

ನೀವೇನಾದ್ರು ಆತಂಕ, ಪ್ಯಾನಿಕ್ ಅಟ್ಯಾಕ್, ಹೆದರಿಕೆ, ನಿದ್ರಾಹೀನತೆ, ಆಯಾಸ, ತಲೆನೋವು, ಒತ್ತಡದಿಂದ ಬಳಲುತ್ತಿದ್ದೀರಾ, ಹಾಗಿದ್ರೆ ಇನ್ಮುಂದೆ ಬ್ರಾಹ್ಮಿ ಎಲೆಯನ್ನ ಜಗಿದು ತಿನ್ನಲು ಪ್ರಾರಂಭಿಸಿ. ಯಸ್ ಈ ಎಲ್ಲಾ ಸಮಸ್ಯೆಗಳನ್ನ ನಿವಾರಿಸುವಂತಹ ಗುಣಗಳು ಬ್ರಾಹ್ಮಿ ಎಲೆಗಿದೆ. ಅಲ್ಲದೇ ಬ್ರಾಹ್ಮಿ ಹೊಟ್ಟೆಯ ಅಸ್ವಸ್ಥತೆಯನ್ನೂ ನಿವಾರಿಸುತ್ತೆ ಅನ್ನೋದನ್ನ ಅಧ್ಯಯನಗಳು ತಿಳಿಸಿವೆ.
ಬ್ರಾಹ್ಮಿ ಎಣ್ಣೆಯನ್ನು ನೆತ್ತಿಗೆ ಹಚ್ಚುವುದರಿಂದ ಕೂದಲು ಉದುರುವುದನ್ನು ತಡೆಯುತ್ತದೆ ಏಕೆಂದರೆ ಇದು ಕೂದಲಿಗೆ ಪೋಷಣೆ ಮತ್ತು ಬಲವನ್ನು ನೀಡುತ್ತದೆ.
ಇನ್ನು ಚರ್ಮದಲ್ಲಿ ಏನಾದ್ರು ತುರಿಕೆ, ಕಜ್ಜಿ ಕಾಣಿಸಿಕೊಳ್ತಾ ಇದೆ ಅಂದ್ರೆ, ಬ್ರಾಹ್ಮಿ ಎಲೆಯ ರಸ ಹಚ್ಚೋದ್ರಿಂದ ಇದು ಚರ್ಮವನ್ನು ಸೋಂಕುರಹಿತಗೊಳಿಸುತ್ತದೆ.
ದೇಹದ ಕೂಶಗಳನ್ನು ಹಾನಿಮಾಡುವಂತಹ ಸ್ವತಂತ್ರ ರಾಡಿಕಲ್ಸ್‍ಗಳನ್ನು ತಡೆಯುತ್ತದೆ. ಇದನ್ನು ಒಂದೆಲಗಾ, ಗೋಟು ಕೋಲಾ, ಸ್ಪೀಡ್ ಲೀಫ್ ಎಂದು ಸಹ ಕರೆಯುತ್ತಾರೆ. ಇದನ್ನು ಕೆಲವು ಸೌಂದರ್ಯ ವರ್ಧಕ ಉತ್ಪನ್ನಗಳಲ್ಲಿ ಹೆಚ್ಚಾಗಿ ಬಳಸಲಾಗುವುದು. ಇದರ ಬಳಕೆಯಿಂದ ವಯಸ್ಸಾದ ಕಳೆಯನ್ನು ಬಹುಬೇಗ ನಿವಾರಿಸಬಹುದು.
ಬ್ರಾಹ್ಮಿಯಲ್ಲಿ ಅಮೈನೋ ಆಮ್ಲಗಳು, ಬೀಟಾ ಕ್ಯಾರೋಟೀನ್, ಕೊಬ್ಬುನಾಮ್ಲ, ಫೈಟೊಕೆಮಿಕಲ್‍ಗಳು ಸೇರಿದಂತೆ ಅನೇಕ ಔಷಧೀಯ ಗುಣಗಳನ್ನು ಒಳಗೊಂಡಿದೆ. ಇದರಲ್ಲಿ ಇರುವ ಔಷಧೀಯ ಗುಣವು ಉರಿಯೂತವನ್ನು ಕಡಿಮೆ ಮಾಡುವುದು, ಗಾಯಗಳನ್ನು ಗುಣಪಡಿಸುವುದು, ಹೊಸ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುವುದು, ಕಾಲಜನ್ ನಿರ್ಮಿಸುವುದು ಹಾಗೂ ರಕ್ತಗಳ ಪರಿಚಲನೆಯನ್ನು ಸುಧಾರಿಸುತ್ತದೆ.
ಇನ್ನು ಇದರಲ್ಲಿ ಇರುವ ಪ್ರೊಟೀನ್ ಚರ್ಮದ ಕೋಶಗಳು ಒಂದಕ್ಕೊಂದು ಅಂಟಿಕೊಂಡಿರಲು ಸಹಾಯ ಮಾಡುತ್ತದೆ. ಚರ್ಮದ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವವನ್ನು ನೀಡುತ್ತದೆ. ಕಾಲಜನ್ ಉತ್ಪಾದನೆಯು ವಯಸ್ಸಿನೊಂದಿಗೆ ಕಡಿಮೆಯಾಗುವುದು. ಇದರಿಂದಾಗಿ ಚರ್ಮದ ಮೇಲೆ ಸುಕ್ಕುಗಟ್ಟುವುದು, ಚರ್ಮದಲ್ಲಿ ಸಡಿಲತೆ ಹಾಗೂ ಕುಗ್ಗುವಿಕೆ ಕಂಡುಬರುತ್ತದೆ. ಬ್ರಾಹ್ಮಿಯಲ್ಲಿ ಇರುವ ಟ್ರೈಟರ್ಪೆನಾಯ್ಡ್ ಮತ್ತು ಏಸಿಯಾಟಿಕೊಸೈಡ್ ಸಂಯುಕ್ತಗಳಿವೆ.
ಇದು ದೇಹದಲ್ಲಿ ನೈಸರ್ಗಿಕವಾಗಿಯೇ ಕಾಲಜಾನ್ ಪ್ರೋಟೀನ್ ಉತ್ಪತ್ತಿಯಾಗುವಂತೆ ಪ್ರಚೋದನೆ ನೀಡುವುದು. ಜೊತೆಗೆ ಯೌವನವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ.