

ಬೆಂಗಳೂರು: ಪ್ರತಿಯೊಬ್ಬರೂ ತಾವು ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಇದಕ್ಕಾಗಿ ಜನರು ಅನೇಕ ದುಬಾರಿ ಉತ್ಪನ್ನಗಳನ್ನು ಸಹ ಬಳಸುತ್ತಾರೆ. ಆದರೆ ಹದಗೆಡುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಜನರು ಚಿಕ್ಕ ವಯಸ್ಸಿನಲ್ಲಿಯೇ ಮುಖದ ಸುಕ್ಕುಗಳಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ವಯಸ್ಸು ಹೆಚ್ಚಾದಂತೆ ಕಾಣುತ್ತಾರೆ.
ಆದರೆ ಮುಖದ ಸುಕ್ಕು ಹೋಗಲಾಡಿಸಲು ಸಹ ಅನೇಕ ಮನೆಮದ್ದುಗಳಿವೆ. ಈ ಮೂಲಕ ನೀವು ಸುಕ್ಕುಗಳ ಸಮಸ್ಯೆಯನ್ನು ಹೋಗಲಾಡಿಸಬಹುದು. ವಿಶೇಷವಾಗಿ ಈ ಸಮಸ್ಯೆಯ ನಿವಾರಣೆಗೆ ಮೊಸರು ತುಂಬಾ ಉಪಯುಕ್ತವಾಗಿದೆ. ಹೌದು, ಮೊಸರಿನ ಸಹಾಯದಿಂದ, ನೀವು ಮುಖದ ಸುಕ್ಕುಗಳನ್ನು ಕಡಿಮೆ ಮಾಡಬಹುದು. ನೀವು ಮಾಡಬೇಕಾಗಿರುವುದಿಷ್ಟೇ... ಒಂದು ಚಮಚ ಮೊಸರಿಗೆ ಒಂದು ಚಮಚ ಉದ್ದಿನಬೇಳೆ ಪುಡಿಯನ್ನು ಬೆರೆಸಿ ಫೇಸ್ ಪ್ಯಾಕ್ ಮಾಡಿಕೊಳ್ಳಬೇಕು.
ಈಗ ಈ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ, ಅದು ಒಣಗುವವರೆಗೆ ಬಿಡಿ..ಒಣಗಿದ ನಂತರ, ಒದ್ದೆಯಾದ ಹತ್ತಿಯಿಂದ ಮುಖವನ್ನು ಸ್ವಚ್ಛಗೊಳಿಸಿ. ಇದರಿಂದ ಅದ್ಭುತ ಪರಿಹಾರ ಸಿಗುತ್ತದೆ. ಅಷ್ಟೇ ಅಲ್ಲ, ಕೆಲವೇ ದಿನಗಳಲ್ಲಿ ನಿಮ್ಮ ಮುಖದ ಮೇಲಿನ ಸುಕ್ಕುಗಳು ಮಾಯವಾಗುತ್ತವೆ.