

Benefits of saying Im sorry: ಸಾಮಾನ್ಯವಾಗಿ ಎಲ್ಲರ ಜೀವನವೂ ಸ್ನೇಹಿತರು, ಕುಟುಂಬಸ್ಥರು ಹಾಗೂ ಸಂಬಂಧಿಕರಿಂದ ತುಂಬಿರುತ್ತದೆ. ಆದರೆ ಕೆಲವು ಸಣ್ಣ-ಪುಟ್ಟ ತಪ್ಪುಗಳಿಂದ ಸಂಬಂಧ ಹಾಳಾಗಬಹುದು. ಆದರೆ ನಾವು ಒಂದೇ ಒಂದು ಬಾರಿ ಕ್ಷಮಿಸಿ ಅಥವಾ ಕ್ಷಮಿಸು ಎಂದು ಹೇಳುವ ಮೂಲಕವಾಗಿ ಅದನ್ನು ಸರಿ ಪಡಿಸಿಕೊಳ್ಳಬಹುದು. ಈ ಕುರಿತಾಗಿ ನಾವು ಇಂದು ತಿಳಿದುಕೊಳ್ಳೋಣ...
ನಿಜವಾದ ಕ್ಷಮೆಯಾಚನೆ ಎಂದರೆ ಅದನ್ನು ಸಮರ್ಥಿಸಿಕೊಳ್ಳದೆ ನಮ್ಮ ತಪ್ಪನ್ನು ಒಪ್ಪಿಕೊಳ್ಳುವುದಾಗಿದೆ.
ಕ್ಷಮೆಯಾಚನೆಗಳು ಪ್ರಾಮಾಣಿಕವಾಗಿದ್ದರೆ ಸಂಬಂಧದಲ್ಲಿ ನಂಬಿಕೆಯನ್ನು ಪುನರ್ನಿರ್ಮಿಸಲು ಸಹಾಯ ಮಾಡುತ್ತವೆ. ಹೀಗಾಗಿ ತಪ್ಪು ಇದ್ದರೆ ಕ್ಷಮೆ ಕೇಳಲು ಹಿಂಜರಿಯದೆ ಇರಿ. ಕ್ಷಮೆ ನಿಮ್ಮ ಸಂಬಂಧವನ್ನು ಹಾಳು ಮಾಡುತ್ತದೆ ಎಂದಾದರೆ ಯಾಕೆ ಕೇಳಬಾರದು ಅಲ್ಲವೇ....
ಕ್ಷಮೆಯಾಚಿಸುವಲ್ಲಿಯೂ ಹಂತಗಳಿವೆ. ಮೊದಲು, ನಾವು ಮಾಡಿದ ತಪ್ಪಿಗೆ ವಿಷಾದಿಸುತ್ತೇವೆ ಎಂದು ಇತರ ವ್ಯಕ್ತಿಗೆ ಸ್ಪಷ್ಟಪಡಿಸಬೇಕು. ನಂತರ, ಆ ತಪ್ಪಿಗೆ ನಾವು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಬೇಕು. ಅಂತಹ ತಪ್ಪು ಮತ್ತೆ ಸಂಭವಿಸುವುದಿಲ್ಲ ಎಂಬ ಭರವಸೆಯನ್ನು ನೀಡುವುದು ಸಹ ಮುಖ್ಯವಾಗಿದೆ. ಜೊತೆಗೆ, ತಪ್ಪು ಏಕೆ ಸಂಭವಿಸಿತು ಎಂಬುದನ್ನು ನಾವು ಸರಳವಾಗಿ ವಿವರಿಸಬೇಕಾಗಿದೆ.
