

ಸಾಮಾನ್ಯವಾಗಿ ಎಲ್ಲರಿಗೂ ನುಗ್ಗೆಯ ಬಗ್ಗೆ ಗೊತ್ತಿರುತ್ತದೆ. ಅಡುಗೆಯಲ್ಲಿ ನುಗ್ಗೆಕಾಯಿ ಬಳಸಿದರೂ ನುಗ್ಗೆಸೊಪ್ಪಿನ ಬಳಕೆ ಕಡಿಮೆ. ಬಹುತೇಕ ಹಳ್ಳಿಗಳಲ್ಲಿ ನುಗ್ಗೆಮರವವನ್ನು ಕಾಣಬಹುದು. ವಿಟಮಿನ್ ಮಾತ್ರೆಗಳಿಗಿಂತ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವುದು ನುಗ್ಗೆಸೊಪ್ಪು.
ನಿಂಬೆ, ಕಿತ್ತಳೆಹಣ್ಣುಗಳಿಗಿಂತ ಏಳು ಪಟ್ಟು ಅಧಿಕ ಸಿ ವಿಟಮಿನ್ ನುಗ್ಗೆಸೊಪ್ಪಿನಲ್ಲಿದೆ. ಕ್ಯಾರೆಟ್ಗಿಂತ ನಾಲ್ಕು ಪಟ್ಟು ಅಧಿಕ ಪ್ರಮಾಣದಲ್ಲಿ ಎ ಜೀವಸತ್ವವಿದೆ. ಹಾಲಿನಲ್ಲಿರುವ ಕ್ಯಾಲ್ಸಿಯಂಗಿಂತ ನಾಲ್ಕು ಪಟ್ಟು ಅಧಿಕ ಕ್ಯಾಲ್ಸಿಯಂ ಇದೆ. ಪಾಲಕ್ ಸೊಪ್ಪಿಗಿಂತ ಆರು ಪಟ್ಟು ಅಧಿಕ ಕಬ್ಬಿಣದ ಅಂಶ, ಮೊಟ್ಟೆಯ ಬಿಳಿ ಭಾಗಕ್ಕಿಂತ ಎರಡು ಪಟ್ಟು ಅಧಿಕ ಪ್ರೋಟೀನ್, ಬಾಳೆಹಣ್ಣಿಗಿಂತ ಮೂರು ಪಟ್ಟು ಅಧಿಕ ಪೊಟ್ಯಾಷಿಯಂ ಜೀವಸತ್ವಗಳು ನುಗ್ಗೆಸೊಪ್ಪಿನಲ್ಲಿವೆ.
ನುಗ್ಗೆಮರದ ಸೊಪ್ಪು, ಹೂವು, ಕಾಯಿ ಎಲ್ಲವೂ ಒಂದಲ್ಲ ಒಂದು ರೀತಿ ಪ್ರಯೋಜನಕಾರಿ. ಇದನ್ನು ಸಾಂಬಾರ್, ಸೂಪ್, ಪಲ್ಯ ಅಥವಾ ಜ್ಯೂಸ್ ಮಾಡಿಯೂ ಸೇವಿಸಬಹುದು.