಿಸಿ ಮಾಡುತ್ತವೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net