ಪ್ರಾಮಾಣಿಕ ಕ್ಷಮೆಯಾಚನೆಯು ಇನ್ನೊಬ್ಬ ವ್ಯಕ್ತಿಗೆ ಕ್ಷಮಿಸಲು ಸುಲಭಗೊಳಿಸುತ್ತದೆ, ಏಕೆಂದರೆ ಅದು ಪಶ್ಚಾತ್ತಾಪ ಮತ್ತು ತಿದ್ದುಪಡಿ ಮಾಡುವ ಇಚ್ಛೆಯನ್ನು ಪ್ರದರ್ಶಿಸುತ್ತದೆ.
ಕ್ಷಮೆ ಕೇಳುವುದರ ಜೊತೆಗೆ, ಇತರರು ಕ್ಷಮೆ ಕೇಳಿದಾಗ ಅವರನ್ನು ಪ್ರಾಮಾಣಿಕವಾಗಿ ಕ್ಷಮಿಸುವ ಗುಣವೂ ನಮ್ಮಲ್ಲಿರಬೇಕು. ಇಲ್ಲದಿದ್ದರೆ, ಆ ಘಟನೆ ನಮ್ಮ ಮನಸ್ಸಿನಲ್ಲಿ ಉಳಿಯುತ್ತದೆ ಮತ್ತು ನಮಗೆ ಮತ್ತೆ ಮತ್ತೆ ನೋವುಂಟು ಮಾಡುತ್ತದೆ.
ಕ್ಷಮೆಯ ಗುಣವು ಹೃದಯವನ್ನು ಹಗುರಗೊಳಿಸುವುದಲ್ಲದೆ, ಬಂಧಗಳನ್ನು ಬಲಪಡಿಸುತ್ತದೆ. ನಾವು ಅವರ ಸ್ಥಾನದಲ್ಲಿ ನಮ್ಮನ್ನು ಕಲ್ಪಿಸಿಕೊಂಡರೆ, ಅವರನ್ನು ಕ್ಷಮಿಸುವುದು ಸುಲಭವಾಗುತ್ತದೆ.
ಒಮ್ಮೆ ನಾವು ಕ್ಷಮಿಸಿದ ನಂತರ, ಆ ತಪ್ಪನ್ನು ಮತ್ತೆ ನೆನಪಿಸಿಕೊಳ್ಳದೆ ನಾವು ಮುಂದುವರಿಯುತ್ತೇವೆ ಮತ್ತು ಬಂಧಗಳು ಶಾಶ್ವತವಾಗಿ ಉಳಿಯುತ್ತವೆ.
ಕ್ಷಮೆಯಾಚಿಸುವ ವ್ಯಕ್ತಿ ಮತ್ತು ಕ್ಷಮೆಯನ್ನು ಸ್ವೀಕರಿಸುವವರು ಇಬ್ಬರೂ ಕೋಪ ಮತ್ತು ಅಸಮಾಧಾನದಂತಹ ನಕಾರಾತ್ಮಕ ಭಾವನೆಗನ್ನು ಒಂದು ಕ್ಷಮೆ ಪರಿಹರಿಸಿ ಉತ್ತಮ ಸಂಬಂಧವನ್ನು ನಿಮಗೆ ನೀಡಬಹುದಾಗಿದೆ.
ತಪ್ಪುಗಳನ್ನು ಒಪ್ಪಿಕೊಂಡು ಕ್ಷಮೆಯಾಚಿಸುವುದು ವೈಯಕ್ತಿಕ ಬೆಳವಣಿಗೆಯ ಸಂಕೇತವಾಗಬಹುದು, ನಮ್ರತೆ ಮತ್ತು ತಪ್ಪುಗಳಿಂದ ಹೊಸ ಪಾಠ ಕಲಿತಿರುವುದನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ.
ಕ್ಷಮೆಯಾಚಿಸುವ ಮತ್ತು ಸಂಘರ್ಷವನ್ನು ಪರಿಹರಿಸುವ ಕ್ರಿಯೆಯು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಭಾವನಾತ್ಮಕ ಹಾಗೂ ನೆಮ್ಮದಿಯನ್ನು ನೀಡುತ್ತದೆ.