ಡೇಟಿಂಗ್ ಜಗತ್ತಿಗೆ 'ಜ್ಯೋತಿಷ್ಯ' ಎಂಟ್ರಿ!; ಯುವಜನತೆಗಾಗಿ 'ಆಸ್ಟ್ರಾಲಜಿ ಮೋಡ್' ಪರಿಚಯಿಸಿದ ಈ ಅಪ್ಲಿಕೇಶನ್
Astrology enters the dating world!
Published on:
Copied
Follow Us
Astrology enters the dating world:ಭಾರತದಲ್ಲಿ ದಿನದಿಂದ ದಿನಕ್ಕೆ ಡೇಟಿಂಗ್ ಟ್ರೆಂಡ್ ಬದಲಾಗುತ್ತಿದೆ. ನನಗೆ ಬೇಕಾದದ್ದನ್ನು ಮಾಡುತ್ತೇನೆ ಎನ್ನುವ ನೇರ ನುಡಿಯ ಟ್ರೆಂಡ್ ಶುರುವಾಗಿದೆ. ಯಾವುದೇ ಗೊಂದಲಗಳಿಲ್ಲದೆ, ತಮ್ಮ ಇಷ್ಟಾನುಕೂಲಕ್ಕೆ ಮ್ಯಾಚ್ ಆಗುವವರನ್ನಷ್ಟೇ ಯುವಜನತೆ ಹುಡುಕುತ್ತಿದ್ದಾರೆ.
ಸಿಂಗಲ್ಸ್ ಯುವಜನತೆಯ ಈ ಹೊಸ ಟ್ರೆಂಡ್‌ಗೆ ತಕ್ಕಂತೆ, ಜಗತ್ತಿನ ಜನಪ್ರಿಯ ಡೇಟಿಂಗ್ ಆ್ಯಪ್ ಟಿಂಡರ್ ಭಾರತದಲ್ಲಿ ಅತ್ಯಂತ ಕುತೂಹಲಕಾರಿ 'ಆಸ್ಟ್ರಾಲಜಿ ಮೋಡ್' ಅನ್ನು ಪರಿಚಯಿಸಿದೆ. ಕೇವಲ ಫೋಟೋ ಅಥವಾ ಬಯೋ ನೋಡಿ ರೈಟ್ ಸ್ವೈಪ್ ಮಾಡುವ ಬದಲು, ಇಬ್ಬರ ವ್ಯಕ್ತಿತ್ವ, ಗುಣಲಕ್ಷಣಗಳು ಎಷ್ಟರಮಟ್ಟಿಗೆ ಹೊಂದಾಣಿಕೆಯಾಗುತ್ತದೆ ಎಂಬುದನ್ನು ಜ್ಯೋತಿಷ್ಯದ ಮೂಲಕ ಅರಿಯಲು ಇದು ಸಹಾಯ ಮಾಡುತ್ತದೆ.
ಏನು ಹೇಳುತ್ತಿದೆ ಟಿಂಡರ್ ಸಮೀಕ್ಷೆ?
ಟಿಂಡರ್‌ನ 'Year in Swipe™ 2025' ವರದಿಯ ಪ್ರಕಾರ, ಯುವಜನತೆ ಈಗ ದೀರ್ಘಕಾಲಿಕ ಹಾಗೂ ಅರ್ಥಪೂರ್ಣ ಸಂಬಂಧಗಳನ್ನು ಬಯಸುತ್ತಿದ್ದಾರೆ. ಶೇ. 64ರಷ್ಟು ಮಂದಿ ಡೇಟಿಂಗ್‌ಗೆ 'ಭಾವನಾತ್ಮಕ ಪ್ರಾಮಾಣಿಕತೆ' ಅತ್ಯಗತ್ಯ ಎಂದಿದ್ದಾರೆ.
