ದಿ ಝೀರೋ ಅನ್ನೋ 3-ಡಿ ಮೋಡ್​ ಫುಟ್​ವೇರ್​..2025ಕ್ಕೆ ಬರ್ತಿದೆ ಹೊಸ ಶೂ.. ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ...! | The Zero, Shoes Trends |

3d final
Published on

ಆನ್​ಲೈನ್​ ಶಾಪಿಂಗ್​ ವೆಬ್​ಸೈಟ್​ ಹಾಗು ಲಕ್ಷೂರಿ ಬ್ರ್ಯಾಂಡ್​ಗಳಲ್ಲಿ ಸಿಗುವಂತಹ ವಿಚಿತ್ರ ಬಟ್ಟೆ, ಶೂ ಹೀಗೆ ಸಾಕಷ್ಟು ಹೊಸ ಐಟಮ್​ಗಳನ್ನ ನಾವೆಲ್ಲರೂ ನೋಡಿರ್ತೇವೆ. ಅವುಗಳಲ್ಲಿ ಕೆಲವು ವಸ್ತುಗಳು ನೋಡುಗರಿಗೆ ಇಂಥಹ ವಸ್ತುಗಳು ಸಿಗುತ್ತವೆಯೇ ಎಂಬ ಪ್ರಶ್ನೆಯನ್ನ ಹುಟ್ಟುಹಾಕುತ್ತೆ.

ಹರಿದು ಚಿಂದಿಯಾಗಿರೋ ಜೀನ್ಸ್​ ದುಬಾರಿ ಬ್ರ್ಯಾಂಡೆಡ್​ ಜೀನ್ಸ್​ ಅಂತೆ. ಆದ್ರೆ ಇವುಗಳಿಗೆ ಬೇರೆ ರೇಟ್​ ಫಿಕ್ಸ್​ ಮಾಡಿ ಅದನ್ನ ಮಾರಾಟ ಮಾಡಿ, ಟೋಪಿ ಹಾಕೋ ರೀತಿ ಮಾಡ್ತಾ ಇದ್ದಾವೆ ಕೆಲವು ಆನ್​ಲೈನ್​ ವೆಬ್​ಸೈಟ್​ಗಳು. ಇದೀಗ ಆನ್ಲೈನ್​ನಲ್ಲಿ ಸಿಗುತ್ತಿರುವ ಶೂ ನೋಡುಗರ ಹುಬ್ಬೇರಿಸಿದೆ. ಯಸ್​, ಈ ಶೂ ನೋಡಿ..ಇದನ್ನ ಶೂ ಅನ್ಬೇಕಾ ಬೇಡ್ವಾ ಅನಿಸುತ್ತೆ.

ಶೂ ಥರಾ ಇರೋ ಈ ಫುಟ್​ವೇರ್​ ಬಗ್ಗೆ ಹೇಳ್ತೀವಿ ಕೇಳಿ. ಇದು ಫೇಮಸ್​​ ಫ್ಯಾಷನ್​ ಬ್ರ್ಯಾಂಡ್​ ಬ್ಯಾಲೆನ್ಸಿಯಾಗಾ ಪರಿಚಯಿಸಿರೊ ದಿ ಝೀರೋ ಅನ್ನೋ 3-ಡಿ ಮೋಡ್​ ಫುಟ್​ವೇರ್​.

ಶೂನ ನೀವು ಧರಿಸಿದ್ರೆ ನಿಮಗೆ ಯಾವುದೇ ರೀತಿ ಶೂ ಧರಿಸಿರೋ ಫೀಲ್​ ಇರಲ್ಲ. ಬದಲಾಗಿ ನೀವು ಬರೀ ಕಾಲಲ್ಲಿ ನಡೆಯೋ ಫೀಲ್ ಕೊಡುತ್ತಂತೆ. ಜೊತೆಗೆ EVA ಫೋಮ್​ ಟೆಕ್ನಾಲಜಿ ಹೊಂದಿದ್ಯಂತೆ. ಅಂದ್ರೆ ಬರೀಗಾಲಲ್ಲಿ ನಡೆಯೋ ಫಿಲ್ ಕೊಟ್ರೂ ನೀವು ಯಾವುದೇ ಕಲ್ಲು ಮುಳ್ಳುಗಳನ್ನು ತುಳಿದ್ರೂ.. ನಿಮಗೆ ಅದರ ಅನುಭವ ಉಂಟಾಗೋದಿಲ್ಲ.

ಆದ್ದರಿಂದ ನೀವು ಈ ಶೂನ ಧರಿಸಿದ್ರೂ ಕೂಡ ಬರೀ ಸೋಲ್​ ಹಾಕಿಕೊಂಡು ಓಡಾಡೋ ಫೀಲ್​ ಸಿಗಲಿದೆ.

ಶೂನ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ..!

ಬ್ಯಾಲೆನ್ಸಿಯಾಗಾ ತಂದಿರೋ ಈ ಝೀರೋ ಶೂನ ಬೆಲೆ ಝೀರೋಗಳಿಗೆ ಸೀಮಿತವಲ್ಲ. ಇದರ ಮಾರಕಟ್ಟೆ ದರ ಬರೋಬ್ಬರಿ 450 ಡಾಲರ್‌ಗಳಷ್ಟಿದೆ. ಭಾರತದ ರೂಪಾಯಿಗೆ ಅದರ ಬೆಲೆ ಹೇಳುವುದಾದರೆ 40,000 ಸಾವಿರದಷ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net