ತೂಕ ಇಳಿಸ ಬೇಕೆಂದರೆ ಈ ಎಲೆ ತಿಂದರೆ ಸಾಕು!

pear
Published on

ಪೇರಳೆ ಎಲೆಗಳಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ರೀಸಿಯಮ್, ಫಾಸ್ಪರಸ್, ಪೊಟ್ಯಾಸಿಯಮ್, ಪ್ರೊಟೀನ್ ಮುಂತಾದ ಹಲವು ಪೋಷಕಾಂಶಗಳಿವೆ. ಇದರ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನ ಆಗುತ್ತದೆ ಎಂದು ನಿಮಗೆ ಗೊತ್ತಾ? ದೇಹದ ಅನೇಕ ಸಮಸ್ಯೆಗಳಿಗೆ ಪೇರಳೆ ಎಲೆ ಔಷಧಿಯಾಗಿದೆ. ಪೇರಳೆಯ ಎಲೆ ಕೂಡ ಆರೋಗ್ಯಕ್ಕೆ ಉತ್ತಮವಾಗಿದೆ. ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೀಬೆ ಅಥವಾ ಪೇರಳೆ ಎಲೆಗಳನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.

ಪೇರಳೆ ಎಲೆ ಸೇವನೆಯಿಂದ ಜೀರ್ಣಕ್ರಿಯೆ ಸುಗಮ: ಇಂದಿನ ಆಹಾರ ಪದ್ಧತಿ ಮತ್ತು ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು ನಮ್ಮ ಜೀರ್ಣಕ್ರಿಯಿಗೆ ದೊಡ್ಡ ಸಮಸ್ಯೆ ಆಗುತ್ತಿದೆ. ಹಲವರು ತಿಂದ ಆಹಾರ ಜೀರ್ಣವಾಗದೆ ದಿನದಲ್ಲಿ ಒಂದೊಪ್ಪತ್ತಿನ ಆಹಾರವನ್ನೇ ತ್ಯಜಿಸುತ್ತಿದ್ದಾರೆ.

ವೇಟ್ ಲಾಸ್ ಆಗಬೇಕಾ?: ಇಂದಿನ ಜಂಗ್ ಫುಡ್ ಹಾಗೂ ಅತೀಯಾದ ಆಹಾರ ಸೇವನೆಯಿಂದ ಹಲವರಿಗೆ ಕೊಬ್ಬು ಕಾಣಿಸಿಕೊಳ್ಳುತ್ತಿದೆ. ಇನ್ನು ದೇಹವನ್ನು ದಂಡಿಸದೇ ಕೇವಲ ತಲೆಗೆ ಕೆಲಸ ಕೊಡುವವರ ಸಂಖ್ಯೆ ಹೆಚ್ಚುತ್ತಿದೆ. ಸದ್ಯ ಹೊಟ್ಟೆ ತುಂಬ ಊಟ ಮಾಡಿ ಲ್ಯಾಪ್‌ಟಾಪ್ ಎದುರು ಕೂತು ಕೆಲಸ ಮಾಡುವವರೇ ಹೆಚ್ಚಿದ್ದಾರೆ. ಈ ರೀತಿ ಮಾಡುವುದರಿಂದ ಸಾಮಾನ್ಯವಾಗಿ ದೇಹದಲ್ಲಿ ಕೊಬ್ಬು ಕಾಣಿಸಿಕೊಳ್ಳುತ್ತದೆ.

ಪೇರಳೆ ಎಲೆಗಳು ಹೆಚ್ಚು ಅಲರ್ಜಿ ನಿವಾರಕ ಗುಣಗಳನ್ನು ಹೊಂದಿವೆ. ಕೆಮ್ಮು ಸೀನುವಿಕೆ ಮತ್ತು ತುರಿಕೆ ಮುಂತಾದ ಅಲರ್ಜಿಯ ಲಕ್ಷಣಗಳನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ. ಮತ್ತೊಂದು ಪ್ರಮುಖ ವಿಷಯವೇನೆಂದರೆ ಪೇರಳೆ ಎಲೆಗಳನ್ನು ತೊಳೆದು ಸೇವಿಸಬೇಕು. ಹಳೆಯ ಎಲೆಗಳನ್ನು ಬಳಸಬಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net