ಜಿಮ್‌ಗೆ ಹೋಗಲು ಸಮಯವಿಲ್ಲವೇ.. ಹೀಗೆ ಮಾಡಿ 30 ದಿನಗಳಲ್ಲಿ 15 ಕೆಜಿ ತೂಕ ಇಳಿಸಿಕೊಳ್ಳಬಹುದು! Fitness

gym
Published on

Fitness : ತೂಕ ಇಳಿಸಿಕೊಳ್ಳುವ ಬಗ್ಗೆ ಇನ್ಮುಂದೆ ಚಿಂತಿಸುವ ಅಗತ್ಯವಿಲ್ಲ. ಸರಳ ಆಹಾರಕ್ರಮದ ಮೂಲಕವೂ ನೀವು ತೂಕ ಇಳಿಸಿಕೊಳ್ಳಬಹುದು. ನೀವು ಕೇವಲ 30 ದಿನಗಳಲ್ಲಿ 15 ಕೆಜಿ ತೂಕ ಇಳಿಸಿಕೊಳ್ಳಬಹುದು. ಫಿಟ್‌ನೆಸ್ ತರಬೇತುದಾರರು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸುಲಭವಾದ ಆಹಾರ ಯೋಜನೆಯನ್ನು ಹಂಚಿಕೊಂಡಿದ್ದಾರೆ.

ಫಿಟ್ನೆಸ್ ತರಬೇತುದಾರ ಶುಭ್ ಅಗರ್ವಾಲ್ ಇನ್​ಸ್ಟಾಗ್ರಾಮ್​​​ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ತಮ್ಮ ಅಭಿಮಾನಿಗಳೊಂದಿಗೆ ಸ್ಮಾರ್ಟ್ ಮತ್ತು ಸಮಯ ಉಳಿಸುವ ಆಹಾರ ಯೋಜನೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಈಗ ಡಯಟ್​​​ ಇಲ್ಲದೆ ಕೇವಲ 30 ದಿನಗಳಲ್ಲಿ 15 ಕೆಜಿಯಷ್ಟು ತೂಕ ಇಳಿಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ ಎಂದು ಹೇಳುತ್ತದೆ.

ಬೆಳಿಗ್ಗೆ 7-8 ಗಂಟೆಗೆ ಎದ್ದು ಬೆಚ್ಚಗಿನ ನೀರಿನಲ್ಲಿ ನಿಂಬೆ ರಸ ಮತ್ತು ಒಂದು ಚಿಟಿಕೆ ಗುಲಾಬಿ ಉಪ್ಪು ಹಾಕಿ ಕುಡಿಯಿರಿ. ನಂತರ, ನೀವು 30-40 ನಿಮಿಷಗಳ ಕಾಲ ವೇಗವಾಗಿ ನಡೆಯಬೇಕು, ಅದರಲ್ಲಿ 6,000 ಹೆಜ್ಜೆಗಳ ಗುರಿಯನ್ನು ಇಟ್ಟುಕೊಳ್ಳಿ.ಜಿಮ್‌ಗೆ ಹೋಗಲು ಸಮಯವಿಲ್ಲದವರು ದಿನಕ್ಕೆ 12,000 ಹೆಜ್ಜೆಗಳು ನಡೆಯಬೇಕು. ಊಟದ ನಂತರ 5-10 ನಿಮಿಷಗಳ ಕಾಲ ನಡೆಯಿರಿ.

ಒಂದು ಆಯ್ಕೆಯೆಂದರೆ 15 ನಿಮಿಷಗಳ ವ್ಯಾಯಾಮ ಮಾಡುವ ಅಭ್ಯಾಸ ಇಟ್ಟುಕೊಳ್ಳಿ. 20 ಜಂಪಿಂಗ್ ಜ್ಯಾಕ್‌ಗಳು, 15 ಸ್ಕ್ವಾಟ್‌ಗಳು, 10 ಪುಷ್‌ಅಪ್‌ಗಳು, 30 ಸೆಕೆಂಡುಗಳ ಪ್ಲ್ಯಾಂಕ್ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.

