ತೂಕ ಇಳಿಕೆಗಾಗಿ ಕಷ್ಟಪಡಬೇಡಿ... ಸೌತೇಕಾಯಿ ಸೇವಿಸಿ ಸಾಕು..! |Cucumber Weightloss

cucufinal
Published on

ಮಹಿಳೆಯರಿರಲಿ ಅಥವಾ ಪುರುಷರಿರಲಿ ಪ್ರತಿಯೊಬ್ಬರಿಗೂ ಸಹ ಪ್ರಸ್ತುತ ಸ್ಥೂಲಕಾಯತೆ ಒಂದು ಬಹುದೊಡ್ಡ ಸಮಸ್ಯೆ ಆಗಿದೆ. ಎಷ್ಟೇ ಡಯಟ್ ಮಾಡಿದರೂ, ವ್ಯಾಯಾಮ ಮಾಡಿದರೂ ಕೂಡ ತೂಕ ಕಡಿಮೆಯೇ ಆಗುತ್ತಿಲ್ಲ ಎಂದು ದೂರುವವರು ಬಹಳ ಮಂದಿ ಇದ್ದಾರೆ. ಆದರೆ, ನೀವು ಸೌತೆಕಾಯಿಯಿಂದ ಸುಲಭವಾಗಿ ತೂಕ ಇಳಿಸಬಹುದು ಎಂದು ನಿಮಗೆ ತಿಳಿದಿದೆಯೇ? ಸೌತೆಕಾಯಿಯಲ್ಲಿ ಯವೆಲ್ಲಾ ಪೋಷಕಾಂಶಗಳು ಅಡಕವಾಗಿವೆ? ಸೌತೆಕಾಯಿ ಬಳಕೆಯಿಂದ ತೂಕ ಇಳಿಕೆ ಹೇಗೆ ಸಾಧ್ಯ ಎಂದು ತಿಳಿಯೋಣ

ಸೌತೆಕಾಯಿಯಲ್ಲಿ ವಿಟಮಿನ್ ಸಿ, ವಿಟಮಿನ್ ಕೆ, ಪೊಟ್ಯಾಸಿಯಮ್, ಮೆಗ್ನಿಸಿಯಮ್, ಸತು, ಪ್ಲೇವನಾಯ್ಡಳು, ಉತ್ಕರ್ಷಣ ನಿರೋಧಕಗಳು ಮತ್ತು ರಂಜಕದಂತಹ ಹಲವು ಪೋಷಕಾಂಶಗಳು ಅಡಕವಾಗಿವೆ. ಇದು ಕಡಿಮೆ ಕ್ಯಾಲೋರಿ ಆಹಾರವಾಗಿದ್ದು, ಇದರ ಬಳಕೆಯಿಂದ ಸುಲಭವಾಗಿ ಬೇಗ ತೂಕ ಕಳೆದುಕೊಳ್ಳಬಹುದು

ಸೌತೆಕಾಯಿಯಲ್ಲಿ ಪೊಟ್ಯಾಸಿಯಮ್ ಅಂಶದಲ್ಲಿ ಸಮೃದ್ಧವಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡಿ, ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ.

ಸೌತೇಕಾಯಿಯ ಸೇವನೆ ಉರಿಯೂತವನ್ನು ಕಡಿಮೆ ಮಾಡಿ, ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್‌ನಂತಹ ದೀರ್ಘಕಾಲದ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ತೂಕ ಇಳಿಕೆಗಾಗಿ ಸೌತೆಕಾಯಿಯನ್ನು ಹೇಗೆ ಬಳಸಬೇಕು?

ನೀವು ತೂಕ ಕಡಿಮೆ ಮಾಡಿಕೊಳ್ಳಲು ಬಯಸಿದರೆ ಇದಕ್ಕಾಗಿ ಪ್ರತಿನಿತ್ಯ ಸೌತೆಕಾಯಿ ಜ್ಯೂಸ್ ಸೇವನೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಪ್ರತಿ ದಿನ ನಿಯಮಿತವಾಗಿ ಸೌತೆಕಾಯಿ ಜ್ಯೂಸ್ ತಯಾರಿಸಿ ಸೇವಿಸುವುದರಿಂದ ಆರೋಗ್ಯಕರವಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಹಾಗಾಗಿಯೇ, ತೂಕ ಇಳಿಕೆಗೆ ಇದನ್ನು ಅತ್ಯುತ್ತಮ ಮನೆಮದ್ದು ಎಂದು ಭಾವಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net