ಹಾಗೆಯೇ, ಶೇ. 73ರಷ್ಟು ಮಂದಿ, "ಯಾರ ಜೊತೆ ನಾವು ನಮ್ಮ ನೈಜ ವ್ಯಕ್ತಿತ್ವದೊಂದಿಗೆ ಇರಲು ಸಾಧ್ಯವೋ, ಅವರನ್ನು ಮಾತ್ರ ನಾವು ಇಷ್ಟಪಡುತ್ತೇವೆ" ಎಂದು ಹೇಳಿದ್ದಾರೆ. ವಿಶೇಷವೆಂದರೆ, ಸಿಂಹ, ವೃಶ್ಚಿಕ, ತುಲಾ, ಕುಂಭ, ಮೇಷ ಮತ್ತು ಕನ್ಯಾ ರಾಶಿಯವರ ಪ್ರೊಫೈಲ್‌ಗಳು ಟಿಂಡರ್‌ನಲ್ಲಿ ಅತಿ ಹೆಚ್ಚು ಕಂಡುಬಂದಿವೆ.
ಹೇಗೆ ಕಾರ್ಯನಿರ್ವಹಿಸುತ್ತದೆ ಈ 'ಆಸ್ಟ್ರಾಲಜಿ ಮೋಡ್'?
ಬಳಕೆದಾರರು ಈ ಮೋಡ್‌ನಲ್ಲಿ ತಮ್ಮ ಹುಟ್ಟಿದ ದಿನಾಂಕ, ಸ್ಥಳ ಮತ್ತು ಸಮಯವನ್ನು ನಮೂದಿಸಿದರೆ ಸಾಕು, ಈ ಫೀಚರ್ ಅವರ ಜ್ಯೋತಿಷ್ಯದ 'ಬಿಗ್ 3' ಚಿಹ್ನೆಗಳನ್ನು ಬಿಚ್ಚಿಡುತ್ತದೆ:
* ಸನ್ ಸೈನ್: ಇದು ವ್ಯಕ್ತಿಯ ಮೂಲ ವ್ಯಕ್ತಿತ್ವವನ್ನು ತಿಳಿಸುತ್ತದೆ.
* ಮೂನ್ ಸೈನ್: ವ್ಯಕ್ತಿಯ ಭಾವನಾತ್ಮಕ ಪ್ರವೃತ್ತಿ ಹೇಗಿದೆ ಎಂಬುದನ್ನು ವಿವರಿಸುತ್ತದೆ.
* ರೈಸಿಂಗ್ ಸೈನ್: ಸಮಾಜ ಅಥವಾ ಇತರರು ಇವರನ್ನು ಹೇಗೆ ನೋಡುತ್ತಾರೆ ಎಂಬುದನ್ನು ಸೂಚಿಸುತ್ತದೆ.
ಇದರ ಜೊತೆಗೆ 'ವ್ಯೂವ್ ಕಾಂಪಾಟಿಬಿಲಿಟಿ' ಎನ್ನುವ ಆಯ್ಕೆಯೂ ಇದ್ದು, ಇದರಲ್ಲಿ 'ಕಾಸ್ಮಿಕ್ ಸ್ಪಾರ್ಕ್' (ಸಂವಹನ, ಆಕರ್ಷಣೆ) ಮತ್ತು 'ಎಲಿಮೆಂಟ್ ಮಿಕ್ಸ್' (ಬೆಂಕಿ, ಭೂಮಿ, ಗಾಳಿ, ನೀರು) ಆಧಾರದ ಮೇಲೆ ಇಬ್ಬರ ನಡುವಿನ ಹೊಂದಾಣಿಕೆಯನ್ನು ಅಳೆಯಬಹುದು. ಇದು ಪರಸ್ಪರ ಮಾತುಕತೆ ಶುರು ಮಾಡಲು ಅತ್ಯುತ್ತಮ ದಾರಿಯಾಗಿದೆ.
ಇದೀಗ ಟಿಂಡರ್‌ನ ಹೊಸ ಫೀಚರ್ ಅನ್ನು ಪರಿಚಯಿಸಿದ್ದು, ಇದು ಯುವ ಭಾರತದ ಡೇಟಿಂಗ್ ಶೈಲಿಯನ್ನು ಮೇಲ್ನೋಟದ ಆಕರ್ಷಣೆಯಿಂದಾಚೆಗೆ, ಭಾವನಾತ್ಮಕ ಮತ್ತು ವ್ಯಕ್ತಿತ್ವದ ಹೊಂದಾಣಿಕೆಯೆಡೆಗೆ ಕೊಂಡೊಯ್ಯಲಿದೆ.