ಬೆಂಗಳೂರಿನಲ್ಲಿ ಔಷಧಿ ವಿತರಿಸಲು 'ಡ್ರೋನ್' ಸಂಚಾರ ಆರಂಭ! Drone

drone
Published on

Drone | ಬೆಂಗಳೂರಿನಲ್ಲಿರುವ ಜನರು ನಿತ್ಯ ಕಿರಿ-ಕಿರಿ ಉಂಟು ಮಾಡುವ ಟ್ರಾಫಿಕ್ ಸಮಸ್ಯೆ ಮಧ್ಯೆ ಸಿಲುಕಿಕೊಂಡಿದ್ದಾರೆ. ಇನ್ನೂ ಈ ಟ್ರಾಫಿಕ್​ ಸಮಸ್ಯೆ ನಡುವೆ ರೋಗಿಗಳು ತಮ್ಮ ಆರೋಗ್ಯ ಸಮಸ್ಯೆಯನ್ನು ಸರಿಪಡಿಸಲು ಆಗಾಗ ಆಸ್ಪತ್ರೆಗಳಿಗೆ ಭೇಟಿ ನೀಡುವುದು ಕಷ್ಟವಾಗಿದೆ. ಹಾಗಾಗಿ ಔಷಧಿಗಳು ಮತ್ತು ತಕ್ಷಣಕ್ಕೆ ರೋಗಿಗೆ ಬೇಕಾಗುವ ಪರಿಕರಗಳನ್ನು ತಲುಪಿಸಲು ನಗರದ ಮೂರು ಆಸ್ಪತ್ರೆಗಳು ಡ್ರೋನ್‌ಗಳನ್ನು ಬಳಸುವ ಯೋಜನೆಯನ್ನು ಘೋಷಿಸಿದ ಸುಮಾರು ಮೂರು ವರ್ಷಗಳ ನಂತರ, ಬೆಂಗಳೂರು ತನ್ನ ಮೊದಲ ವಾಣಿಜ್ಯ ಡ್ರೋನ್ ವಿತರಣಾ ಸೇವೆಯನ್ನು ಆರಂಭಿಸಿದೆ.

ಕನಕಪುರ ರಸ್ತೆ ಮತ್ತು ಕೋಣನಕುಂಟೆ ರಸ್ತೆ ಭಾಗದಲ್ಲಿ ಈಗಾಗಲೇ ಈ ಸೇವೆ ಲಭ್ಯವಿದೆ ಎಂದು ದೆಹಲಿ ಮೂಲದ ಸ್ಕೈ ಏರ್‌ನ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಂಕಿತ್ ಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನ ಸ್ಥಳೀಯ ನಿವಾಸಿಗಳು ಕೇವಲ 7 ನಿಮಿಷಗಳಲ್ಲಿ ಡ್ರೋನ್​​ ಮುಖಾಂತರ ಈ ಸೇವೆಯನ್ನು ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಡ್ರೋನ್‌ಗಳು ಮತ್ತು ಏರ್ ಟ್ಯಾಕ್ಸಿಗಳ ಬಗ್ಗೆ ಹಲವು ವರ್ಷಗಳಿಂದ ಚರ್ಚೆಗಳಿದ್ದರೂ, ಗುರುಗ್ರಾಮ್ ಅತಿ ವೇಗದ ವಾಣಿಜ್ಯ ಡ್ರೋನ್ ವಿತರಣಾ ಸೇವೆಯನ್ನು ಪ್ರಾರಂಭಿಸಿದ ಮೊದಲ ನಗರವಾಯಿತು. ಹಾಗಾಗಿ ಡ್ರೋನ್ ಸೇವೆಯಲ್ಲಿ ಗುರುಗ್ರಾಮ್ ನಗರ ಮೊದಲ ಸ್ಥಾನದಲ್ಲಿದೆ ಎಂದಿದ್ದಾರೆ. ಇದು 15 ನಿಮಿಷಗಳ ರಸ್ತೆ ಪ್ರಯಾಣಕ್ಕೆ ಹೋಲಿಸಿದರೆ ಕೇವಲ ಮೂರರಿಂದ ನಾಲ್ಕು ನಿಮಿಷಗಳಲ್ಲಿ 7.5 ಕಿ.ಮೀ ದೂರವನ್ನು ಡ್ರೋನ್​ ತಲುಪಿತು. ಗುರುಗ್ರಾಮ್​ನಲ್ಲಿ ಕಳೆದ ಒಂದು ವರ್ಷದಲ್ಲಿ ಸುಮಾರು 1 ಮಿಲಿಯನ್​ನಷ್ಟು ಔಷಧ ಪರಿಕರಗಳನ್ನು ವಿತರಿಸಲಾಗಿದೆ. ನಮ್ಮ ಕೆಲಸಕ್ಕೆ ಹೆಚ್ಚು ಶ್ಲಾಘನೆ ವ್ಯಕ್ತವಾಗಿದ್ದರಿಂದ ಈ ಸೇವೆಯನ್ನು ಬೆಂಗಳೂರಿಗೆ ವಿಸ್ತರಿಸಲು ಅವಕಾಶ ಸಿಕ್ಕಿತು. ಬೆಂಗಳೂರಿನಲ್ಲಿ ಎಲ್ಲವೂ ನಾವು ಅಂದುಕೊಂಡಂತೆ ಆದರೆ, ನಾವು ಶೀಘ್ರದಲ್ಲೇ ಸೇವೆ ಸಲ್ಲಿಸುತ್ತಿರುವ ಪ್ರದೇಶಗಳಿಗೆ ಬನ್ನೇರುಘಟ್ಟ ರಸ್ತೆಯನ್ನು ಸೇರಿಸುತ್ತೇವೆ ಎಂದು ಅಂಕಿತ್ ಕುಮಾರ್ ತಿಳಿಸಿದ್ದಾರೆ.

drone
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net