'ಮಟನ್ ಕಾಲು ​​ಸೂಪ್' ತ್ವಚೆಯ ಕಾಂತಿ, ಮೂಳೆಗೆ ಶಕ್ತಿ ನೀಡಲು ಬೆಸ್ಟ್‌ ಮನೆಮದ್ದು.. Mutton Leg Soup

MuttonLegSoup
Published on
Mutton Leg Soup:  ಮಟನ್ ಕಾಲು ಸೂಪ್ ಅಂದ್ರೆ ಕುರಿ ಅಥವಾ ಮೇಕೆ ಕಾಲಿನಿಂದ ತಯಾರಿಸಿದ ಒಂದು ಬಗೆಯ ಸೂಪ್. ಇದು ಆರೋಗ್ಯಕ್ಕೆ ಒಳ್ಳೆಯದು ಮತ್ತು ರುಚಿಕರ ಕೂಡ ಇರುತ್ತದೆ, ಮಟನ್ ಲೆಗ್ ಸೂಪ್ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಕುರಿ ಅಥವಾ ಮೇಕೆಯಿಂದ ತಯಾರಿಸಿದ ಮಟನ್ ಕಾಲು ಸೂಪ್ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಪ್ರೋಟೀನ್​ಗಳು, ಕಾಲಜನ್, ವಿಟಮಿನ್ ಬಿ, ವಿಟಮಿನ್ ಎ, ವಿಟಮಿನ್ ಸಿ ಮತ್ತು ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸತುವುಗಳಂತಹ ಪ್ರಮುಖ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇದರ ಕಾಲಜನ್ ಅಂಶವು ಕೀಲು ನೋವು ನಿವಾರಣೆಗೆ ತುಂಬಾ ಪ್ರಯೋಜನಕಾರಿಯಾಗಿದೆ.

'ಮಟನ್ ಕಾಲು ​​ಸೂಪ್' ಕುಡಿಯುವುದರಿಂದ ಇರುವ ಪ್ರಯೋಜಗಳು:

ಕುರಿಮರಿ ಅಥವಾ ಮೇಕೆ ಕಾಲುಗಳನ್ನು ಹಾಕಿ ಸೂಪ್​ ಮಾಡಿ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಆರೋಗ್ಯ ಸುಧಾರಿಸುತ್ತದೆ.

Mutton leg Soup

ಕುರಿ ಅಥವಾ ಮೇಕೆ ಕಾಲುಗಳಲ್ಲಿ ಕಾಲಜನ್ ಅಧಿಕವಾಗಿರುತ್ತದೆ. ಆದ್ದರಿಂದ, ಇದು ಲೂಬ್ರಿಕಂಟ್ ಆಗಿ ಕೆಲಸ ಮಾಡುತ್ತದೆ. ಈ ಸೂಪ್ ಅನ್ನು ಪ್ರತಿದಿನ ಕುಡಿಯುವುದರಿಂದ ಕೀಲುಗಳು ಮತ್ತು ಮೂಳೆಗಳು ಬಲಗೊಳ್ಳುವುದಲ್ಲದೆ, ಚರ್ಮದ ಸೌಂದರ್ಯವೂ ಸುಧಾರಿಸುತ್ತದೆ.

ಮಟ್ಟನ್​ ಕಾಲು ಸೂಪ್​​ ಕರುಳಿನ ಕಾರ್ಯ ಮತ್ತು ಯಕೃತ್ತಿನ ಕಾರ್ಯಕ್ಕೂ ತುಂಬಾ ಪ್ರಯೋಜನಕಾರಿ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.

MuttonLegSoup

ಮೂಳೆ ಮುರಿತಕ್ಕೊಳಗಾದಾಗ ಇದನ್ನು ತೆಗೆದುಕೊಳ್ಳುತ್ತಾರೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕೀಲುಗಳಿಗೆ ಶಕ್ತಿಯನ್ನು ನೀಡುತ್ತದೆ, ಇದು ಮುರಿದ ಮೂಳೆಗಳಿಂದ ಜನರು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.

ಈ ಸೂಪ್‌ನ ಹಲವು ಪ್ರಯೋಜನಗಳ ಹೊರತಾಗಿಯೂ, ಹೃದಯ ಸಂಬಂಧಿತ ಸಮಸ್ಯೆಗಳು ಮತ್ತು ಬೊಜ್ಜು ಇರುವವರು ಇದನ್ನು ಸೇವಿಸಬಾರದು ಎಂದು ಹೇಳಲಾಗುತ್ತದೆ. ಇದನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಕನಿಷ್ಠ 10 ಗಂಟೆಗಳ ಕಾಲ ಕಡಿಮೆ ಉರಿಯಲ್ಲಿ ಕುದಿಸಬೇಕು ಎಂದು ಸಹ ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಮಾತ್ರ ದೇಹಕ್ಕೆ ಉತ್ತಮ ಪೋಷಕಾಂಶಗಳು ದೊರೆಯುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net