ಬಹಳ ಸುಲಭವಾಗಿ ಮನೆಯಲ್ಲೇ ಬಾಂಬೆ ಭೇಲ್ ಮಾಡಿ

bhel
Published on

ಬೆಂಗಳೂರು: ಸಂಜೆ ವೇಳೆಗೆ, ಪ್ರವಾಸದಲ್ಲಿರುವಾಗ ಅಥವಾ ಮನೆಗೆ ಅತಿಥಿಗಳು ಬಂದಾಗ ತಕ್ಷಣಕ್ಕೆ ಏನಾದರೂ ಮಾಡಬೇಕು ಅನಿಸಿದಾಗ ಎಲ್ಲರಿಗೂ ನೆನಪಾಗುವುದು ಚುರುಮುರಿ. ಚುರುಮುರಿಯನ್ನು ಒಂದೊಂದು ಭಾಗದಲ್ಲಿ ಒಂದೊಂದು ರೀತಿ ಮಾಡಲಾಗುತ್ತದೆ. ಯಾವುದೇ ಭಾಗದಲ್ಲಿ ಮಾಡಿದರೂ ಆಹಾರ ಪ್ರಿಯರಿಗೆ ಚುರುಮುರಿ ಅಂದರೆ ಬಾಯಲ್ಲಿ ನೀರು ಬರದೆ ಇರಲಾರದು. ಅಂದಹಾಗೆ ಇಲ್ಲಿ ಬಾಂಬೆ ಭೇಲ್ ಮಾಡುವುದು ಹೇಗೆಂದು ತಿಳಿಸಲಾಗಿದೆ. ಇದು ತುಂಬಾ ರುಚಿಕರವಾಗಿದ್ದು, ಮಾಡುವುದು ಹೇಗೆಂದು ಕೊಡಲಾಗಿದೆ ಓದಿ...

ಬೇಕಾಗುವ ಪದಾರ್ಥಗಳು
ಮಂಡಕ್ಕಿ
ಮಸಾಲೆಯುಕ್ತ ಬೂಂದಿ ಮಿಶ್ರಣ
ಬೇಯಿಸಿದ ಆಲೂಗಡ್ಡೆ ಸೇವ್
ಹೆಚ್ಚಿದ ಈರುಳ್ಳಿ
ಹೆಚ್ಚಿದ ಟೊಮ್ಯಾಟೊ
ಹೆಚ್ಚಿದ ಮೆಣಸಿನಕಾಯಿ
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಕರವಾದ ಬಾಂಬೆ ಭೇಲ್ ರೆಡಿ. ಮತ್ತೇಕೆ ತಡ ನೀವು ಒಮ್ಮೆ ಟ್ರೈ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net