ಸರಿಯಾದ ಪ್ರಮಾಣದಲ್ಲಿ ಸರಿಯಾದ ರೀತಿಯಲ್ಲಿ ಬೆಣ್ಣೆ ಸೇವಿಸಿ ಆರೋಗ್ಯ ವೃದ್ಧಿಸುತ್ತದೆ

bbb
Published on

ಸಾಫ್ಟ್ ನೈಸ್ ಟೆಕ್ಸಚರ್, ನೋಡಲು ಚೆಂದ, ತಿಂದರೆ ಬಲು ಆನಂದ. ಕೈನಲ್ಲಿ, ಬಾಯಲ್ಲಿಟ್ಟರೆ ಸಾಕು ಕರಗಿ ನೀರಾಗುವ ಬೆಣ್ಣೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಕೃಷ್ಣನೂ ಸಹ ಬೆಣ್ಣೆಯನ್ನು ಕದ್ದು ಮುಚ್ಚಿ ತಿನ್ನುತ್ತಿದ್ದ. ದೋಸೆ, ರೊಟ್ಟಿಜೊತೆ ಬೆಣ್ಣೆ ತಿಂದರೆ ಅದರ ರುಚಿ ಮತ್ತಷ್ಟು ಇಮ್ಮಡಿಗೊಳ್ಳುತ್ತದೆ. ಬೆಣ್ಣೆ ಸೇವನೆಯಿಂದ ಕೊಬ್ಬು ಹೆಚ್ಚಾಗುತ್ತದೆ ಎಂಬ ತಪ್ಪು ತಿಳುವಳಿಕೆ ಹೊಂದಿದ್ದಾರೆ. ಸರಿಯಾದ ಪ್ರಮಾಣದಲ್ಲಿ ಸರಿಯಾದ ರೀತಿಯಲ್ಲಿ ಸೇವಿಸಿದರೆ ಆರೋಗ್ಯ ವೃದ್ಧಿಸುತ್ತದೆ. ಅದು ಹೇಗೆ ಇಲ್ಲಿದೆ ಮಾಹಿತಿ.


ಬೆಣ್ಣೆಯಲ್ಲಿ ವಿಟಮಿನ್, ಖನಿಜಾಂಶ, ಆಂಟಿ ಆಕ್ಸಿಡೆಂಟ್, ಉತ್ತಮ ಕೊಬ್ಬಿನಾಂಶವಿದ್ದು, ಹೃದಯ ಸಂಬAಧಿ ಕಾಯಿಲೆ, ಕಣ್ಣಿನ ದೃಷ್ಟಿ, ಹಾರ್ಮೋನ್‌ಗಳ ಸಮತೋಲನ, ಮೂಳೆ ಬಲಿಷ್ಠಗೊಳಿಸುವ ಗುಣವಿದೆ.


ಮಾರುಕಟ್ಟೆ ಕಳಪೆ ಬೆಣ್ಣೆ ಸಿಗುತ್ತವೆ. ಇದರಲ್ಲಿ ಟ್ರಾನ್ಸ್ ಕೊಬ್ಬುಗಳು ಮತ್ತು ಬಣ್ಣಗಳಿಂದ(Color) ತುಂಬಿರುತ್ತವೆ. ಮಾರ್ಕೆಟಿಂಗ್ ಹಕ್ಕುಗಳ ಹೊರತಾಗಿಯೂ ಆರೋಗ್ಯಕ್ಕೆ ಪ್ರಯೋಜನ ನೀಡುವುದಿಲ್ಲ. ಏಕೆಂದರೆ ಇದರಲ್ಲಿ ಬೇಡದ ಅನೇಕ ಅಂಶಗಳನ್ನು ಹಾಕಿರುತ್ತಾರೆ. ಇವು ಆರೋಗ್ಯಕ್ಕೆ ಕುತ್ತು ತರುತ್ತವೆ. ಹಾಗಾಗಿ ಸಾವಯವ, ನೈಸರ್ಗಿಕಬೆಣ್ಣೆಯನ್ನು ಆರಿಸುವುದು ಒಳ್ಳೆಯದು. ಮನೆಯಲ್ಲೇ ಹಾಲಿನ ಕೆನೆ ತೆಗೆದು ಅದರಿಂದ ಬೆಣ್ಣೆ ಮಾಡುವುದು ಇನ್ನೂ ಒಳ್ಳೆಯದು. ಉಪ್ಪು ಸಹಿತ ಅಥವಾ ರಹಿತ ಬಯಸಿದಲ್ಲಿ ನೀವು ಶುದ್ಧವಾದ, ಹಸುವಿನ ಹಾಲಿನಿಂದ ಮಾಡಿದ ಹೆಚ್ಚು ಪೌಷ್ಟಿಕಾಂಶದ ವಸ್ತುವಿನ ಪ್ರಯೋಜನಗಳನ್ನು ಪಡೆಯುತ್ತೀರಿ.


ಬೆಣ್ಣೆ ಸೇವಿಸುವುದರಿಂದ ಆರೋಗ್ಯದ ಮೇಲಾಗುವ ಪ್ರಯೋಜನಗಳು:
ಣ್ಣೆಯಲ್ಲಿ ಕ್ಯಾಲ್ಶಿಯಂ ಮತ್ತು ವಿಟಮಿನ್ ಡಿ ಅಂಶಗಳು ಹೇರಳವಾಗಿದೆ. ಇದು ದೇಹದಲ್ಲಿನ ಮೂಳೆಗಳನ್ನು ಬಲಿಷ್ಠಗೊಳಿಸಲು ಸಹಕರಿಸುತ್ತದೆ. ವಿಟಮಿನ್ ಡಿ ಕ್ಯಾಲ್ಶಿಯಂ ಹೀರಿಕೊಳ್ಳಲು ಉತ್ತೇಜಿಸುತ್ತದಲ್ಲದೆ, ಮೂಳೆಯನ್ನು ಸರಿಪಡಿಸುವ ಹಾಗೂ ಬಲಿಷ್ಠಗೊಳಿಸಲು ಸಹಕರಿಸುತ್ತದೆ.

ಸಂಯೋಜಿತ ಲಿನೋಲಿಯಿಕ್ ಆಸಿಡ್(ಸಿಎಲ್‌ಎ) ಅಂಶವು ಬೆಣ್ಣೆಯಲ್ಲಿದೆ. ಇದು ಕ್ಯಾನ್ಸರ್ಅನ್ನು ತಡೆಗಟ್ಟುತ್ತದೆ. ಸಿಎಲ್‌ಎ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ದೇಹದಲ್ಲಿನ ವಿಷತ್ವವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದು ಕ್ಯಾನ್ಸರ್ ಕೋಶಗಳ ಬೆಳವಣಿಗೆಯ ವಿರುದ್ಧ ಹೋರಾಡುವ ಗುಣವಿದೆ ಎಂದು ತಿಳಿದುಬಂದಿದೆ.

ಬೆಣ್ಣೆಯಲ್ಲಿ ವಿಟಮಿನ್ ಎ, ಇ,ಡಿ ಮತ್ತು ಕೆ(Vitamin A E D K), ಕ್ಯಾಲ್ಶಿಯಂ, ಸೆಲೆನಿಯಂ, ರೋಮಿಯಂ, ತಾಮ್ರ, ಮ್ಯಾಂಗನೀಸ್ ಹೆಚ್ಚಿನ ಪ್ರಮಾಣದಲ್ಲಿದೆ. ದಿನವೂ ಬೆಣ್ಣೆ ಸೇವಿಸುವುದರಿಂದ ದೇಹದ ಪ್ರತೀ ವ್ಯವಸ್ಥೆಗಳು ಉತ್ತಮವಾಗಿರುವಂತೆ ನೋಡಿಕೊಳ್ಳುತ್ತದೆ.


ಅಧ್ಯಯನದ ಪ್ರಕಾರ ನಿಯಮಿತವಾದ ಬೆಣ್ಣೆಯನ್ನು ಮಿತವಾಗಿ ಸೇವಿಸುವುದಿಂದ ಶೇ.69ರಷ್ಟು ಹೃದಯ ಸಂಬAಧಿ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ. ಏಕೆಂದರೆ ಇದರಲ್ಲಿ ಉತ್ತಮವಾದ ವಿಟಮಿನ್ ಕೆ ಅಂಶ ಹೆಚ್ಚಿನ ಪ್ರಮಾಣದಲ್ಲಿದ್ದು, ಅಪಧಮನಿಯ ಕ್ಯಾಲ್ಸಿಫಿಕೇಶನ್ ಅನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಹೃದಯಾಘಾತ, ಪಾರ್ಶ್ವವಾಯು ಮತ್ತು ಗಟ್ಟಿಯಾದ ಅಪಧಮನಿಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಬೆಣ್ಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಳ್ಳುವ ವಿಟಮನಿನ್ ಎ ಇದೆ. ಇದು ಹಾರ್ಮೋನ್‌ಗಳನ್ನು ನಿಯಂತ್ರಿಸಲು ಮತ್ತು ಆರೋಗ್ಯಕರ ಥೈರಾಯ್ಡ್ ಕಾರ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. 100 ಗ್ರಾಂ ಬೆಣ್ಣೆಯನ್ನು ದಿನವೂ ಸೇವಿಸಿದರೆ ಶೇ. 49ರಷ್ಟು ವಿಟಮಿನ್ ಎ ಅನ್ನು ಪೂರೈಸುತ್ತದೆ ಎಂದು ಅಧ್ಯಯನದಿಂದ ತಿಳಿದಿದೆ.


ಲೌರಿಕ್ ಆಸಿಡ್ ಎಂಬುದು ಉತ್ತಮವಾದ ಆಂಟಿ ಫಂಗಲ್ ಕಾಂಪೌಡ್. ಇದು ಬೆಣ್ಣೆಯಲ್ಲಿ ಹೇರಳವಾಗಿ ಕಾಣಸಿಗುತ್ತದೆ. ಇದು ಫಂಗಲ್ ಇನ್ಫೆಕ್ಷನ್ ಆಗುವುದನ್ನು ತಡೆಯುತ್ತದಲ್ಲದೆ, ಕ್ಯಾಂಡಿಡಾ ಬೆಳವಣಿಗೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.
ಶುದ್ಧ ಬೆಣ್ಣೆಯಲ್ಲಿ ಸೆಲೆನಿಯಂಅತ್ಯುತ್ತಮ ಮೂಲವಾಗಿದೆ. ಇದು ಪುರುಷರು ಹಾಗೂ ಮಹಿಳೆಯರಿಗೆ ಬೇಕಾದ ಖನಿಜಾಂಶದ ಫಲವತ್ತತೆತನ್ನು ಹೆಚ್ಚಿಸುತ್ತದೆ. ಹೆಚ್ಚು ಬೆಣ್ಣೆ ತಿನ್ನುವುದರಿಂದ ಕುಟುಂಬವನ್ನು ಪ್ರಾರಂಭಿಸುವ ಸಾಧ್ಯತೆಗಳನ್ನು ಸುಧಾರಿಸುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.


ಬೆಣ್ಣೆ ಸೇವನೆಯಿಂದ ರಾತ್ರಿ ಕುರುಡುತನ ಮತ್ತು ಮ್ಯಾಕ್ಯುಲರ್ ಡಿಜನರೇಶನ್ ಅನ್ನು ತಡೆಯುತ್ತದೆ. ಏಕೆಂದರೆ ಇದರಲ್ಲಿ ಹೀರಿಕೊಳ್ಳುವ ಗುಣವಿರುವ ವಿಟಮಿನ್ ಎ ಹೇರಳವಾಗಿದೆ. ಇದು ಆರೋಗ್ಯಕರ ಕಣ್ಣುಗಳನ್ನು ಕಾಪಾಡಿಕೊಳ್ಳು ಸಹಕರಿಸುತ್ತದೆ.
ಶೀತ ಮತ್ತು ಜ್ವರವನ್ನು ಎದುರಿಸಲು ಗರಿಷ್ಠ ಶಕ್ತಿಯನ್ನುಬೆಣ್ಣೆ ಸೇವನೆಯಿಂದ ಪಡೆಯಬಹುದು. ಅಷ್ಟೇ ಅಲ್ಲದೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಒಮೆಗಾ 3 ಕೊಬ್ಬಿನಾಮ್ಲವನ್ನು ಇದು ಪೂರೈಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net