

ಟೆಸ್ಟೋಸ್ಟೆರಾನ್ ಎಂಬುದು ಪುರುಷರಲ್ಲಿ ತುಂಬಾ ಮುಖ್ಯವಾದ ಹಾರ್ಮೋನ್. ಇದು ಪುರುಷರಲ್ಲಿನ ಫಲವತ್ತತೆಯಲ್ಲಿ ಮಾತ್ರವಲ್ಲದೆ, ಇತರೆ ಆರೋಗ್ಯ ವಿಚಾರಗಳಲ್ಲೂ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿ ಈ ಹಾರ್ಮೋನ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಅದಕ್ಕಾಗಿ ಯಾವ ಯಾವ ಆಹಾರ ಸೇವಿಸಬೇಕು ಎಂಬುದು ನಾವೀಗ ತಿಳಿಯೋಣ.
ಅದಕ್ಕೂ ಮುನ್ನ ಟೆಸ್ಟೋಸ್ಟೆರಾನ್ ಹಾರ್ಮೋನ್ ಬಗ್ಗೆ ತಿಳಿದುಕೊಳ್ಳೋಣ. ಈ ಹಾರ್ಮೋನ್, ಪುರುಷರಲ್ಲಿ ವೀರ್ಯ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಷ್ಟೇ ಅಲ್ಲದೆ, ಸ್ನಾಯುಗಳ ಬೆಳವಣಿಗೆ, ಕೊಬ್ಬಿನಾಂಶ ವಿತರಣೆ ಮತ್ತು ಕೆಂಪು ರಕ್ತ ಕೋಶಗಳ ಉತ್ಪಾದನೆ, ಕೂದಲು ಬೆಳವಣಿಗೆಗೂ ತುಂಬಾ ಮುಖ್ಯವಾಗಿದೆ. ಈ ಹಾರ್ಮೋನ್ ಮಟ್ಟವು ವಯಸ್ಸಾದಂತೆ ಬದಲಾಗುತ್ತಿರುತ್ತದೆ. ಆದರೆ, ಕೆಲವರು ಚಿಕ್ಕ ವಯಸ್ಸಿನಲ್ಲೇ ಈ ಹಾರ್ಮೋನ್ ಕೊರತೆಯ ಸಮಸ್ಯೆಯನ್ನು ಎದುರಿಸುತ್ತಾರೆ. ಬೊಜ್ಜು, ಥೈರಾಯ್ಡ್ ಸಮಸ್ಯೆಗಳು ಮತ್ತು ಇತರ ಕೆಲವು ಕಾರಣಗಳಿಂದ ಈ ಹಾರ್ಮೋನ್ ಕೊರತೆ ಉಂಟಾಗಬಹುದು. ಟೆಸ್ಟೋಸ್ಟೆರಾನ್ ಹಾರ್ಮೋನ್ ಉತ್ಪಾದನೆಯು ಕೆಲವು ಆಹಾರಗಳಿಂದ ಸ್ವಾಭಾವಿಕವಾಗಿ ಹೆಚ್ಚಾಗುತ್ತದೆ. ಆ ಆಹಾರಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.
1. ದಾಳಿಂಬೆ: ದಾಳಿಂಬೆ ಹಣ್ಣಿನಲ್ಲಿ ಆ್ಯಂಟಿಆಕ್ಸಿಡೆಂಟ್ಗಳು ಸಮೃದ್ಧವಾಗಿವೆ. ಇದು ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಟೆಸ್ಟೋಸ್ಟೆರಾನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.
2. ಕೊಬ್ಬಿನ ಮೀನು: ಸಾಲ್ಮೊನ್ನಂತಹ ಕೊಬ್ಬಿನ ಮೀನುಗಳಲ್ಲಿ ಒಮೆಗಾ 3 ಫ್ಯಾಟಿ ಆ್ಯಸಿಡ್ ಇರುವುದರಿಂದ ಇದು ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅಲ್ಲದೆ, ಇದು ಟೆಸ್ಟೋಸ್ಟೆರಾನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಸಂಪೂರ್ಣ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.
3. ಮೊಟ್ಟೆಗಳು: ಇದರಲ್ಲಿ ಪ್ರೊಟೀನ್ ಅತ್ಯಧಿಕವಾಗಿದೆ. ಇದರೊಂದಿಗೆ ಅಮಿನೋ ಆಮ್ಲ ಮತ್ತು ವಿಟಮಿನ್ ಡಿ ಸಹ ಇದೆ. ಇವು ಟೆಸ್ಟೋಸ್ಟೆರಾನ್ ಉತ್ಪಾದನೆಗೆ ತುಂಬಾ ಸಹಕಾರಿಯಾಗಿದೆ. ಹೀಗಾಗಿ ಪ್ರತಿದಿನ ಬೆಳಿಗ್ಗೆ ಮೊಟ್ಟೆಯಿಂದ ಮಾಡಿದ ಯಾವುದೇ ರೀತಿಯ ಉಪಹಾರ ತುಂಬಾ ಒಳ್ಳೆಯದು.
4. ಬಾಳೇಹಣ್ಣು: ಇವು ಪೊಟ್ಯಾಶಿಯಂ ಒಳಗೊಂಡಿದೆ. ಇದು ವ್ಯಾಯಾಮದ ನಂತರ ಸ್ನಾಯು ನೋವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ಪರೋಕ್ಷವಾಗಿ ಟೆಸ್ಟೋಸ್ಟೆರಾನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.
5. ಆಲೀವ್ ಆಯಿಲ್: ಹೆಚ್ಚುವರಿಯಾಗಿ ಆಲಿವ್ ಎಣ್ಣೆಯನ್ನು ಬಳಸುವುದು ಉತ್ತಮ. ಇದು ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ. ಇದು ಹಾರ್ಮೋನುಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.
6. ಈರುಳ್ಳಿ: ಇವುಗಳಲ್ಲಿ ಕ್ವೆರ್ಸೆಟಿನ್ ಸೇರಿವೆ. ಇದು ಟೆಸ್ಟೋಸ್ಟೆರಾನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಆಹಾರದಲ್ಲಿ ಈರುಳ್ಳಿಯನ್ನು ಸೇರಿಸಿಕೊಳ್ಳುವುದು ತುಂಬಾ ಒಳ್ಳೆಯದು.
7. ಎಲೆ ತರಕಾರಿಗಳು: ಲೆಟಿಸ್ ನಂತಹ ಗ್ರೀನ್ಸ್ ಮೆಗ್ನೀಸಿಯಮ್ ಅನ್ನು ಹೊಂದಿರುತ್ತದೆ. ಇದು ಟೆಸ್ಟೋಸ್ಟೆರಾನ್ ಉತ್ಪಾದನೆಯನ್ನು ನಿಯಂತ್ರಣದಲ್ಲಿಡುತ್ತದೆ. ಸ್ನಾಯುವಿನ ಕಾರ್ಯಚಟುವಟಿಕೆಗೆ ಸಹಾಯ ಮಾಡುತ್ತದೆ.