ಬೆಳಗಿನ ಉಪಾಹಾರದಲ್ಲಿ ಹೆಚ್ಚಿನ ಪ್ರೋಟೀನ್ ಆಹಾರವನ್ನು ಸೇರಿಸಿ, ಅದರಲ್ಲಿ 3 ಬೇಯಿಸಿದ ಮೊಟ್ಟೆಗಳು ಅಥವಾ 100 ಗ್ರಾಂ ಪನೀರ್ ಭರ್ಜಿಯನ್ನು ಸೇವಿಸಿ. ನೀವು ಅದರೊಂದಿಗೆ ಬ್ಲ್ಯಾಕ್​​ ಕಾಫಿ ಅಥವಾ ಗ್ರೀನ್​​ ( ಟೀ) ಚಹಾವನ್ನು ಸೇವಿಸಬಹುದು. ಹಾಗೆಯೇ 5 ನೆನೆಸಿದ ಬಾದಾಮಿ ಮತ್ತು 2 ವಾಲ್ನಟ್ಗಳನ್ನು ತಿನ್ನಿರಿ.

ನೀವು ನಿಮ್ಮ ಭೋಜನವನ್ನು ಅದೇ ರೀತಿ ಇಟ್ಟುಕೊಳ್ಳಬೇಕು. ನಿಮ್ಮ ಭೋಜನದಲ್ಲಿ ಸೂಪ್ ಸೇರಿಸಿಕೊಳ್ಳಬಹುದು. ಇದರ ಹೊರತಾಗಿ, ಸಾಧ್ಯವಾದಷ್ಟು ಕಡಿಮೆ ಅನ್ನ ಮತ್ತು ರೊಟ್ಟಿ ತಿನ್ನಿರಿ.

ಮಧ್ಯಾಹ್ನ 2-3 ಗಂಟೆ ಸುಮಾರಿಗೆ ಊಟ ಮಾಡಿ. ಊಟದಲ್ಲಿ 1 ಕಪ್ ಅನ್ನ ಅಥವಾ 2 ಸಣ್ಣ ರೊಟ್ಟಿಗಳನ್ನು ಸೇರಿಸಿ. 1 ಬಟ್ಟಲು ಬೇಳೆ ಅಥವಾ 100 ಗ್ರಾಂ ಪನೀರ್ ತಿನ್ನಿ. ನೀವು 1 ಕಪ್ ತರಕಾರಿ (ಆಲೂಗಡ್ಡೆ ಸೇರಿಸಬೇಡಿ) ಮತ್ತು ಮೊಸರು ಅಥವಾ ಮಜ್ಜಿಗೆಯನ್ನು ಸೇವಿಸಬಹುದು.

ನೀವು ರಾತ್ರಿಯಲ್ಲಿ ಕನಿಷ್ಠ 7 ಗಂಟೆಗಳ ಕಾಲ ಆಳವಾದ ನಿದ್ರೆಯನ್ನು ಪಡೆಯಬೇಕು.

ಸಕ್ಕರೆ ಹಾಕಿ ಮಾಡಿದ ಚಹಾ, ಕಾಫಿಯನ್ನು ತಪ್ಪಿಸಿ. ಪ್ಯಾಕ್ ಮಾಡಿದ ಮತ್ತು ಹುರಿದ ಆಹಾರಗಳನ್ನು ತಪ್ಪಿಸಿ. ಹಸಿವಾದಾಗ ಮಾತ್ರ ತಿನ್ನಿರಿ ಮತ್ತು ಭಾವನಾತ್ಮಕವಾಗಿ ತಿನ್ನುವುದನ್ನು ತಪ್ಪಿಸಿ. ರಾತ್ರಿ 8 ಗಂಟೆಯ ನಂತರ ತಿನ್ನಬೇಡಿ. ಹಸಿವಿನ ಹಾರ್ಮೋನುಗಳನ್ನು ನಿಯಂತ್ರಿಸಲು ಬೇಗ ನಿದ್ರಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net