

ರಾಗಿ, ಹೆಚ್ಚಿನ ಫೈಬರ್ ಹಾಗೂ ಕ್ಯಾಲ್ಸಿಯಂನಿಂದ ಕೂಡಿರುವ ಆಹಾರ. ತೂಕ ಕಳೆದುಕೊಳ್ಳಲು ಪ್ರಯತ್ನಿಸುವವರು ಖಂಡಿತವಾಗಿಯೂ ರಾಗಿಯನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಲೇಬೇಕು. ರಾಗಿಯಲ್ಲಿ ಕ್ಯಾಲ್ಸಿಯಂ ಹಾಗೂ ಕಬ್ಬಿಣದ ಅಂಶವಿರುವುದರಿಂದ ಮಗುವಿನ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ ಹಾಗೂ ಮೂಳೆಗಳ ಬಲವರ್ಧನೆಗೂ ಇದು ಬೆಂಬಲವನ್ನು ನೀಡುತ್ತದೆ.
ರಾಗಿಯಲ್ಲಿ ಅಮೈನೋ ಆಮ್ಲಗಳಾದ ಫೆನೈಲಾಲನೈನ್, ಮೆಥಿಯೋನಿನ್, ಐಸೊಲ್ಯೂಸಿನ್ ಮತ್ತು ಲ್ಯೂಸಿನ್‌ಗಳು ಸಮೃದ್ಧವಾಗಿವೆ.
ರಾಗಿ ತೂಕ ಇಳಿಕೆಗೆ ಸಹಾಯಕ
ಹೆಚ್ಚು ಫೈಬರ್ ಆಹಾರ ಎಂದೆನಿಸಿರುವ ರಾಗಿ, ಹೆಚ್ಚು ಹಸಿವಾಗದಂತೆ ಮಾಡುತ್ತದೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ ಇದರಿಂದ ಕ್ರೇವಿಂಗ್ಸ್ ಉಂಟಾಗುವುದಿಲ್ಲ ಹಾಗೂ ತೂಕ ನಷ್ಟ ನಡೆಯುತ್ತದೆ.
ತ್ವಚೆಯ ವಯಸ್ಸಾಗುವಿಕೆಯನ್ನು ತಡೆಯುತ್ತದೆ
ರಾಗಿಯಲ್ಲಿರುವ ಮೆಥಿಯೋನಿನ್ ಮತ್ತು ಲೈಸಿನ್ ಚರ್ಮದ ವಯಸ್ಸಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಕ್ಯಾಲ್ಸಿಯಂ ಸಮೃದ್ಧವಾಗಿದೆ
ರಾಗಿಯಲ್ಲಿ ಕ್ಯಾಲ್ಸಿಯಂ ಕೂಡ ಅಧಿಕವಾಗಿದೆ, ಇದು ಮೂಳೆಗಳನ್ನು ಬಲಪಡಿಸುವಲ್ಲಿ ಪ್ರಯೋಜನಕಾರಿಯಾಗಿದೆ ಮತ್ತು ಆಸ್ಟಿಯೊಪೊರೋಸಿಸ್ ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ.
ಮಧುಮೇಹವನ್ನು ತಡೆಯುತ್ತದೆ
ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಅವುಗಳನ್ನು ಸ್ಥಿರಗೊಳಿಸುತ್ತದೆ, ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
ಜೀರ್ಣಕ್ರಿಯೆ ಮತ್ತು ತೃಪ್ತಿಗೆ ಸಹಾಯ ಮಾಡುತ್ತದೆ
ಶಿಶುಗಳ ಆಹಾರದಲ್ಲಿ ಫೈಬರ್ ಅನ್ನು ಸೇರಿಸುವುದು ಒಳ್ಳೆಯದು ಏಕೆಂದರೆ ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಮಗುವಿಗೆ ಹೊಟ್ಟೆ ತುಂಬುವಂತೆ ಮಾಡುತ್ತದೆ.
ಚರ್ಮ ಮತ್ತು ಕೂದಲನ್ನು ಸುಧಾರಿಸುತ್ತದೆ
ಮೆಥಿಯೋನಿನ್ ಆರೋಗ್ಯಕರ ಚರ್ಮ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ದಿನವೂ ರಾಗಿ ಸೇವಿಸುವುದರಿಂದ ಏನಾಗುತ್ತದೆ?
ರಾಗಿಯು ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ ಮತ್ತು ತಾವು ತೆಗೆದುಕೊಳ್ಳುವ ಆಹಾರದಲ್ಲಿ ಸೇರಿಸಿದಾಗ ಇದು ನಿಜವಾಗಿಯೂ ಸಹಾಯಕವಾಗಿದೆ. ಇದು ಕಬ್ಭಿಣ ಅಂಶ, ಕ್ಯಾಲ್ಸಿಯಂ ಮತ್ತು ಬ್ಬಿಣವನ್ನು ಹೊಂದಿರುವ ಸಂಪೂರ್ಣ ಧಾನ್ಯವಾಗಿದ್ದು ಅದು ಜೀರ್ಣಕ್ರಿಯೆ ಮತ್ತು ಇಡೀ ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ. ಅಲ್ಲದೇ ಮೂತ್ರಪಿಂಡದ ಸಮಸ್ಯೆಯಿರುವಂತವರು ರಾಗಿಯನ್ನ ನಿಯಮಿತವಾಗಿ ಸೇವಿಸಬೇಕು.